Advertisement

 ಡಾ|ರಾಜಶೇಖರ್‌ ಆರ್‌. ಕೋಟ್ಯಾನ್‌ಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ

05:12 PM Mar 08, 2017 | |

ಮುಂಬಯಿ: ದ. ಕನ್ನಡ ಬಂಟ್ವಾಳದ ಸ್ವಸ್ತಿಕ್‌ ಪ್ರಂಡ್ಸ್‌ ಕ್ಲಬ್‌ ಪುಂಜಾಲಕಟ್ಟೆ ಇದರ 9ನೇ ವಾರ್ಷಿಕ ಸಾಮೂಹಿಕ ವಿವಾಹ ಮತ್ತು ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಮಾ. 5ರಂದು ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಜರಗಿತು.

Advertisement

ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಪುಂಜಾಲಕಟ್ಟೆ ಬಂಟ್ವಾಳ ತಾಲೂಕು ಹಾಗೂ ಜೆಸಿಐ ಮಡಂತ್ಯಾರು ಇವರ ಜಂಟಿ ಆಶ್ರಯದಲ್ಲಿ ನಡೆದ ಸಮಾರಂಭಕ್ಕೆ ಮಂಗಳೂರು ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರನ್ನೊಳಗೊಂಡು ಪ್ರಸಿದ್ಧ ಚಲನಚಿತ್ರ ನಟ, ಪಡುಮಲೆ ಕುತ್ಯಾಲ ಶ್ರೀ  ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ  ವಿನೋದ್‌ ಆಳ್ವ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಪ್ರತಿವರ್ಷದಂತೆ ಕೊಡಮಾಡುವ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ-2017ನ್ನು ನಗರದ ಡಾ| ರಾಜಶೇಖರ್‌ ಆರ್‌. ಕೋಟ್ಯಾನ್‌ ಅವರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ  ಸಂಜಯ್‌ ಕುಮಾರ್‌ ಶೆಟ್ಟಿ ಗೋಣಿಬೀಡು, ವಿನಾಯಕ ರಾವ್‌ ಕನ್ಯಾಡಿ, ರಮೇಶ್‌ ಬಾಯಾರು, ರಮೇಶ್‌ ಕಲ್ಲಡ್ಕ  ಹಾಗೂ ಸ್ವಸ್ತಿಕ್‌ ಸಂಭ್ರಮ ಪುರಸ್ಕಾರ-2017ನ್ನು ಕಿಶೋರ್‌ ಪೆರಾಜೆ, ಸಂಜೀವ ಶೆಟ್ಟಿ ಮುಗೆರೋಡಿ, ಶೇಖರ ನಾರಾವಿ, ಕೆ. ಧರ್ಮಪಾಲ ಪೂಜಾರಿ, ಕುಮಾರಿ ಶ್ರುತಿ ದಾಸ್‌ ಮತ್ತು ಅತ್ಯುತ್ತಮ ಯುವ ಸಂಘಟನೆ ಪ್ರಶಸ್ತಿಯನ್ನು ಶ್ರೀ ಶಾರದಾಂಬಾ ಭಜನಾ ಮಂಡಳಿ ಕುಕ್ಕೇಡಿ-ಬುಳೆಕ್ಕರ ಸಂಸ್ಥೆಗೆ  ಪ್ರದಾನಿಸಿ ಗೌರವಿಸಲಾಯಿತು.

ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌, ಮಾಜಿ ಸಚಿವ ಬಿ.ನಾಗರಾಜ್‌ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಸ್ವರ್ಣಲತಾ, ವಸಂತ ಹೆಗ್ಡೆ, ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜು ಪ್ರಾಂಶುಪಾಲ ಅಲೆಕ್ಸ್‌ ಐವನ್‌ ಸಿಕ್ವೇರ, ಬೆಳ್ತಂಗಡಿ ಬಿಜೆಪಿ ಅಧ್ಯಕ್ಷ ರಂಜನ್‌ ಗೌಡ, ಉದ್ಯಮಿ ಜಿತೇಂದ್ರ ಎಸ್‌. ಕೊಟ್ಟಾರಿ, ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ,  ಡಾ| ಬಾಲಕೃಷ್ಣ ಶೆಟ್ಟಿ,  ಸುಂದರ ರಾಜ್‌ ಹೆಗ್ಡೆ, ಬಂಟ್ವಾಳ ತಾಲೂಕು ಪಂಚಾಯತ್‌ ಸದಸ್ಯ  ರಮೇಶ್‌ ಕುಡುಮೇರು, ರಶ್ಮಿ, ಹುಕುಂ ರಾಂ ಪಠೇಲ್‌, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜಪ್ಪು, ಪುಂಜಾಲಕಟ್ಟೆ ಸಿಂಡಿಕೇಟ್‌  ಬ್ಯಾಂಕ್‌ ಮ್ಯಾನೇಜರ್‌ ಹರೀಶ್‌ ಕುಮಾರ್‌, ಉದ್ಯಮಿ ಹರೀಶ್‌ ಪೈ,  ಸುಬ್ಬಣ್ಣ, ಚೆನ್ನಕೇಶವ ಉಪಸ್ಥಿತರಿದ್ದರು.

ಧಾರ್ಮಿಕ  ವಿಧಿ-ವಿಧಾನಗಳೊಂದಿಗೆ ಸಹಪುರೋಹಿತ ವೃಂದದ ಮಂತ್ರ ಘೋಷ ಗಳೊಂದಿಗೆ 13 ಜೋಡಿ ವಧೂ-ವರರು ಹಸೆ ಮಣೆಯನ್ನೇರಿದರು.  ಗೋವಿಂದಕೃಷ್ಣ ದೇವಾಲಯ ಗುರುವಾಯನಕೆರೆಯ ಮಾಜಿ ಪ್ರಧಾನ ಅರ್ಚಕ ವೇ| ಮೂ| ಕೃಷ್ಣ ಭಟ್‌ ತಮ್ಮ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹ ನೆರವೇರಿಸಿ ಅನುಗ್ರಹಿಸಿದರು. ಸ್ವಸ್ತಿಕ್‌ ಕ್ಲಬ್‌ ಅಧ್ಯಕ್ಷ ಪ್ರಶಾಂತ್‌ ಪುಂಜಾಲ ಕಟ್ಟೆ, ಗೌರವಾಧ್ಯಕ್ಷ ಪಿ.ಅಬ್ದುಲ್ಲಾ ಪುಂಜಾಲ
ಕಟ್ಟೆ, ಕಾರ್ಯದರ್ಶಿ ಜಯರಾಜ್‌ ಅತ್ತಾಜೆ, ಕೋಶಾಧಿಕಾರಿ, ನಾಟಕೋತ್ಸವ ಸಂಚಾಲಕ ಎಚ್‌. ಕೆ. ನಯನಾಡು ಮತ್ತಿತರ ಪದಾಧಿಕಾರಿ ಗಳು ಉಪಸ್ಥಿತರಿದ್ದರು. ಪಿ. ಎಂ. ಪ್ರಭಾಕರ್‌ ಸ್ವಾಗತಿಸಿದರು.  ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪ್ರಸ್ತಾವನೆಗೈದರು. ಶಿಕ್ಷಕ ಬಿ. ರಾಮಚಂದ್ರ ರಾವ್‌ ಕಾರ್ಯಕ್ರಮ ನಿರೂಪಿಸಿದರು. ಜೆಸಿಐ ಮಡಂತ್ಯಾರು ಅಧ್ಯಕ್ಷ ರಾಜೇಶ್‌ ಪಿ. ಪುಂಜಾಲಕಟ್ಟೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next