ಬೆಂಗಳೂರು: ಮೋಹಕ ತಾರೆ ರಮ್ಯಾ ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನ ಮೊದಲ ಸಿನಿಮಾದ ಟೈಟಲ್ ವಿಜಯದಶಮಿ ಹಬ್ಬದಂದು (ಅ.5 ರಂದು) ರಿವೀಲ್ ಆಗಿದೆ.
ಗಣೇಶ ಹಬ್ಬದಂದು ರಮ್ಯಾ ಅವರು ತಮ್ಮ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಆರಂಭಿಸಿದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಆ್ಯಪಲ್ ಬಾಕ್ಸ್ ನಲ್ಲಿ ಎರಡು ಚಿತ್ರ ಶೀಘ್ರದಲ್ಲಿ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದ್ದರು. ಈಗ ಮೊದಲ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ.
ಈ ಹಿಂದೆ ರಮ್ಯಾ ಅವರು ನಟ- ನಿರ್ದೇಶಕ ರಾಜ್.ಬಿ.ಶೆಟ್ಟಿ ಅವರೊಂದಿಗೆ ರಮ್ಯಾ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಹಬ್ಬಿತ್ತು. ಈ ಸುದ್ದಿ ಈಗ ಅಧಿಕೃತವಾಗಿದೆ. ರಮ್ಯಾ ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ತನ್ನ ಮೊದಲ ಸಿನಿಮಾವನ್ನು ರಾಜ್.ಬಿ.ಶೆಟ್ಟಿ ಅವರೊಂದಿಗೆ ಮಾಡಲಿದೆ.
ಚಿತ್ರಕ್ಕೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂದು ಟೈಟಲ್ ಇಡಲಾಗಿದ್ದು, ವಿಶೇಷವೆಂದರೆ ಈ ಸಿನಿಮಾದಲ್ಲಿ ರಾಜ್. ಬಿ.ಶೆಟ್ಟಿ ಹಾಗೂ ರಮ್ಯಾ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Related Articles
ರಾಜ್.ಬಿ.ಶೆಟ್ಟಿ ಅವರು ʼಗುರುಡ ಗಮನ ವೃಷಭ ವಾಹನʼಕ್ಕೆ ಮ್ಯೂಸಿಕ್ ನೀಡಿದ್ದ ಮಿಧುನ್ ಮುಕುಂದನ್ ಈ ಚಿತತ್ರಕ್ಕೆ ಮ್ಯೂಸಿಕ್ ನೀಡಲಿದ್ದು, ಇದರೊಂದಿಗೆ ʼಗುರುಡ ಗಮನ ವೃಷಭ ವಾಹನʼಕ್ಕೆ ಛಾಯಗ್ರಾಹನ ಮಾಡಿದ್ದ ಪ್ರವೀಣ್ ಶ್ರೀಯಾನ್ ಈ ಚಿತ್ರಕ್ಕೆ ಡಿಓಪಿ ಆಗಿ ವರ್ಕ್ ಮಾಡಲಿದ್ದಾರೆ.
ರಮ್ಯಾ ಅವರು ಬಹು ಸಮಯದ ಬಳಿಕ ಬಣ್ಣದ ಲೋಕಕ್ಕೆ ನಟಿಯಾಗಿ ಕಂಬ್ಯಾಕ್ ಮಾಡಲಿದ್ದಾರೆ. ʼಗುರುಡ ಗಮನ ವೃಷಭ ವಾಹನʼದ ಬಳಿಕ ರಾಜ್.ಬಿ.ಶೆಟ್ಟಿ ಅವರ ನಿರ್ದೇಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.
ಪೋಸ್ಟರ್ ನೋಡಿದರೆ ಮೇಲ್ನೋಟಕ್ಕೆ ಇದೊಂದು ಲವ್ ಸ್ಟೋರಿವುಳ್ಳ ಕಥೆಯ ಹಾಗೆ ಕಾಣುತ್ತದೆ.