Advertisement

ಅಂತಾರಾಷ್ಟ್ರೀಯ ಹಾಕಿಗೆ ಕನ್ನಡಿಗ ವಿ. ಸುನಿಲ್ ನಿವೃತ್ತಿ ಘೋಷಣೆ

04:39 PM Oct 01, 2021 | Team Udayavani |

ಬೆಂಗಳೂರು : ಭಾರತೀಯ ಹಾಕಿ ತಂಡದ ಆಟಗಾರರು ಬೆನ್ನು ಬೆನ್ನಿಗೆ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸುತ್ತಿದ್ದು ಶುಕ್ರವಾರ ಕನ್ನಡಿಗ ವಿ.ಸುನಿಲ್ ನಿವೃತ್ತಿ ಘೋಷಿಸಿದ್ದಾರೆ.

Advertisement

ಹಾಕಿ ತಂಡದ ತಾರೆಗಳಾದ ಡ್ರ್ಯಾಗ್‌ ಫ್ಲಿಕ್ಕರ್‌ ರೂಪಿಂದರ್‌ ಪಾಲ್‌ ಸಿಂಗ್‌ ಮತ್ತು ಡಿಫೆಂಡರ್‌ ಬೀರೇಂದ್ರ ಲಾಕ್ರಾ ಗುರುವಾರ ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ವಿ.ಸುನಿಲ್ ಕನ್ನಡಿಗ ವಿ.ಸುನಿಲ್ ಅವರು ನಿವೃತ್ತಿ ಘೋಷಿಸಿದ್ದಾರೆ.

ಟ್ವೀಟ್ ನಲ್ಲಿ ಪೋಸ್ಟ್ ಮಾಡಿರುವ ಸುನಿಲ್ ‘ನನ್ನ ದೇಹ ಹೇಳುತ್ತಿದೆ ನಾನು ಇನ್ನೂ ಆಡಬಹುದು, ಹೃದಯ ಹೇಳುತ್ತಿದೆ ಇನ್ನೂ ಹೋಗಬಹುದು ಆದರೆ ಮನಸ್ಸು ಹೇಳುತ್ತಿದೆ ನಿವೃತ್ತಿಗೆ ಇದು ಸರಿಯಾದ ಸಮಯ’ ಎಂದು ಬರೆದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲಲಾಗದ ನೋವನ್ನೂ ಹೊರಹಾಕಿದ್ದಾರೆ.

Advertisement

32ರ ಹರೆಯದ ಸುನಿಲ್ 14 ವರ್ಷದ ದೀರ್ಘ ಅಂತಾರಾಷ್ಟ್ರೀಯ ಹಾಕಿ ಆಟದ ಅನುಭವ ಹೊಂದಿದ್ದರು. 2014 ರ ಏಷ್ಯನ್ ಗೇಮ್ಸ್ ಚಿನ್ನದ ಪದಕ , ಕಾಮನ್ ವೆಲ್ತ್ ಬೆಳ್ಳಿ ಪದಕ ವಿಜೇತ ತಂಡದ ಆಟಗಾರರಾಗಿದ್ದ ಅವರು 264 ಅಂತಾರಾಷ್ಟ್ರೀಯ ಪಂದ್ಯಗಳಿಂದ 72 ಗೋಲು ಗಳಿಸಿದ್ದರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅವರು ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಆಡಿರಲಿಲ್ಲ.

ಕ್ರೀಡಾ ರಂಗದ ಸಾಧನೆಗಾಗಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next