Advertisement

ಸ್ವಾಮಿ ಆ್ಯಂಡ್‌ ಫ್ರೆಂಡ್ಸ್‌

01:16 PM Oct 10, 2017 | |

ಭಾರತದ ಹೆಸರಾಂತ ಇಂಗ್ಲಿಷ್‌ ಲೇಖಕ ಆರ್‌.ಕೆ. ನಾರಾಯಣ್‌ ಹುಟ್ಟಿ ಇಂದಿಗೆ 111 ವರ್ಷ. “ಆರ್ಕೆ’ ಕಟ್ಟಿಕೊಟ್ಟ ಕಥೆಗಳು, ಪಾತ್ರಗಳು ಇಂದಿಗೂ ಜೀವಂತ. ಅವರೇ ಸೃಷ್ಟಿಸಿದ “ಮಾಲ್ಗುಡಿ ಡೇಸ್‌’ನ ಸ್ವಾಮಿ ಪಾತ್ರ, ತಾಜಾ ಬಾಲ್ಯವೊಂದರ ಮಾದರಿ. “ಸ್ಮಾರ್ಟ್‌’ ಕಿಟಕಿಯಲ್ಲಿ ಇಣುಕಿ, ಕಳೆದು ಹೋಗುತ್ತಿರುವ ಈಗಿನ ವರ ಬಾಲ್ಯಕ್ಕೆ ಆ ಖುಷಿ ಎಟುಕದು. ಈ ಹೊತ್ತಿನಲ್ಲಿ, “ಮಾಲ್ಗುಡಿ ಡೇಸ್‌’ ಧಾರಾವಾಹಿ ಮೂಲಕ, ಅವರ “ಸ್ವಾಮಿ’ ಪಾತ್ರವನ್ನು ನಮ್ಮ ಮನಸ್ಸುಗಳಲ್ಲಿ ಅಚ್ಚೊತ್ತಿದ ಮಾಸ್ಟರ್‌ ಮಂಜುನಾಥ್‌ ತಮ್ಮ ಬಾಲ್ಯವನ್ನು ಹಂಚಿಕೊಂಡಿದ್ದಾರೆ…

Advertisement

ಇಷ್ಟು ದಿವಸವಾಗಿದ್ದರೂ ನಾನು ಫೇಸ್‌ಬುಕ್‌ ಪೇಜನ್ನೇ ಕ್ರಿಯೇಟ್‌ ಮಾಡಿರಲಿಲ್ಲ. ಸ್ನೇಹಿತರೆಲ್ಲಾ ಒತ್ತಾಯ ಮಾಡಿದ ಮೇಲೆ ಕೊನೆಗೂ ಕ್ರಿಯೇಟ್‌ ಮಾಡಿದೆ. ಕೆಲ ದಿನಗಳಲ್ಲೇ ಐದಾರು ಸಾವಿರ ಮಂದಿ ಸಬ್‌ಸೆð„ಬ್‌ ಆದರು. ಈಗ ಸುಮಾರು 14 ಸಾವಿರ ಮಂದಿ ಸಬ್‌ ಸೈಬರ್ ಇದ್ದಾರೆ. ಲೈಮ್‌ಲೈಟಿನಿಂದ, ಸುದ್ದಿ ಭರಾಟೆಯಿಂದ ದೂರವೇ ಉಳಿದಿದ್ದರೂ ಜನರು ನನ್ನನ್ನು ನೆನಪಿಟ್ಟುಕೊಂಡಿದ್ದಾರಲ್ಲ ಎಂಬ ಖುಷಿ ನನಗೆ. ಆವಾಗ ಒಂದು ವಿಷಯ ಅರ್ಥ ಆಯ್ತು. ನಾನು ಅದೆಷ್ಟೋ ಮಂದಿಯ ಬಾಲ್ಯದ, ನಾಸ್ಟಾಲಿcಯಾದ ಭಾಗವಾಗಿದ್ದೇನೆ ಅಂತ. ನನ್ನನ್ನು ಡಿಡಿ1 ಚಾನೆಲ್‌ನಲ್ಲಿ ಅಪ್ಪ ಅಮ್ಮಂದಿರ ಜೊತೆ ಕೂತು ನೋಡಿದ ಮಕ್ಕಳು ಇಂದು ದೊಡ್ಡವರಾಗಿದ್ದಾರೆ. ಬಹುತೇಕರಿಗೆ ಮದುವೆಯೂ ಆಗಿ ಮಕ್ಕಳೂ ಇರಬಹುದು. ಆ ಮಕ್ಕಳಿಗೆ ನನ್ನನ್ನು “ಸ್ವಾಮಿ’ ಅಂತ ಪರಿಚಯಿಸಿರಬಹುದು. ಅವರ ಪ್ರೀತಿಗೆ ನಾನು ಋಣಿ.


ನಾನೊಂದು ಮಾಲೆ ಪಟಾಕಿ…
ಪ್ರಪಂಚ ಎಂದರೇನೆಂದೇ ತಿಳಿಯದ, ಇನ್ನೂ ಪಿಳಿ ಪಿಳಿ ಕಣ್ಣು ಬಿಡುತ್ತಿದ್ದ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟೆ. ಅದು ಹೇಗಾಯಿತಂದ್ರೆ ಚಿಕ್ಕೋನಾಗಿದ್ದಾಗ ನಾನು ಚೂಟಿಯಾಗಿದ್ದೆ, ತುಂಬಾ  ಮಾತುಗಾರನಾಗಿದ್ದೆ. ಅದನ್ನು ನೋಡಿಯೇ ಅಪ್ಪನ ಸ್ನೇಹಿತರೊಬ್ಬರು “ಅಜಿತ್‌’ ಅನ್ನೋ ಕನ್ನಡ ಸಿನಿಮಾದಲ್ಲಿ ಪಾರ್ಟು ಕೊಡಿಸಿದರು. ಅಂಬರೀಷ್‌ ಅವರು ಆ ಸಿನಿಮಾ ಹೀರೋ. ನನ್ನ ಚೂಟಿತನ ನೋಡಿ ಮೂರ್ನಾಲ್ಕು ಸಿನಿಮಾಗೆ ನನ್ನನ್ನ ರೆಕಮೆಂಡ್‌ ಮಾಡಿದರು. ಹಾಗೆ ಶುರುವಾದ ನನ್ನ ಸಿನಿಪಯಣ ಬಿಡುವೇ ಇರದಂತೆ, ಮಾಲೆ ಪಟಾಕಿಯಂತೆ ಸದ್ದು ಮಾಡುತ್ತಾ ಸಾಗಿತು. ಅವಕಾಶಗಳು ಒಂದಾದಮೇಲೊಂದರಂತೆ ಸಿಗುತ್ತಲೇ ಹೋದುÌ.


ನಂಗೋಸ್ಕರ ಶಾಲೆ ತೆರೀತಿದ್ರು!
ಶೂಟಿಂಗ್‌ನಿಂದಾಗಿ ಶಾಲೆಗೆ ಹೋಗುತ್ತಿದ್ದುದೇ ಅಪರೂಪವಾಗಿತ್ತು. ಆ ಟೈಮಲ್ಲಿ ಟೀಚರ್‌ಗಳು, ಫ್ರೆಂಡ್ಸ್‌ ತುಂಬಾನೇ ಸಹಕರಿಸಿದ್ರು. ನಾನು ಸಿನಿಮಾಗಳಲ್ಲಿ ಬಿಝಿಯಾಗಿದ್ದರೂ ಓದನ್ನು ಮರೆತಿರಲಿಲ್ಲ. ಹೋಂವರ್ಕ್‌, ಎಕ್ಸಾಂ ಎಲ್ಲವೂ ಟೈಮ್‌ ಟು ಟೈಮ್‌ ಆಗಿಬಿಡುತ್ತಿತ್ತು. ರಜಾ ದಿನಗಳಲ್ಲಿ ಮತ್ತು ಭಾನುವಾರಾನೂ ಸ್ಕೂಲ್‌ಗೆ ಹೋಗುತ್ತಿದ್ದೆ. ನನಗೋಸ್ಕರ ಅಂತಲೇ ಶಾಲೆ ತೆರೆಯುತ್ತಿದ್ರು. ಹಾಗಂತ ನಾನೇನು ರ್‍ಯಾಂಕ್‌ ಸ್ಟೂಡೆಂಟ್‌ ಆಗಿರಲಿಲ್ಲ. ಅವರೇಜ್‌ ವಿದ್ಯಾರ್ಥಿ ಅನ್ನಬಹುದು. ಅತ್ತ ಡಿಸ್ಟಿಂಕ್ಷನ್ನೂ ಇಲ್ಲದೆ, ಇತ್ತ ಫೇಲೂ ಆಗದವರ ಮೆಜಾರಿಟಿ ಕೆಟಗರಿಗೆ ಸೇರಿದವನು! ನಿ ಮ್ಗೆ ಗೊತ್ತಾ, ಮಾಲ್ಗುಡಿ ಡೇಸ್‌ನ ಸ್ವಾಮಿ ಆ್ಯಂಡ್‌ ಫ್ರೆಂಡ್ಸ್‌ ಭಾಗದ ಚಿತ್ರೀಕರಣ ನಡೆಸಿದ್ದು ನನಗೆ ಬೇಸಗೆ ರಜೆ ಸಿಕ್ಕಾಗ!

ನಾನೂ ನಿಮ್ಮಂತೆಯೇ…
“ನೋಡಿ ಸ್ವಾಮಿ ನಾವಿರೋದೇ ಹೀಗೆ’ ಸಿನಿಮಾ ಬಿಡುಗಡೆಯ ನಂತರ ತುಂಬಾ ರೆಕಾಗ್ನಿಷನ್‌ ಸಿಕು¤. ಹೊರಗಡೆ ಹೋದಾಗಲೆಲ್ಲ ಯಾರಾದರೂ ಅಪರಿಚಿತರು ಬಂದು ಮಾತಾಡಿಸಿ ಪ್ರೀತಿಯಿಂದ ಕೆನ್ನೆ ಗಿಲ್ಲಿ ಹೋಗುತ್ತಿದ್ದರು. ನನಗೋ ಆಶ್ಚರ್ಯ, ಯಾಕಿಷ್ಟು ಮುದ್ದು ಮಾಡುತ್ತಿದ್ದಾರೆ, ಹೊಗಳುತ್ತಿದ್ದಾರೆ, ಅಂಥ ದೊಡ್ಡ ಕೆಲಸ ನಾನೇನು ಮಾಡಿದ್ದೀನಿ ಅಂತ. ಅಷ್ಟು ಮುಗ್ಧನಾಗಿದ್ದೆ. ನಿಜ ಹೇಳಬೇಕೆಂದರೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ರೂ ನಾನು ಸೆಲೆಬ್ರಿಟಿ ಅನ್ನೋದು ತಲೆಗೆ ಹತ್ತಿರಲಿಲ್ಲ. ಈಗಲೂ ಅದಿಲ್ಲ. ಅಪ್ಪ- ಅಮ್ಮ, ಆ ರೀತಿ ನನ್ನನ್ನು ಬೆಳೆಸಿದ್ರು. ಸ್ನೇಹಿತರೂ ಅಷ್ಟೇ, ನನ್ನನ್ನ ಸ್ಪೆಷಲ್ಲಾಗಿ ಟ್ರೀಟ್‌ ಮಾಡಲಿಲ್ಲ. ಇವೆಲ್ಲದರಿಂದಾಗಿ ನಾನು ನನ್ನ ಬಾಲ್ಯವನ್ನು ಮಿಸ್‌ ಮಾಡಿಕೊಳ್ಳಲಿಲ್ಲ. ಸಿನಿಮಾಗಳಲ್ಲಿ ನಟಿಸುತ್ತಿದ್ದ ಹೊರತಾಗಿ, ನಿಮ್ಮಂತೆಯೇ ಬಾಲ್ಯದ ಎಲ್ಲಾ ಚಿಕ್ಕಪುಟ್ಟ ಖುಷಿ, ನೆಮ್ಮದಿಯನ್ನು ಅನುಭವಿಸಿದ್ದೀನಿ.

ನಾನೇಕೆ ಆ್ಯಕ್ಟಿಂಗ್‌ ನಿಲ್ಲಿಸಿದೆ?
ಕನ್ನಡದಲ್ಲಿ ನನ್ನ ಕೊನೆ ಚಿತ್ರ “ರಾಮಾಚಾರಿ’, ಹಿಟ್‌. ಓವರಾಲ್‌ ಕೊನೆಯ ಚಿತ್ರ, ತೆಲುಗಿನ “ಸ್ವಾತಿ ನಕ್ಷತ್ರಂ’. ಅದೂ ಸೂಪರ್‌ ಹಿಟ್ಟಾಯ್ತು. ಯಾಕೋ ಅದೇ ನನ್ನ ಪೀಕ್‌ ಆದರೆ ಚೆನ್ನ ಅಂತ ಅನ್ನಿಸತೊಡಗಿತ್ತು. ನನ್ನ ಮುಖಕ್ಕೆ ಬೆಲೆ ಇತ್ತು, ನನ್ನ ತಲೆಗೆ ಬೆಲೆ ಇದೆಯಾ ಅಂತ ಕಂಡುಕೊಳ್ಳಬೇಕಿತ್ತು. ನನ್ನೊಳಗಿನ ಆ ಇನ್ನರ್‌ ವಾಯ್ಸಗೆ ನಾನು ಕಿವಿಗೊಟ್ಟೆ. ಅವಕಾಶಗಳು ಭರಪೂರವಿದ್ದರೂ ಆ್ಯಕ್ಟಿಂಗ್‌ನಿಂದ ದೂರವುಳಿದೆ. ಇದಾಗಿ 25 ವರ್ಷಗಳೇ ಆದವು. ನೋ ರಿಗ್ರೆಟ್ಸ್‌. ಆ ನಿರ್ಧಾರದ ಬಗ್ಗೆ ನನಗೆ ಖುಷಿಯಿದೆ. ಯಾವ ದಾರಿ ಹಿಡಿದರೂ ನೂರಕ್ಕೆ ನೂರು ಪರ್ಸೆಂಟ್‌  ಶ್ರ ಮ ಹಾಕಬೇಕೆಂಬುದು ಶಂಕರ್‌ನಾಗ್‌ರಿಂದ ಕಲಿತ ಪಾಠ. 

ನಟನೆ ಬಿಟ್ಟ ನಂತರ ಶಿಕ್ಷಣದ ಬಗ್ಗೆ ಗಮನ ಹರಿಸಿದೆ. ಎಕನಾಮಿಕ್ಸ್‌ ಓದಿದೆ. ಪುಸ್ತಕದ ಗೀಳಿದ್ದಿದ್ದರಿಂದ ಇಂಗ್ಲಿಷ್‌  ಸಾ ಹಿ ತ್ಯ ಓದಿದೆ. ಟು ಬಿ ಆನೆಸ್ಟ್‌ ಆರ್‌.ಕೆ. ನಾರಾಯಣ್‌ರ “ಸ್ವಾಮಿ ಅಡ್‌ ಫ್ರೆಂಡ್ಸ್‌’ ಪುಸ್ತಕದ ಮಹತ್ವ ಅರಿವಾಗಿದ್ದೇ ಆಗ. 90ರ ದಶಕದ ಅಂತ್ಯದಲ್ಲಿ ಐಟಿ ಕ್ಷೇತ್ರ ಬೂಮ್‌ನಲ್ಲಿತ್ತು. ಆವಾಗ ನಾನು ವೆಬ್‌ಸೈಟೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಫ‌ಲಿತಾಂಶವನ್ನು ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಆನ್‌ಲೈನಲ್ಲಿ ಪ್ರಕಟಿಸಿದ್ದು ನಾವು. ಆ ಮೂಲಕ ಹೊಸದೊಂದು ಕ್ರಾಂತಿಕಾರಿ ಟ್ರೆಂಡಿಗೆ ನಾವು ನಾಂದಿ ಹಾಡಿದೆವು. ಈಗ ಪಿ.ಆರ್‌. ಪ್ರೊಫೆಷನಲ್‌ ಆಗಿ ಕೆಲಸ ಮಾಡ್ತಿ ದ್ದೇ ನೆ. ಈಗ ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ, ಜೀವನದಲ್ಲಿ ಯಶಸ್ಸು ಕಾಣಲು, ಕ್ರಿಯಾಶೀಲರಾಗಿರಲು ಇಂಥದ್ದೇ ಕ್ಷೇತ್ರ ಆಗಬೇಕು ಅಂತೇನಿಲ್ಲ. ಯಾವ ಕ್ಷೇತ್ರದಲ್ಲಿದ್ದರೂ, ಯಾವ ಕೆಲಸವನ್ನೇ ಆದರೂ ಖುಷಿಯಿಂದ ಮಾಡಿದರೆ ಅಷ್ಟು ಸಾಕು.

Advertisement

ನಿಂಗೇನ್‌ ನೋವಾ!?
ನನಗೆ ಸ್ನೇಹಿತರು ತುಂಬಾ ಏನಿಲ್ಲ. ಎಲ್‌.ಕೆ.ಜಿ ಸೇರಿದ ಮೊದಲ ದಿನ ನಾನು ಕ್ಲಾಸ್‌ರೂಮ್‌ಗೆ ಎಂಟ್ರಿ ಕೊಟ್ಟಾಗ ಮೊದಲು ಕಂಡವನೇ ರವೀಂದ್ರ. ಆವತ್ತಿನಿಂದ ಇವತ್ತಿನವರೆಗೆ ನಾವಿಬ್ಬರೂ ಕ್ಲೋಸ್‌ ಫ್ರೆಂಡ್ಸ್‌. ಅವನ ಸ್ನೇಹಿತರೆಲ್ಲಾ ನನಗೂ ಸ್ನೇಹಿತರಾದರು. ನಮ್ಮದೊಂದು ಪುಟ್ಟ ಗ್ಯಾಂಗ್‌ ಇದೆ. ಅನಾದಿಕಾಲದಿಂದಲೂ ನಾವೆಲ್ಲರೂ ಒಟ್ಟಿಗೇ ಇದ್ದೇವೆ. ನಮ್ಮನ್ನು ನೋಡಿದವರೆಲ್ಲರೂ ಒಂದೇ ಪ್ರಶ್ನೆ ಕೇಳ್ಳೋರು. “ಇಷ್ಟ್ ವರ್ಷ ಆದ್ರೂ ಜೊತೆನೇ ಇದ್ದೀರಲ್ಲಾ, ಹೇಗ್ರೋ?’ ಅಂತ. ಒಂದಿನ ನಮ್ಮಲ್ಲೊಬ್ಬ “ನಿಂಗೇನ್‌ ನೋವಾ’ ಅಂದುಬಿಟ್ಟ. ಆವತ್ತೇ ನಮ್ಮ ಗ್ಯಾಂಗ್‌ಗೆ ನಾಮಕರಣ ಮಾಡಿಬಿಟ್ವಿ, “ನಿಂಗೇನ್‌ ನೋವಾ’ ಅಂತ. ಗ್ಯಾಂಗ್‌ನಲ್ಲಿದ್ದವರೆಲ್ಲರೂ ಈಗ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದಾರೆ. ಈಗಲೂ ನಾವು ಜೊತೆಗಿದ್ದೇವೆ. ವಾರಕ್ಕೊಮ್ಮೆಯಾದರೂ ಸಿಗುತ್ತೇವೆ. ಕ್ರಿಕೆಟ್‌ ಆಡುತ್ತೇವೆ, ಆವಾಗಾವಾಗ ಸಿನಿಮಾಗೋ, ಫ್ಯಾಮಿಲಿ ಟ್ರಿಪ್‌ಗೊà ಹೋಗುತ್ತೇವೆ.

ಕಸ ಆದ್ರೂ ಗುಡಿಸು ಅಂದಿದ್ರು ಶಂಕರ್‌ ಅಂಕಲ್‌!
ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಶಂಕರ್‌ನಾಗ್‌ ಪಾತ್ರ ಹಿರಿದು. ನಾನು ಬದುಕಿನಲ್ಲಿ ಅಳವಡಿಸಿಕೊಂಡಿರೋ ಜೀವನ ಪಾಠಗಳಲ್ಲಿ ಬಹುತೇಕ ಅವರಿಂದಲೇ ಕಲಿತಿದ್ದು. ಅವರು ಹೇಳ್ಳೋರು; “ಲೈಫ‌ಲ್ಲಿ ಕಸ ಆದ್ರೂ ಗುಡಿಸು ಆದ್ರೆ ಅದನ್ನೇ ಪ್ಯಾಷನೇಟ್‌ ಆಗಿ ಮಾಡಬೇಕು. ನೋಡು, ಎಷ್ಟು ಚೆನ್ನಾಗಿ ಗುಡಿಸಿದ್ದೀನಿ ಅಂತ ಎದೆ ತಟ್ಟಿ ಹೇಳಿಕೊಳ್ಳೋ ಥರ ಗುಡಿಸಬೇಕು. ಏನೇ ಮಾಡಿದರೂ  ತೃ ಪ್ತಿ ಇರಬೇಕು. ಇಲ್ಲದೇ ಹೋದರೆ, ಬದುಕಿಗೆ ಅರ್ಥ ಇರೋಲ್ಲ’. ಅವರನ್ನು ನನ್ನ ಗಾಡ್‌ಫಾದರ್‌ ಅಂತ ಹಲವರು ಗುರುತಿಸುತ್ತಾರೆ. ಆದರೆ, ನಮ್ಮ ಸಂಬಂಧ ಅದಕ್ಕಿಂತಲೂ ಮಿಗಿಲಾದದ್ದು. ಒಮ್ಮೆ ಸ್ನೇಹಿತನಂತೆ, ಒಮ್ಮೆ ತಂದೆಯಂತೆ, ಒಮ್ಮೆ ತಾಯಿಯಂತೆ ಮತ್ತೂಮ್ಮೆ ಗುರುವಿನಂತೆ ನನಗೆ ದಾರಿ ತೋರುತ್ತಿದ್ದರು. ನಮ್ಮ ನಡುವಿದ್ದ ಬಾಂಧವ್ಯಕ್ಕೆ ಏನೆಂದೂ ಹೆಸರಿಡಲಾಗದು. ಏಕೆಂದರೆ ಏನು ಹೇಳಿದರೂ ಕಡಿಮೆಯೇ…

ಟಿಪ್ಸ್‌ ಕೊಟ್ಟ ದೊಡ್ಡವರು…
“ರಣಧೀರ’ ಸಿನಿಮಾದ, ನನ್ನ “ಏನ್‌ ಹುಡ್ಗಿàರೋ ಯಾಕಿಗಾಡ್ತೀರೋ’ ಸಾಂಗ್‌ ರೆಕಾರ್ಡಿಂಗ್‌ ಚೆನ್ನೈ ಸ್ಟುಡಿಯೋನಲ್ಲಿ ನಡೀತಿತ್ತು. ಅದೇ ಸಮಯಕ್ಕೆ ಅಣ್ಣಾವ್ರು, ಅಯ್ಯಪ್ಪ ಭಕ್ತಿ ಗೀತೆ ಕ್ಯಾಸೆಟ್‌ವೊಂದಕ್ಕೆ ಹಾಡೋಕೆ ಅಂತ ಬಂದಿದ್ರು. ಅವರ ಸರದಿ ಮುಗಿದ ನಂತರ ನಮ್ಮದು. ಅವರದಾದ ಮೇಲೆ ಹೋಗುತ್ತಾರೆ ಅಂತಂದುಕೊಂಡರೆ, ಹೋಗಲಿಲ್ಲ. ನಾನು ಹಾಡೋದನ್ನ ಪೂರ್ತಿಯಾಗಿ ಕೇಳಿಸಿಕೊಂಡರು. ಕೆಲವು ಟಿಪ್ಸ್‌ ಕೊಟ್ರಾ. ನಂಗದು ತುಂಬಾ ಯೂಸ್‌ ಆಯ್ತು. ಅಷ್ಟು ದೊಡ್ಡ ವ್ಯಕ್ತಿ ಅಷ್ಟು ಸರಳವಾಗಿ ಇರೋಕೆ ಹೇಗೆ ಸಾಧ್ಯ ಅನ್ನೋ ಅಚ್ಚರಿ ಇನ್ನೂ ಹೋಗಿಲ್ಲ. ಅವರು ರಾಜ್‌ಕುಮಾರ್‌! ಸಿಂಪಲ್‌ ಆಗಿದ್ರೆ ಬದುಕು ಎಷ್ಟು ಈಝಿ ಅನ್ನೋದು ಆಮೇಲಾಮೇಲೆ ಅರ್ಥ ಆಯಿತು.

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next