Advertisement

20 ಸಮುದಾಯದತ್ತ ಶೌಚಾಲಯಗಳ ಸಂಕೀರ್ಣ

10:39 AM Sep 09, 2020 | Suhan S |

ಬೆಂಗಳೂರು: ಈಗಾಗಲೇ ಬಯಲುಬಹಿರ್ದೆಸೆ ಮುಕ್ತ ಜಿಲ್ಲೆ ಎನಿಸಿಕೊಂಡಿರುವ ಬೆಂಗಳೂರು ನಗರ ಜಿಪಂ ಅದರ ಸುಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಮತ್ತಷ್ಟು ಸಮುದಾಯ ದತ್ತ ಶೌಚಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದೆ. ಆ ಹಿನ್ನೆಲೆಯಲ್ಲಿಯೇ ಅವಶ್ಯವಿ ರುವ ಜಾಗವನ್ನು ಕೂಡ ಈಗಾಗಲೇ ಗುರುತಿಸಿದೆ.

Advertisement

ಸಾಕಷ್ಟು ಜನದಟ್ಟಣೆ ಇರುವ ಕಡೆಗಳಲ್ಲಿ ಸಮುದಾಯದತ್ತ ಶೌಚಾಲಯಗಳ ಸಂಕೀರ್ಣ ಅಗತ್ಯವಿದೆ.ಆ ದೃಷ್ಟಿಯಿಂದ ಬೆಂಗಳೂರು ನಗರ ಜಿಪಂ ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಆನೇಕಲ್‌, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಯಲಹಂಕ ತಾಲೂಕು ವ್ಯಾಪ್ತಿಗಳಲ್ಲಿ ಸುಮಾರು 20 ಸಮುದಾಯದತ್ತ ಶೌಚಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ತೀರ್ಮಾನ ಕೈಗೊಂಡಿದೆ.

ಅಲ್ಲದೆ ಹೆಚ್ಚು ಜನರು ಸೇರುವ ದೇವಸ್ಥಾನಗಳು, ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶ ಸೇರಿದಂತೆ ಇನ್ನಿತರ ಜನನಿಬಿಡಿ ಪ್ರದೇಶಗಳ ಸರ್ಕಾರಿ ಜಾಗದಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲು ಈಗಾಗಲೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಡಳಿತದ ಸ್ವತ್ಛ ಭಾರತ್‌ ಮಿಷನ್‌ ಯೋಜನೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಕಳೆದ ಮೂರು ವರ್ಷಗಳಲ್ಲಿ ಹದಿನಾಲ್ಕು ಸಮುದಾಯದತ್ತ ಸಾರ್ವಜನಿಕ ಶೌಚಾಲಯಗಳ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಈಗ ಜನ ಸಾಂದ್ರತೆ ಹೆಚ್ಚಳವಿರುವ ಸ್ಥಳಗಳಲ್ಲಿಮತ್ತಷ್ಟು ಶೌಚಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ನಿರ್ಮಾಣಕ್ಕೆ ಬೇಕಾಗುವ ಅನುದಾನ: ಒಂದು ಸಂಕೀರ್ಣ ನಿರ್ಮಾಣಕ್ಕೆ 3 ಲಕ್ಷ ರೂ.ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ಸ್ವಚ್‌f ಭಾರತ್‌ ಮಿಷನ್‌ ಯೋಜನೆಯಡಿ 2.10 ಲಕ್ಷ ರೂ. ಮತ್ತು 15ನೇ ಹಣಕಾಸು ಯೋಜನೆಯಡಿಯಲ್ಲಿ 90 ಸಾವಿರ ರೂ.ಗಳನ್ನು ಸಂಕೀರ್ಣ ನಿರ್ಮಾಣಕ್ಕೆ ನೀಡಲಾಗುವುದು. ಈ ಹಿಂದೆಯೇ ಬೆಂಗಳೂರು ನಗರ ಜಿಲ್ಲಾಡಳಿತ ವ್ಯಾಪ್ತಿಯ ತಾಲೂಕುಗಳಲ್ಲಿ ಸಮುದಾಯದತ್ತ ಶೌಚಾಲಯಗಳ ಸಂಕೀರ್ಣ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಜಾಗದ ಸಮಸ್ಯೆಯಿಂದಾಗಿಯೇಸಕಾಲಕ್ಕೆ ಕೆಲಸ ಪೂರ್ಣವಾಗಲಿಲ್ಲ. ಈ ಆರ್ಥಿಕ ಸಾಲಿನಲ್ಲಿ ಶೌಚಾಲಯಗಳ ಸಂಕೀರ್ಣ ನಿರ್ಮಾಣ ಕಾರ್ಯ ಅಂತ್ಯಗೊಳಲಿದೆ ಎಂದು ಬೆಂಗಳೂರು ನಗರ ಜಿಪಂ ಉಪ ಕಾರ್ಯದರ್ಶಿ ಡಾ.ಸಿ.ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ನರೇಗಾ ಯೋಜನೆ ಅಡಿ ಉದ್ಯೋಗ :  ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ದೃಷ್ಟಿಯಿಂದ ಹಾಗೂ ಸಮುದಾಯದ ಮೂಲ ಸೌಕರ್ಯಗಳನ್ನು ಬಲಪಡಿಸುವ ಸಂಬಂಧ ಉದ್ಯೋಗ ಖಾತರಿ ಯೋಜನೆಯಡಿ 290 ಮಾನವ ದಿನವನ್ನು ಬಳಕೆ ಮಾಡಿ ಕೊಳ್ಳಲು ಇಲ್ಲಿ ಅವಕಾಶ ನೀಡಲಾಗಿದೆ. ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ ಘಟಕ ನಿರ್ಮಾಣದಲ್ಲಿ ಕೆಲಸ ನೀಡಲಾಗುವುದು ಎಂದು ಬೆಂಗಳೂರು ನಗರ ಜಿಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಈಗಾಗಲೇ ಸುಮಾರು 20 ಸಮುದಾಯದತ್ತ ಶೌಚಾಲಯಗಳ ಸಂಕೀರ್ಣನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಾಗ ಗುರುತಿಸುವ ಕಾರ್ಯ ಕೂಡ ಅಂತಿಮಗೊಂಡಿದ್ದು ಘಟಕಗಳ ನಿರ್ಮಾಣ ಪಕ್ರಿಯೆ ಈ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಕೆ.ಶಿವರಾಮೇಗೌಡ, ಬೆಂಗಳೂರು ನಗರ ಜಿಪಂ ಸಿಇಒ

 

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next