Advertisement

ಸುಜುಕಿ ಎಂಡಿ ಸತೋಷಿ ಉಚಿಡಾ ಮಂಗಳೂರಿನ ಪೈ ಸೇಲ್ಸ್‌ಗೆ ಭೇಟಿ

03:50 AM Jul 18, 2017 | Team Udayavani |

ಮಂಗಳೂರು: ಸುಜುಕಿ ಮೋಟಾರ್‌ ಸೈಕಲ್‌ ಇಂಡಿಯಾ ಪ್ರೈ.ಲಿ.ನ ಆಡಳಿತ ನಿರ್ದೇಶಕ ಸತೋಷಿ ಉಚಿಡಾ ಅವರು ಸುಜುಕಿ ಅಧಿಕೃತ ಡೀಲರ್‌ ಆದ ನಗರದ ಪೈ ಸೇಲ್ಸ್‌ಗೆ ಭೇಟಿ ನೀಡಿದರು. ಸುಜುಕಿ ಸಂಸ್ಥೆಯ ಉಪಾಧ್ಯಕ್ಷ ಕೆಂಜಿ ಹಿರೋಝವಾ, ಕಾರ್ಯನಿರ್ವಾಹಕ ಉಪಾಧ್ಯಕ್ಷ ಸಜೀವ ರಾಜಶೇಖರನ್‌ ಅವರೊಂದಿಗಿದ್ದರು.

Advertisement

ಮಂಗಳೂರು ನಗರವು ಸುಜುಕಿ ದ್ವಿಚಕ್ರ ವಾಹನಗಳಿಗೆ ಉತ್ತಮ ಮಾರುಕಟ್ಟೆಯಾಗಿದ್ದು, ಸುಜುಕಿ ಎಕ್ಸೆಸ್‌ ಮತ್ತು ಜಿಕ್ಸರ್‌ ವಾಹನಗಳು ಮಂಗಳೂರಿನ ಜನತೆಗೆ ಅತ್ಯಂತ ಪ್ರಿಯವಾದ ವಾಹನ ಗಳಾಗಿವೆ. ಹೊಸ ಸುಜುಕಿ ಆಲ್‌ ನ್ಯೂ ಆ್ಯಕ್ಸೆಸ್‌ 125 ಎಲ್ಲ ವಯೋಮಾನದ ಗ್ರಾಹಕರಿಗೆ ಸಂತೃಪ್ತಿಯನ್ನುಂಟು ಮಾಡಿದೆ.

ಅನುಕೂಲಕರ ವಾಹನ
ಇದರ ವಿಶೇಷವಾದ ಹೆಡ್‌ಲೈಟ್‌ ಕವರ್‌, ಅಲ್ಟ್ರಾಲೈಟ್‌ ಎಂಜಿನ್‌, ಉತ್ತಮ ಪಿಕ್‌ ಅಪ್‌ ಸಾಮರ್ಥ್ಯ, ಒಳ್ಳೆಯ ನಿರ್ವಹಣಾ ಸಾಮರ್ಥ್ಯದೊಂದಿಗೆ ವೇಗದ ಸವಾರಿಯಲ್ಲಿಯೂ ಅನುಕೂಲಕರ ವಾಹನ ಎನಿಸಿದೆ. ಅತ್ಯಾಧುನಿಕ ಸೆಂಟ್ರಲ್‌ ಲಾಕಿಂಗ್‌ ಸಿಸ್ಟಮ್‌, ಸುಲಭ ಸ್ಟಾರ್ಟ್‌ ವ್ಯವಸ್ಥೆ, ವಿಶಾಲವಾದ ಫುಟ್‌ ಬೋರ್ಡ್‌, ದೊಡ್ಡದಾದ ಸ್ಟೋರೇಜ್‌ ಸ್ಥಳ ಮತ್ತು ಉದ್ದವಾದ ಸೀಟ್‌ನೊಂದಿಗೆ ಸಮಾಧಾನಕರ ವಾಹನ ಚಾಲನೆಯ ಅನುಭವವನ್ನು ನೀಡಿ ಗ್ರಾಹಕರನ್ನು ಆಕ‌ರ್ಷಿಸಿದೆ.

ಸುಜುಕಿ ಜಿಕ್ಸರ್‌ 155 ಸಿಸಿ ಎಂಜಿನ್‌ನೊಂದಿಗೆ ಯುವಕರಲ್ಲಿ ಈ ನ್ಪೋರ್ಟಿ ಬೈಕ್‌ ವಿಶೇಷ ಆಸ್ಥೆ ಮೂಡಿಸಿದೆ. ಉತ್ತಮ ಟ್ವಿನ್‌ ಎಕ್ಸಾಸ್ಟ್‌, ವೈ ವಿನ್ಯಾಸದ 3 ನ್ಪೋಕ್‌ ಎಲೊÂà ವ್ಹೀಲ್‌, ದೃಢವಾದ 3 ಕವಾಟದ ಇಂಧನ ಟ್ಯಾಂಕ್‌, ಆಕರ್ಷಕ ವಿನ್ಯಾಸದ ಎಲ್‌ಇಡಿ ಹಿಂಬದಿ ಲ್ಯಾಂಪ್‌, ಅಟಾóಲೈಟ್‌ ಮತ್ತು ದೃಢವಾದ ಕ್ಷಮತೆ 155ಸಿಸಿ ಎಂಜಿನ್‌, ಶಾಕ್‌ ಸಸ್ಪೆನ್ಶನ್‌, ದೊಡ್ಡದಾದ ಎದುರು ಮತ್ತು ಹಿಂದಿನ ಡಿಸ್ಕ್ ಬ್ರೇಕ್‌ಗಳು, ಉತ್ತಮವಾದ ಡಿಜಿಟಲ್‌ ಗಡಿಯಾರ, ಗೇರ್‌ ಮತ್ತು ಎಂಜಿನ್‌ ಆರ್‌ಪಿಎಂ ಸೂಚಕ ಮುಂತಾದ ಸೌಲಭ್ಯದೊಂದಿಗೆ ಜಿಕ್ಸರ್‌ ಎಸ್‌ಎಫ್‌150ಸಿಸಿ ಎಂಜಿನ್‌ ಸಾಮರ್ಥ್ಯದ, ಅತೀ ವೇಗದಲ್ಲಿಯೂ ಸುಲಭವಾಗಿ ನಿರ್ವಹಣೆ ಮಾಡಬಲ್ಲ ಮಾರುಕಟ್ಟೆಯಲ್ಲಿರುವ ಫುಲ್ಲಿ ಫೈಯರ್‌x 155ಸಿಸಿ ಸೆಗ್‌ಮೆಂಟ್‌ನಲ್ಲಿ ಇಂಧನ ಕ್ಷಮತೆಯಲ್ಲಿ ಗ್ರಾಹಕರ ಕೈಗೆಟಕುವ ಬೈಕ್‌ ಆಗಿದೆ ಎಂದು ಸತೋಷಿ ಉಚಿಡಾ ವಿವರಿಸಿದರು.

ಸಮ್ಮಾನ, ಶ್ಲಾಘನೆ
ಇದೇ ಸಂದರ್ಭದಲ್ಲಿ ಪೈ ಸೇಲ್ಸ್‌ನಲ್ಲಿ ಸಂಸ್ಥೆಯ ಪ್ರಾರಂಭಿಕ ದಿನದಿಂದಲೂ ಅಂದರೆ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸೇಲ್ಸ್‌ ಮ್ಯಾನೇಜರ್‌ ಎಂ. ರಘುವೀರ ಕಿಣಿ ಅವರನ್ನು ಗೌರವಿಸಿದರು. ಚಿಲಿಂಬಿಯಲ್ಲಿರುವ ಸಂಸ್ಥೆಯ ನೂತನ ಶೋರೂಂ ಮತ್ತು ವರ್ಕ್ಸ್ ಶಾಪ್‌ಗೆ ಭೇಟಿ ನೀಡಿದ ಅವರು ಪೈ ಸೇಲ್ಸ್‌ ಸಂಸ್ಥೆಯು ದೇಶದಲ್ಲಿಯೇ ಉತ್ತಮ ನಿರ್ವಹಣೆ ತೋರಿಸುತ್ತಿರುವ 10 ವಿತರಕರಲ್ಲಿ ಒಂದಾಗಿದೆ ಎಂದು ಸಂಸ್ಥೆಯು ಪ್ರಾಮಾಣಿಕ, ಜನಸ್ನೇಹಿ ಮತ್ತು ಸೇವಾ ಮನೋಭಾವದ ಸಿಬಂದಿಯನ್ನು ಶ್ಲಾಘಿಸಿದರು.

Advertisement

ಪೈ ಸೇಲ್ಸ್‌ನ ಆಡಳಿತ ನಿರ್ದೇಶಕ ಟಿ. ಗಣಪತಿ ಪೈ, ನಿರ್ದೇಶಕರಾದ ಟಿ. ರತ್ನಾಕರ ಪೈ, ಅರುಣ್‌ ಪೈ, ವಿಜಯಾ ಎಸ್‌. ರಾವ್‌, ಪ್ರಬಂಧಕರಾದ ಉಮೇಶ ಭಟ್‌, ರಘುವೀರ ಕಿಣಿ, ವೆಂಕಟ್ರಮಣ ಭಟ್‌, ನಾಗೇಶ್‌ ಶೆಣೈ, ಗಿರೀಶ್‌ ನಾಯಕ್‌, ಅಭಿಜಿತ್‌ ನಾಯಕ್‌, ದೀಕ್ಷಿತ್‌, ರಾಮ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next