Advertisement

ಪ್ರತಿಯೊಬ್ಬರಿಗೂ ಸ್ವಾಮಿ ವಿವೇಕಾನಂದರು ಆದರ್ಶ

11:25 PM Jan 13, 2022 | Team Udayavani |

ತುಮಕೂರು: ಯುಗ ಪ್ರವರ್ತಕ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ರಾಷ್ಟ್ರೀಯಯುವ ದಿನಾಚರಣೆ ಮಹೋ ತ್ಸವ ವನ್ನು ಪಾವಗಡದ ಶ್ರೀರಾಮಕೃಷ್ಣ ಸೇವಾ ಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಅವರು ಅನಾಥ ಮಕ್ಕಳಿಗೆ ಹೊಸ ಬಟ್ಟೆ, ಹೊದಿಕೆ ಮತ್ತು ದಿನಸಿ ಸಾಮಗ್ರಿ ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಿದರು.

Advertisement

ನಗರದ ಕೊಂಡನಾಯಕನಹಳ್ಳಿ, ಮೈದಾಳ ದಲ್ಲಿನ ಶ್ರೀಶಿವ ಶೈಕ್ಷಣಿಕ ಸೇವಾಶ್ರಮದ ಮಕ್ಕಳಿಗೆ ಹಾಗೂ ಉಪಾಧ್ಯಾಯರಿಗೆ ವಸ್ತ್ರಗಳು, ಸೀರೆ, ಪಂಚೆ ಹಾಗೂ ದಿನಸಿ ಮತ್ತು ರಾಜ್ಯದ ವಿವಿಧ ಭಾಗಗಳ ನಿರ್ಗತಿಕ, ಅನಾಥ ಮಕ್ಕಳಿಗೆ ಕಂಬಳಿ, ಪುಸ್ತಕಗಳು ಇತ್ಯಾದಿಗಳನ್ನು ವಿತರಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿದ್ದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ಮಾತನಾಡಿ, ಪ್ರತಿ ಯೊಬ್ಬರೂ ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು.

ಸ್ವಾಮಿ ವಿವೇಕಾನಂದರ ಕನಸಿನ ಭಾರತ ವಿಚಾರ ಹಾಗೂ ಭವಿಷ್ಯ ಭಾರತದ ಬಗ್ಗೆ ತಿಳಿಸಿದ ಸ್ವಾಮೀಜಿ, ಮಕ್ಕಳಲ್ಲಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಸ್ವಾಮಿ ವಿವೇಕಾನಂದರ ವಿಚಾರಧಾರೆ ಹಾಗೂ ಚೈತನ್ಯ ಶಕ್ತಿಯನ್ನು ತಮ್ಮ ವಿಚಾರಗಳ ಮೂಲಕ ತುಂಬಿದರು.

ವಿವೇಕಾನಂದರ ವಿಚಾರ ಅಳವಡಿಸಿಕೊಳ್ಳಿ: ಕವಿ ಕವಿತಾ ಕೃಷ್ಣ ಮಾತನಾಡಿ, ಈ ಭಾಗಕ್ಕೆ ಸ್ವಾಮೀಜಿಯವರ ಆಗಮನ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದಂದೇ ಈ ಅನಾಥಾಲಯಕ್ಕೆ ಒಂದು ರೀತಿಯ ವಿವೇಕಾನಂದರ ಪ್ರತಿರೂಪವೇ ಬಂದಂತಾ ಯಿತು ಎಂದು ಬಣ್ಣಿಸಿದರು. ಸ್ವಾಮಿ ವಿವೇಕಾನಂದರ ವಿಚಾರಧಾರೆ ಯನ್ನು ತಮ್ಮ ಜೀವನದ ಪ್ರತಿಕ್ಷಣದಲ್ಲೂ ಅಳವಡಿಸಿಕೊಂಡು ಸಹಸ್ರ ಜನರಿಗೆ ಆಸರೆಯಾಗಿರುವ ಸ್ವಾಮಿ ಜಪಾನಂದಜೀ ಅವರನ್ನು ಸ್ವಾಮಿ ವಿವೇಕಾನಂದರು ಈ ಹಿಂದುಳಿದ ಗ್ರಾಮಾಂತರ ಅನಾಥಾಲಯಕ್ಕೆ ಕರೆತಂದಿದ್ದಾರೆ ಎಂಬುದೇ ನಮ್ಮ ಭಾವನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಗಿಲ್‌ ಸುಭೇ ದಾರ್‌ ಆಗಿರುವ ಎಂ.ಸಿ ಸತೀಶ್‌ ಮತ್ತು ನಿವೃತ್ತ ಸೈನಿಕರು ಹಾಗೂ ಹಾಲಿ ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ವಿ.ಡಿ.ನಾಗರಾಜಯ್ಯ, ಶಿವ ಶೈಕ್ಷಣಿಕ ಸೇವಾಶ್ರಮದ ಮುಖ್ಯಸ್ಥರಾದ ಪಾಲಾಕ್ಷಯ್ಯ ಮಾತನಾಡಿದರು. ತುಮಕೂರು ಮಹಾನಗರದ ವಿವೇಕ ಬಳಗ ಸ್ವಯಂ ಸೇವಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next