ಮುಂಬಯಿ: ರಣದೀಪ್ ಹೂಡಾ ನಟಿಸಿ, ನಿರ್ದೇಶನ ಮಾಡಿರುವ ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ ಸಿನಿಮಾ ಶುಕ್ರವಾರ(ಮಾ.22 ರಂದು) ರಿಲೀಸ್ ಆಗಿದೆ.
ಸಿನಿಮಾದ ಟ್ರೇಲರ್ ರಿಲೀಸ್ ಆದ ಬಳಿಕ ಸಾಕಷ್ಟು ಟೀಕೆಗೆ ಒಳಗಾಗಿತ್ತು. ಈ ಸಿನಿಮಾವನ್ನು ಬಿಜೆಪಿಯ ಪ್ರಚಾರದ ಸಿನಿಮಾವೆಂದೇ ಕೆಲವರು ಟೀಕಿಸುತ್ತಲೇ ಬಂದಿದ್ದರು. ಈ ಎಲ್ಲಾ ಅಂಶಗಳು ಸಿನಿಮಾದ ಮೇಲೆ ಪರಿಣಾಮ ಬೀರಿದ್ದು ಸುಳ್ಳಲ್ಲ.
ರಣದೀಪ್ ಹೂಡಾ ರಾಜಕಾರಣಿ ಮತ್ತು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ʼಸ್ವಾತಂತ್ರ್ಯ ವೀರ್ ಸಾವರ್ಕರ್ʼ ಸಿನಿಮಾ ಕುನಾಲ್ ಕೆಮ್ಮು ನಿರ್ದೇಶನದ ‘ಮಡ್ಗಾಂವ್ ಎಕ್ಸ್‌ಪ್ರೆಸ್’ ಸಿನಿಮಾದೊಂದಿಗೆ ರಿಲೀಸ್ ಆಗಿದೆ. ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಅಷ್ಟಾಗಿ ಸದ್ದು ಮಾಡಿಲ್ಲ 1.15 ಕೋಟಿ ರೂ. ಗಳಿಸಿದೆ.
ಒಂದಷ್ಟು ವಿವಾದ ಹುಟ್ಟಿಸಿದ ಬಳಿಕ ತೆರೆಕಂಡ ಸಿನಿಮಾ ಭರ್ಜರಿ ಆರಂಭ ಪಡೆದುಕೊಳ್ಳುವ ನಿರೀಕ್ಷೆಯಿತ್ತು. ಆದರೆ ಸಿನಿಮಾ ಮಂದಗತಿಯ ಓಪನಿಂಗ್ ಪಡೆದುಕೊಂಡಿದೆ.
ರಣದೀಪ್ ಹೂಡಾ ಅಲ್ಲದೆ, ಚಿತ್ರದಲ್ಲಿ ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಕೂಡ ನಟಿಸಿದ್ದಾರೆ. ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದೆ.