Advertisement

ಶ್ರೀರಂಗಪಟ್ಟಣಾದ್ಯಂತ ಸ್ವರ್ಣಗೌರಿ ಪೂಜೆ

03:36 PM Sep 13, 2018 | |

ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗೌರಿ-ಗಣೇಶನ ಹಬ್ಬದ ಅಂಗವಾಗಿ ಬುಧವಾರ ಸ್ವರ್ಣ ಗೌರಿ ಪೂಜೆ ಆಚರಿಸಲಾಯಿತು. ಪಟ್ಟಣದ ವಿವಿಧ ದೇವಾಲಯಗಳಲ್ಲಿ ಸ್ವರ್ಣಗೌರಿ ಪೂಜಿಸಲಿ ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಗೌರಿ ವ್ರತ ಮಾಡಿದರು.

Advertisement

ಪಟ್ಟಣದ ಬಾಲ ಸುಬ್ರಹ್ಮಣ್ಯ ಮಂದಿರ, ಡಾ. ಭಾನು ಪ್ರಕಾಶ್‌ ಅವರ ರಾಮ ಮಂದಿರ ಸೇರಿದಂತೆ ಇತರ ಭಾಗಗಳಲ್ಲಿ ಸ್ವರ್ಣಗೌರಿ ವ್ರತ ಆಚರಣೆ ಮಾಡಲಾಗಿತ್ತು. ಆದಿ ಪುರಾಣದ ಪ್ರಕಾರ ವಿಶೇಷವಾಗಿ ದಕ್ಷ ಮಹಾರಾಜ ಯಜ್ಞ ಮಾಡು
ವಾಗ ತನ್ನ ಮಗಳನ್ನು ಯಜ್ಞ ಪೂಜೆಗೆ ಕರೆಯದೇ ಇದ್ದ ವೇಳೆ ದಾಕ್ಷಾಯಿಣಿ ಆ ಪೂಜಾ ಕಾರ್ಯಕ್ರಮಕ್ಕೆ ಬಂದರೂ ಸುಮ್ಮನಿದ್ದ ಮಹಾರಾಜ ಮಗಳನ್ನು ಅವಮಾನಿಸಿದಾಗಿ ತಿಳಿದುಕೊಂಡ ದಕ್ಷರಾಜನ ಮಗಳು ತಂದೆ ವಿರುದ್ಧ ಕೋಪ ಗೊಂಡು ಯಜ್ಞದ ಕುಂಡಕ್ಕೆ ದಾಕ್ಷಾಯಿಣಿ ಬಿದ್ದ ಸಂದರ್ಭದಲ್ಲಿ ಸಪ್ತ ಋಷಿಗಳು ಅದನ್ನು ತಡೆದಾಗ ಸ್ವರ್ಣಗೌರಿ ಯಾಗಿ ಹುಟ್ಟಿದ ದೇವತೆ ಗೆ ನಾಡಿನೆಲ್ಲೆಡೆ ಪೂಜೆ ಮಾಡುತ್ತಿರುವ ಗೌರಿ ವ್ರತವಾಗಿ ಪುರಾಣದಲ್ಲಿ ಹೇಳುತ್ತಿದೆ ಎಂದು ಜ್ಯೋತಿಷಿ ಡಾ. ಭಾನುಪ್ರಕಾಶ್‌ ಶರ್ಮಾ ತಿಳಿಸಿದರು.

ಕಾವೇರಿ ನದಿ ತೀರದಲ್ಲಿ ಪೂಜೆ ಸಲ್ಲಿಸಿ ಪೂರ್ಣ ಕುಂಭದಲ್ಲಿ ಮಡಿ ನೀರು ತಂದು ಕಳಸ ಮಾಡಿ ನಂತರ ಮನೆಯಲ್ಲಿ ಸ್ವರ್ಣಗೌರಿಯ ಮೂರ್ತಿ ಪ್ರತಿಸ್ಥಾಪಿಸಿ ವಿಶೇಷ ವಾಗಿ ಬಾಳೆ, ಮಾವು ಸೊಪ್ಪು ಕಟ್ಟಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸುವರು. 

Advertisement

Udayavani is now on Telegram. Click here to join our channel and stay updated with the latest news.

Next