Advertisement
ಅಲ್ಲಿ ರಾಜ್ಯದ ಅಗ್ರಗಣ್ಯ ಮಠಾಧಿಪತಿಗಳೆಲ್ಲರೂ ಭಾಗವಹಿಸಲಿದ್ದು, “ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡಬಾರದು. ಹಾಗೊಂದು ವೇಳೆ ಈ ನಿಟ್ಟಿನಲ್ಲಿ ಮುಂದಾದರೆ, ಸಮಸ್ಯೆ ಎದುರಿಸಬೇಕಾಗಬಹುದು’ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್‌ಗೆ ರವಾನಿಸಲು ವೇದಿಕೆ ಸಜ್ಜಾಗುತ್ತಿದೆ.
Related Articles
Advertisement
ರಾಜಕಾರಣಕ್ಕೆ ಮಠಾಧೀಶರ ಮಧ್ಯಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಸ್ವಾಮೀಜಿ, ” ನಾವು ಯಾವುದೇ ಹೊಸ ಸಂಪ್ರದಾಯ ಮಾಡಿಕೊಂಡಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಮಠಗಳುಕಟ್ಟಿವೆ. ಶಿಕ್ಷಣದಕೆಲಸಗ ಳನ್ನುಮಾಡಿಕೊಳ್ಳಬೇಕಾದರೆ ಬರಬೇಕಾಗುತ್ತದೆ. ಯಾವುದೇ ಪಕ್ಷದ ಪರ ಮಠಗಳು ನಿಂತಿಲ್ಲ. ಅನ್ಯಾಯವಾದಾಗ ಮಠಾಧೀಶರು ಮಧ್ಯಪ್ರವೇಶ ಮಾಡುತ್ತಾರೆ. ವ್ಯಕ್ತಿಗೆ ಅನ್ಯಾಯವಾದಾಗ ಕೇಳುವು ದರಲ್ಲಿ ತಪ್ಪಿಲ್ಲ. ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ಮಾರ್ಗದರ್ಶನ ಮಾಡಬೇಕಾಗುತ್ತದೆ’ ಎಂದು ಸಮಜಾಯಿಷಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಸ್ವಾಮೀಜಿ ಸೇರಿದಂತೆ ಬೊಮ್ಮನಹಳ್ಳಿ, ಅಗಡಿ ಸೂಗೂರು ಅರಕಲಗೂಡು, ಶಿಗ್ಗಾವಿ, ಅಕ್ಕಿಆಲೂರು ಸ್ವಾಮೀಜಿಗಳು ಉಪಸ್ಥಿತರಿದ್ದರು.
ಕಾಣಿಕೆ ನೀಡುವುದು ಸಂಸ್ಕೃತಿ; ಸ್ವಾಮೀಜಿ ಸಮಜಾಯಿಷಿ ಸಚಿವರು ಕಾಗದ ತೋರಿಸಿದ್ದಕ್ಕೆ ಅಷ್ಟು ಸುದ್ದಿ ಆಯಿತು. ನಂತರ ಅದರಲ್ಲಿರುವುದು ಗೊತ್ತಾದನಂತರ ಮೌನಕ್ಕೆ ಶರಣಾದಿರಿ ಎಂದು ದಿಂಗಾಲೇಶ್ವರ ಸ್ವಾಮೀಜಿ ತೀಕ್ಷ್ಣವಾಗಿ ಹೇಳಿದರು. ಮುಖ್ಯಮಂತ್ರಿ ನಿವಾಸದಲ್ಲಿ ಮಠಾಧೀಶರಿಗೆ ಕವರ್ ನೀಡಿದ ಬಗ್ಗೆ ಪ್ರಸ್ತಾಪಿಸಿದ ಅವರು, ಕವರ್‌ನಲ್ಲಿ ಏನೂ ಇರಲಿಲ್ಲ. ಮಠಾಧೀಶರಿಗೂ ಪತ್ರಕೊಟ್ಟಿದ್ದಾರೆ. ಇದನ್ನೇಬೇರೆ ರೀತಿಯಲ್ಲಿ ತೋರಿಸಿದ್ದು ಮನಸ್ಸಿನ ವಿಕೃತಿ ತೋರಿಸುತ್ತದೆ. ಅಷ್ಟಕ್ಕೂ ಮಠಾಧೀಶರು ಹೋದಾಗ ಹಣ್ಣುಹಂಪಲು ಕೊಡುತ್ತಾರೆ. ಮನೆಗಳಿಗೆ ಬಂದಾಗ ಭಕ್ತರು ಅಷ್ಟೇ ಯಾಕೆ ನೀವೇ ಕೊಡು
ತ್ತೀರಿ. ಅದನ್ನೇ ಬೇರೆ ರೀತಿಯಲ್ಲಿ ಬಿಂಬಿಸಿದರೆ ಏನು ಮಾಡುವುದು? ಕಾಣಿಕೆ ಕೊಡುವ ಸಂಸ್ಕೃತಿ ಭಕ್ತರಲ್ಲಿದೆ. ಇದಕ್ಕೆ ಬೇರೆ ಅರ್ಥಮಾಡಿಕೊಳ್ಳುವುದು ಸರಿಯಲ್ಲ ಎಂದು ಖಾರವಾಗಿ ಹೇಳಿದರು.