ಮಂಗಳೂರು: ನಗರದ ಕಣ್ಣೂರು ಕೊಡಕ್ಕಲ್ ಬಸ್ ತಂಗುದಾಣದ ಬಳಿ ಬುಧವಾರ ಮಧ್ಯಾಹ್ನ ಯುವನೋರ್ವ ಅನುಮಾನಾಸ್ಪದವಾಗಿ ನಿಂತುಕೊಂಡಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
Advertisement
ವಿಚಾರಣೆ ನಡೆಸಿದಾಗ ಮಾದಕ ವಸ್ತು ಸೇವಿಸಿರುವ ಕುರಿತು ಒಪ್ಪಿಕೊಂಡಿದ್ದಾನೆ. ಆರೋಪಿ ಬಿಜೈ ಆನೆಗುಂಡಿಯ ಪ್ಯಾಲೇಸ್ ಗಾರ್ಡನ್ ನಿವಾಸಿ ಆಲ್ವಿನ್ ಸಿಕ್ವೇರಾ (37) ಎಂದು ತನ್ನ ಹೆಸರು ತಿಳಿಸಿದ್ದಾನೆ. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ನಿಷೇದಿತ ಮಾದಕ ಪದಾರ್ಥ ಸೇವನೆ ಮಾಡಿರುವ ಬಗ್ಗೆ ವೈದ್ಯರು ದೃಢಿಕರಣ ಪತ್ರವನ್ನು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.