ಸೊಲ್ಲಾಪುರ:ಅಕ್ಕಲ್‌ಕೋಟೆಯ ಶ್ರೀ ಸ್ವಾಮಿ ಸಮರ್ಥ ಅನ್ನಕ್ಷೇತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮಾ ಉತ್ಸವ ಅಂಗವಾಗಿ ಚಲನಚಿತ್ರ ಕಲಾವಿದೆ ಸುಪ್ರೀಯಾ ಪಾಠಾರೆ ಮತ್ತು ಚಿತ್ರನಟ ಭಾವು ಕದಮ್ ಅವರಿಂದ ಫುಲ್ ಧಮಾಲ್ ಹಾಸ್ಯಮಂಜರಿ ಕಾರ್ಯಕ್ರಮ ನಡೆಯಿತು.
ಚಲನಚಿತ್ರ ಕಲಾವಿದೆ ಸುಪ್ರೀಯಾ ಪಾಠಾರೆ ಮತ್ತು ಚಿತ್ರನಟ ಭಾವು ಕದಮ್, ತಹಶೀಲ್ದಾರ್ ಅಂಜಲಿ ಮರೋಡ, ಪೊಲೀಸ್ ನಿರೀಕ್ಷಕ ಕಲ್ಲಪ್ಪ ಪೂಜಾರಿ, ಅಭಿಯಂತಾ ಮೆØàತ್ರೆ, ಡಾ| ಆಶಾ ಪೆಡಗಾಂವ್ಕರ್, ಬಿಡಿಓ ಮಹಾದೇವ ಕೋಳಿ ಮತ್ತು ಮಂಡಳದ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲ್‌ರಾಜೆ ಭೋಸ್ಲೆ ಅವರು ಸ್ವಾಮಿ ಸಮರ್ಥರ ಪ್ರತಿಮೆಗೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅನ್ನಕ್ಷೇತ್ರ ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸ್ಲೆ ಅವರು ಸಮರ್ಥರ ಪ್ರತಿಮೆ ನೀಡುವ ಮೂಲಕ ಅತಿಥಿಗಳನ್ನು ಗೌರವಿಸಿದರು.
ವಟವೃಕ್ಷ ಸ್ವಾಮಿ ಮಹಾರಾಜ ದೇವಸ್ಥಾನ ಅಧ್ಯಕ್ಷ ಮಹೇಶ ಇಂಗಳೆ, ಮಂಡಳದ ಕಾರ್ಯದರ್ಶಿ ಶ್ಯಾಮರಾವ ಮೋರೆ, ಉಪಾಧ್ಯಕ್ಷ ಅಭಯ ಖೋಬರೆ, ಖಜಾಂಚಿ ಲಾಲಾ ರಾಠೊಡ್, ಬಾಳಾಸಾಹೇಬ್ ಮೋರೆ, ದಿಲೀಪ ಸಿದ್ಧೆ, ಬಾಳಾಸಾಹೇಬ ನಿಂಬಾಳ್ಕರ್, ಅರ್ಪಿತಾ ಭೋಸ್ಲೆ, ಮಾಜಿ ನಗರಾಧ್ಯಕ್ಷೆ ಅನಿತಾ ಖೋಬರೆ, ಮಹಾಂತೇಶ ಸ್ವಾಮಿ, ಪಿಂಟು ಸಾಠೆ, ಗಣೇಶ ಭೋಸ್ಲೆ, ಲಕ್ಷ್ಮಣ್ ಪಾಟೀಲ್, ರಾಜೇಂದ್ರ ಪವಾರ್, ಪ್ರಸಾದ ಹುಲ್ಲೆ, ಶೀವು ಸ್ವಾಮಿ, ಮೈನುದ್ದಿನ್ ಕೊರಬು ಹಾಗೂ ಪ್ರವೀಣ್ ದೇಶು¾ಕ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಸ್ವೇತಾ ಹುಲ್ಲೆ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಭಗರೆ ವಂದಿಸಿದರು.