ಮಂಗಳೂರು: ಸುಮಾರು 15 ವರ್ಷಗಳ ಕಾಲ ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉತ್ತರ ಕರ್ನಾಟಕದ ಪ್ರಮುಖ ಜಗದ್ಗುರು ಪೀಠದ ಮಠಾಧೀಶನಾಗಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದೆ.
ಇಲ್ಲಿಯವರೆಗೆ ಸ್ವತ್ಛತೆ ಸಹಿತ ನಗರ ಅಭಿವೃದ್ಧಿ ಕೇಂದ್ರಿತ ವಿವಿಧ ವಿಚಾರಗಳಿಗೆ ನನಗೆ ಸಹಕಾರ ನೀಡಿದ ಸರ್ವ ಜನತೆಗೂ ಚಿರಋಣಿ ಎಂದು ಸ್ವಾಮಿ ಏಕಗಮ್ಯಾನಂದ ಜೀ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆ ಮಠಕ್ಕೆ ಹತ್ತಾರು ಶಿಕ್ಷಣ ಸಂಸ್ಥೆಗಳಿದ್ದು, 7ರಿಂದ 8 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೃಷಿ ಪ್ರಧಾನ ಮಠವಾಗಿದ್ದು, 400 ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಈ ಮಾಸಾಂತ್ಯದೊಳಗೆ ಆ ಮಠಕ್ಕೆ ಹೋಗುತ್ತಿದ್ದೇನೆ ಎಂದರು.
ಮಂಗಳೂರಿನ ರಾಮಕೃಷ್ಣ ಮಠದಿಂದ ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸ ಲಾಗಿದೆ. 2011-14ರ ವರೆಗೆ ವಿವೇಕಾನಂದರ 125ನೇ ಜಯಂತಿ ಆಯೋಜಿಸಿ ದ್ದೆವು. 125 ಕಾರ್ಯಕ್ರಮ, 10,000 ಯುವಕರ ಜಾಥ, ಮೂರು ದಿನಗಳ ಸಮಾವೇಶ ಯಶಸ್ವಿಯಾಗಿ ಸಂಘಟಿಸಿದ ಜವಾಬ್ದಾರಿ ಸ್ಮರಣೀಯ.
ಬಳಿಕ ನಡೆದ ಸ್ವತ್ಛ ಭಾರತ ಅಭಿಯಾನ ನಮ್ಮ ಜೀವನವನ್ನೇ ಬದಲಾಯಿಸಿತು. ವರ್ಷಗಳ ಅವಧಿ ಯಲ್ಲಿ ಹತ್ತಾರು ಕೋಟಿ ಕೆಲಸ ನಡೆದಿದೆ. ಒತ್ತಾಯಪೂರ್ವಕ ದೇಣಿಗೆ ಪಡೆದುಕೊಂಡಿಲ್ಲ. ಎಲ್ಲ ಕೆಲಸಗಳನ್ನು ಮಾಡಲು ಮಂಗಳೂರಿನ ರಾಮಕೃಷ್ಣ ಮಠ ನನಗೆ ಪ್ರೋತ್ಸಾಹ, ಸಹಕಾರ ನೀಡಿದೆ ಎಂದು ಹೇಳಿದರು.