Advertisement

ಮಕ್ಕಳಿಗೆ ಸುವಿಚಾರಗಳನ್ನೇ ಬೋಧಿಸಿ: ಡಾ|ಶುಭಗೀತಾ

03:25 PM Mar 09, 2017 | Team Udayavani |

ಮಣಿಪಾಲ: ಮಾತೃಸ್ಥಾನದಲ್ಲಿ ನಿಲ್ಲುವ ಮಹಿಳೆ ತನ್ನ ಮಕ್ಕಳಿಗೆ ಸುವಿಚಾರಗಳನ್ನು, ಸುಸಂಸ್ಕೃತಿಯನ್ನು ಕಲಿಸಿಕೊಟ್ಟಾಗ ಆ ಮಗು ನಾಳೆ ದೇಶದ ಸತøಜೆಯಾಗಲು ಸಾಧ್ಯವೆಂದು ಸೋನಿಯಾ ಕ್ಲಿನಿಕ್‌ನ ವೈದ್ಯರಾದ ಡಾ| ಶುಭಗೀತಾ ಹೇಳಿದರು.

Advertisement

ಅವರು ಮಾ. 8ರಂದು ಫಾರ್ಚುನ್‌ ಇನ್‌ ವ್ಯಾಲಿವ್ಯೂನಲ್ಲಿ ವೆಗಾ, ಡಿಪಾರ್ಟ್‌ ಮೆಂಟ್‌ ಆಫ್ ಕಮ್ಯುನಿಕೇಶನ್‌ ಹಾಗೂ ಸ್ಕೂಲ್‌ ಆಫ್ ಕಮ್ಯುನಿಕೇಶನ್‌ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರಗಿದ ವಿಶ್ವಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಂಡು ಸಂತಾನ ಅಪೇಕ್ಷೆ, ವರದಕ್ಷಿಣೆ ಮುಂತಾದ ವಿಷಯಗಳು ಇನ್ನೂ ಜೀವಂತವಾಗಿರುವುದು ವಿಷಾದನೀಯವೆಂದು ಹೇಳಿದ ಅವರು ವಿಶ್ವವನ್ನು ವಿಸ್ತಾರವಾಗಿ ಚಿಂತಿಸುವ ಶಕ್ತಿಯನ್ನು ಬೆಳಸಿಕೊಳ್ಳಬೇಕೆಂದು ಅವರು ಕೋರಿದರು.

ಇದೇ ಸಂದರ್ಭದಲ್ಲಿ ಡಾ| ಶುಭಗೀತಾ ಹಾಗೂ ವಿಪಂಚಿ ಬಳಗದ ಪಾವನ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
ಕಲಾವಿದೆ ಇಂದಿರಾ ಬಲ್ಲಾಳ್‌, ಸ್ಕೂಲ್‌ ಆಫ್ ಕಮ್ಯುನಿಕೇಶನ್ನಿನ ಡಾ| ಪದ್ಮಾರಾಣಿ, ವೆಗಾÒದ ಪ್ರಾಂಶುಪಾಲೆ‌ ಪರ್ವತವರ್ದಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ವಿದ್ಯಾ ಪಟವರ್ದನ್‌ ಸ್ವಾಗತಿಸಿದರು. ಪ್ರಾಧ್ಯಾಪಕರಾದ ವರಲಕ್ಷ್ಮೀ, ಸೇತು ಅತಿಥಿಗಳನ್ನು ಪರಿಚಯಿಸಿದರು. ಸ್ಕೂಲ್‌ ಆಫ್ ಕಮ್ಯುನಿಕೇಶನ್ನಿನ ಪ್ರಾಧ್ಯಾಪಕಿ ಶುಭಾ ಎಚ್‌.ಎಸ್‌. ವಂದಿಸಿದರು. ಕಾರ್ಯಕ್ರಮದ ಬಳಿಕ ವಿಪಂಚಿ ಬಳಗದಿಂದ ವೀಣಾ ಕಾರ್ಯಕ್ರಮ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next