Advertisement

Missing Case; ವ್ಯಕ್ತಿ ನಾಪತ್ತೆ: ಸೇತುವೆ ಬಳಿ ಸ್ಕೂಟರ್‌, ಮೊಬೈಲ್‌ ಪತ್ತೆ

11:53 PM Jul 23, 2024 | Team Udayavani |

ಮಂಗಳೂರು: ನಗರದ ಸರಿಪಳ್ಳ ಕನ್ನಗುಡ್ಡೆ ಸಮೀಪದ ನೂಜಿಯ ಗಣೇಶ್‌ ನೂಜಿ (48) ಅವರು ನಾಪತ್ತೆಯಾಗಿದ್ದು, ಅವರ ಸ್ಕೂಟರ್‌, ಮೊಬೈಲ್‌ ಮತ್ತು ಚಪ್ಪಲಿ ಗುರುಪುರದಲ್ಲಿ ಫ‌ಲ್ಗುಣಿ ಸೇತುವೆಯ ಬಳಿ ಪತ್ತೆಯಾಗಿದೆ.

Advertisement

ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದ ಗಣೇಶ್‌, ಹವ್ಯಾಸಿ ಛಾಯಾಚಿತ್ರ ಗ್ರಾಹಕರೂ ಕೂಡ ಆಗಿದ್ದರು. ಸೋಮವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫ‌ಲ್ಗುಣಿ ನದಿಯಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಣೇಶ್‌ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next