Advertisement

ಇಂದೋರ್‌ಗೆ ಸತತ 5ನೇ ಬಾರಿಗೆ ಸ್ವಚ್ಛತೆಯ ಗರಿ!

11:44 PM Nov 20, 2021 | Team Udayavani |

ಹೊಸದಿಲ್ಲಿ: ಸತತ 5ನೇ ಬಾರಿಯೂ ಮಧ್ಯಪ್ರದೇಶದ ಇಂದೋರ್‌ ನಗರವು ದೇಶದಲ್ಲೇ “ಅತ್ಯಂತ ಸ್ವಚ್ಛ ನಗರಿ’ ಎಂಬ ಖ್ಯಾತಿಗೆ ಪಾತ್ರವಾಗಿದೆ. ದಿಲ್ಲಿಯ ವಿಜ್ಞಾನ ಭವನ­ದಲ್ಲಿ ಶನಿವಾರ ನಡೆದ “ಸ್ವಚ್ಛ ಅಮೃತ ಮಹೋತ್ಸವ’ ಕಾರ್ಯ­ಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಇಂದೋರ್‌ ಅನ್ನು “ಸ್ವಚ್ಛತಾ ಕಾ ತಾಜ್‌’ ಎಂದು ಬಣ್ಣಿಸಿದ್ದಾರೆ.

Advertisement

ಪಟ್ಟಿಯ 2 ಮತ್ತು 3ನೇ ಸ್ಥಾನವನ್ನು ಕ್ರಮವಾಗಿ ಗುಜ ರಾತ್‌ನ ಸೂರತ್‌, ಆಂಧ್ರ­ಪ್ರದೇಶದ ವಿಜಯವಾಡಗಳಿಸಿವೆ. ಒಂದು ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆಯಿ ರುವ ನಗರಗಳ ಪೈಕಿ ಮಹಾರಾಷ್ಟ್ರದ 3  ಪ್ರದೇಶಗಳು “ಸ್ವಚ್ಛತೆ’  ಕಿರೀಟ ದಕ್ಕಿಸಿಕೊಂಡಿವೆ. ವೀಟಾ ಮೊದಲ ಸ್ಥಾನ ಪಡೆದರೆ, 2, 3ನೇ ಸ್ಥಾನವನ್ನು ಕ್ರಮವಾಗಿ ಲೋನಾವಾಲ ಮತ್ತು ಸಸ್ವಾದ್‌ ನಗರ ಪಡೆದಿವೆ.  ಅಹ್ಮದಾಬಾದ್‌ ದಂಡುಪ್ರದೇಶ ಭಾರತದ ಅತ್ಯಂತ ಸ್ವಚ್ಛ ಕಂಟೋನ್ಮೆಂಟ್‌ ಖ್ಯಾತಿಗೆ ಪಾತ್ರವಾಗಿದೆ. ವಾರಾಣಸಿಯು ಅತೀ ಸ್ವಚ್ಛ ಗಂಗಾತೀರದ ನಗರ, ಛತ್ತೀಸ್‌ಗಢ ಅತೀ ಸ್ವಚ್ಛ ರಾಜ್ಯ ಎಂದೆನಿಸಿವೆ.

5 ಕೋಟಿ: ಸ್ವಚ್ಛ ಸರ್ವೇಕ್ಷಣ್‌ಗೆ ನಾಗರಿಕ ರಿಂದ ಬಂದ ಪ್ರತಿಕ್ರಿಯೆಗಳು

28 ದಿನಗಳು: ಸರ್ವೇ ಪ್ರಕ್ರಿಯೆ ಪೂರ್ಣಗೊಳಿಸಿದ ಅವಧಿ

ಟಾಪ್‌ 10 ಸ್ವಚ್ಛ ನಗರಗಳು :

  1. ಇಂದೋರ್‌
  2. ಸೂರತ್‌
  3. ವಿಜಯವಾಡ
  4. ನವೀ ಮುಂಬಯಿ
  5. ದಿಲ್ಲಿ
  6. ಅಂಬಿಕಾಪುರ
  7. ತಿರುಪತಿ
  8. ನೋಯ್ಡಾ
  9. ಪುಣೆ
  10. ಉಜ್ಜಯಿನಿ
Advertisement

ಈ ಬಾರಿಯೂ ಇಂದೋರ್‌ಗೇಕೆ ಪ್ರಶಸ್ತಿಯ ಗರಿ? :

ರಾಜಕೀಯ ಹಾಗೂ ಆಡಳಿತಾತ್ಮಕ ಇಚ್ಛಾಶಕ್ತಿಯ ಪರಿಣಾಮ ಎಂಬಂತೆ, ಇಂದೋರ್‌ ದೇಶದಲ್ಲೇ ಅತ್ಯಂತ ಸ್ವಚ್ಛ ನಗರಿ ಎಂಬ ಖ್ಯಾತಿಗೆ ಸತತವಾಗಿ ಪಾತ್ರವಾಗುತ್ತಿದೆ. 2016 ರಿಂದಲೂ ಇಂದೋರ್‌ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ರಾಶಿ ಹಾಕುವ ಪದ್ಧತಿಯೇ ಮಾಯವಾಗಿದೆ. ಶೇ.100ರಷ್ಟು ತ್ಯಾಜ್ಯಗಳು ಮನೆಗಳಲ್ಲೇ ಪ್ರತ್ಯೇಕಿಸಲ್ಪಡುತ್ತಿವೆ ಹಾಗೂ ಆ ತ್ಯಾಜ್ಯಗಳನ್ನು ಗೊಬ್ಬರ, ಇಂಧನ ಮತ್ತಿತರ ಬಳಕೆಯೋಗ್ಯ ವಸ್ತುಗಳಾಗಿ ಮಾರ್ಪಾಡು ಮಾಡಲಾಗುತ್ತಿದೆ. ಎನ್‌ಜಿಒಗಳ ಸಹಾಯ ಪಡೆದು ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವ 48 ತ್ಯಾಜ್ಯವಾಹನಗಳನ್ನು ಟ್ರ್ಯಾಕ್‌ ಮಾಡಲೆಂದೇ ಯುವಕರನ್ನು ನೇಮಿಸಲಾಗಿದೆ. ಅವರು ಕಂಪ್ಯೂಟರ್‌ ಮುಂದೆ ಕುಳಿತು, ವ್ಯಾನ್‌ಗಳ ಮಾರ್ಗ, ಅವುಗಳು ಎಲ್ಲಿ ನಿಂತವು, ಎಷ್ಟು ಗಂಟೆಗೆ ಯಾವ ಪ್ರದೇಶಕ್ಕೆ ತೆರಳಿದವು ಎಂಬೆಲ್ಲ ಮಾಹಿತಿಯನ್ನೂ ನೋಡುತ್ತಿರುತ್ತಾರೆ. ಆಡಳಿತ ಕೈಗೊಂಡಿರುವ ಈ ಎಲ್ಲ ಕ್ರಮಗಳು ಹಾಗೂ ಸಾರ್ವಜನಿಕರ ಸಹಕಾರದಿಂದಾಗಿ ಇಂದೋರ್‌ ಈ ಹೆಗ್ಗಳಿಕೆ ಉಳಿಸಿಕೊಳ್ಳುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next