Advertisement

ಮ್ಯಾನ್ಮಾರ್‌ಗೆ ಆಗಮಿಸಿದ ಸುಶ್ಮಾ ಸ್ವರಾಜ್‌, 2 ದಿನಗಳ ಭೇಟಿ

04:15 PM May 10, 2018 | Team Udayavani |

ನೇ ಪೀ ತಾವ್‌ : ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ  ಸ್ವರಾಜ್‌ ಅವರು ಎರಡು ದಿನಗಳ ಭೇಟಿ ಸಂಬಂಧ ಇಂದು ಗುರುವಾರ ಮ್ಯಾನ್ಮಾರ್‌ಗೆ ಆಗಮಿಸಿದ್ದಾರೆ. 

Advertisement

ಈ ಭೇಟಿಯಲ್ಲಿ ಸಚಿವೆ ಸುಶ್ಮಾ ಅವರು ಮ್ಯಾನ್ಮಾರ್‌ನ ಉನ್ನತ ನಾಯಕರೊಂದಿಗೆ ಪ್ರಮುಖ ದ್ವಿಪಕ್ಷೀಯ, ಪ್ರಾದೇಶಿಕ ವಿಷಯಗಳ ಬಗ್ಗೆ,ವಿಶೇಷವಾಗಿ ರಖೈನ್‌ನಿಂದ ಭಾರತಕ್ಕೆ ಬರುತ್ತಿರುವ ಸಹಸ್ರಾರು ರೊಹಿಂಗ್ಯಾ ಮುಸ್ಲಿಮರ ಸಮಸ್ಯೆಯ ಬಗ್ಗೆ ಚರ್ಚಿಸಲಿದ್ದಾರೆ.

ಮ್ಯಾನ್ಮಾರ್‌ ಭಾರತಕ್ಕೆ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ ನೆರೆಯ ದೇಶವಾಗಿದ್ದು ಇದು ಭಾರತದ ಈಶಾನ್ಯ ರಾಜ್ಯಗಳೊಂದಿಗೆ 1,640 ಕಿ.ಮಿ. ಗಡಿಯನ್ನು ಹಂಚಿಕೊಂಡಿದೆ. ಇದರಲ್ಲಿ ಬಂಡುಕೋರ ಪೀಡಿ ನಾಗಾಲ್ಯಾಂಡ್‌ ಮತ್ತು ಮಣಿಪುರ ಗಡಿಗಳೂ ಸೇರಿವೆ. 

ನೇ ಪೀ ತಾವ್‌ಗೆ ಸುಶ್ಮಾ ಅಮಿಸಿದೊಡನೆಯೇ ಆಕೆಯನ್ನು ಭಾರತೀಯ ರಾಯಭಾರಿ ವಿಕ್ರಮ್‌ ಮಿಶ್ರಿ ಮತ್ತು ಮ್ಯಾನ್ಮಾರ್‌ನ ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿನ ಶಾಶ್ವತ ಕಾರ್ಯದರ್ಶಿ ಯು ಮಿಯಿಂಟ್‌ ತೂ ಸ್ವಾಗತಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next