Advertisement

ಗಣ್ಯರ ಮನೆಗೆ ಬಾಂಬ್‌ ಕಳಿಸಿದವರಿಗಾಗಿ ಶೋಧ

07:50 AM Oct 26, 2018 | Karthik A |

ವಾಷಿಂಗ್ಟನ್‌: ಅಮೆರಿಕದ ಮಾಜಿ ಸಚಿವೆ ಹಿಲರಿ ಕ್ಲಿಂಟನ್‌ ಸೇರಿದಂತೆ ಹಲವು ಗಣ್ಯರ ಮನೆ ಹಾಗೂ ಕಚೇರಿಗಳಲ್ಲಿ ಬಾಂಬ್‌ ಪಾರ್ಸೆಲ್‌ ಸಿಕ್ಕ ಪ್ರಕರಣದ ತನಿಖೆ ಆರಂಭವಾಗಿದ್ದು, ಈ ಪಾರ್ಸೆಲ್‌ ಕಳುಹಿಸಿದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಮನೆಗೆ ಹಾಗೂ ಮಾಧ್ಯಮ ಸಂಸ್ಥೆ ಸಿಎನ್‌ಎನ್‌ ಕಚೇರಿಗೂ ಬಾಂಬ್‌ ಪಾರ್ಸೆಲ್‌ ಕಳುಹಿಸಲಾಗಿತ್ತು.

Advertisement

ಈ ಮಧ್ಯೆ ಸಿಎನ್‌ಎನ್‌ ಹಾಗೂ ಸರಕಾರದ ಮಧ್ಯೆ ಇದೇ ವಿಚಾರಕ್ಕೆ ವಾಕ್ಸಮರ ಆರಂಭವಾಗಿದೆ. ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಂಪೂರ್ಣ ವಿಫ‌ಲರಾಗಿದ್ದಾರೆ ಎಂದು ಸಿಎನ್‌ಎನ್‌ ಮುಖ್ಯಸ್ಥ ಜೆಫ್ ಝಕರ್‌ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶ್ವೇತಭವನದ ವಕ್ತಾರೆ ಸಾರಾ ಸ್ಯಾಂಡರ್ಸ್‌, ದೇಶವನ್ನು ಸಿಎನ್‌ಎನ್‌ ವಿಭಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಜಕೀಯ ಹಿಂಸೆಯನ್ನು ವಿರೋಧಿಸುವ ಬಗ್ಗೆ ಟ್ರಂಪ್‌ ಕಠಿಣ ಶಬ್ದಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಸಿಎನ್‌ಎನ್‌ ದೇಶವನ್ನು ವಿಭಜಿಸುವ ಕೃತ್ಯದಲ್ಲಿ ತೊಡಗಿದೆ. ಎಲ್ಲ ರೀತಿಯ ರಾಜಕೀಯ ಹಿಂಸೆಯ ವಿರುದ್ಧ ಅಮೆರಿಕ ಒಂದಾಗಬೇಕಿದೆ ಎಂದು ಸಾರಾ ಹೇಳಿದ್ದಾರೆ.

ನಿರೋ, ಬಿಡೆನ್‌ಗೆ ಬಾಂಬ್‌: ಆಸ್ಕರ್‌ ಪುರಸ್ಕೃತ ನಟ ರಾಬರ್ಟ್‌ ಡೆ ನಿರೋ ಕಚೇರಿಗೆ ಹಾಗೂ ಮಾಜಿ ಉಪಾಧ್ಯಕ್ಷ ಜೋಯ್‌ ಬಿಡನ್‌ ಮನೆಗೂ ಇದೇ ರೀತಿಯ ಪಾರ್ಸೆಲ್‌ ಬಂದಿರುವುದು ಗುರುವಾರ ವರದಿಯಾಗಿದೆ. ನಿರೋ ಮಾಲೀಕತ್ವದ ಟ್ರಿಬೆಕಾ ಪ್ರೊಡಕ್ಷನ್ಸ್‌ ಉದ್ಯೋಗಿಯೊಬ್ಬರು ಈ ಬಗ್ಗೆ ಪೊಲೀಸರಿಗೆ ವರದಿ ಮಾಡಿದ್ದರು. ಮೇಲ್ನೋಟಕ್ಕೆ ಇದು ಕ್ಲಿಂಟನ್‌ ಹಾಗೂ ಒಬಾಮ ಕಚೇರಿಗೆ ಕಳುಹಿಸಿದ ಪ್ಯಾಕೇಜನ್ನೇ ಹೋಲುತ್ತದೆ. ಬಾಂಬ್‌ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ ಪ್ಯಾಕೇಜ್‌ ಅನ್ನು ನಿಷ್ಕ್ರಿಯಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next