Advertisement

ಎಲೆಕ್ಟ್ರಿಕ್ ಕಾರು: ಸುಜುಕಿ-ಟೊಯೋಟಾ ಒಪ್ಪಂದ

11:00 AM Nov 18, 2017 | Sharanya Alva |

ನವದೆಹಲಿ: ಪೆಟ್ರೋಲ್‌, ಡೀಸೆಲ್‌ಗೆ ಪರ್ಯಾಯ ಇಂಧನ ಚರ್ಚೆಯಲ್ಲಿರುವಾಗಲೇ ಟೊಯೋಟಾ ಮತ್ತು ಸುಜುಕಿ 2020ರ ಒಳಗಾಗಿ ಭಾರತದಲ್ಲಿ ವಿದ್ಯುತ್‌ ಚಾಲಿತ ಕಾರುಗಳನ್ನು ತಯಾರಿಸಲಿವೆ. ಅದಕ್ಕಾಗಿ ಎರಡೂ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ. 

Advertisement

ಅದರ ಪ್ರಕಾರ ಸುಜುಕಿ ವಿದ್ಯುತ್‌ ವಾಹನ (ಇವಿ)ಗಳನ್ನು ಪೂರೈಸಿದರೆ, ಟೊಯೋಟಾ ತಾಂತ್ರಿಕ ವಿಭಾಗದಲ್ಲಿ ಅಗತ್ಯ ನೆರವು ನೀಡಲಿದೆ. ಹೊಸ ಮಾದರಿ ಕಾರಿನ ಬಗ್ಗೆ ಫೆಬ್ರವರಿಯಲ್ಲಿಯೇ ಮಾತುಕತೆಗಳು ಅಂತಿಮ ಹಂತ ತಲುಪಿದ್ದವು. ಅಂಥ ವಾಹನಗಳು ಸಿದ್ಧಗೊಂಡು ಮಾರುಕಟ್ಟೆಗೆ ಪ್ರವೇಶಿಸಿದರೆ ಯಾವ ರೀತಿಯಲ್ಲಿ ಅದನ್ನು ದೇಶದ ಜನರು ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next