Advertisement

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

02:24 AM Oct 25, 2021 | Team Udayavani |

ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಯುವಕರನ್ನು ಐಸಿಸ್‌ ಉಗ್ರ ಸಂಘಟನೆಗೆ ನೇಮಿಸಿ ಸಿರಿಯಾಕ್ಕೆ ಕಳುಹಿಸುತ್ತಿದ್ದ ಬೆಂಗಳೂರಿನ ಮತ್ತೊಬ್ಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಶನಿವಾರ ರಾತ್ರಿ ಬಂಧಿಸಿದ್ದಾರೆ.

Advertisement

ಶಿವಾಜಿನಗರ ಮತ್ತು ಫ್ರೆಜರ್‌ಟೌನ್‌ ನಿವಾಸಿ ಮೊಹಮ್ಮದ್‌ ತೌಕೀರ್‌ ಮೊಹಮ್ಮದ್‌ (33) ಬಂಧಿತ. ಈತ ನಗರದಲ್ಲಿ ಸಣ್ಣಪುಟ್ಟ  ವ್ಯಾಪಾರ ಮಾಡಿಕೊಂಡಿದ್ದು, ಬಳಿಕ ದುಬಾೖಗೆ ತೆರಳಿ ವ್ಯಾಪಾರ ಮುಂದುವರಿಸಿದ್ದ. ಖಚಿತ ಮಾಹಿತಿಯ ಮೇರೆಗೆ ಅಲ್ಲಿನ ಸ್ಥಳೀಯ ಪೊಲೀಸರು ಆರೋಪಿಯನ್ನು ಬಂಧಿಸಿ ಭಾರತಕ್ಕೆ ಗಡಿಪಾರು ಮಾಡಿದ್ದಾರೆ. ಈಗ ಆರೋಪಿಯನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ದಿಲ್ಲಿಗೆ ಕರೆತಂದಿದ್ದಾರೆ. ಶೀಘ್ರ ಬೆಂಗಳೂರಿಗೆ ಕರೆತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಐಸಿಸ್‌ಗೆ ಯುವಕರ ನೇಮಕ, ಹಣ ಸಂಗ್ರಹ ಮತ್ತಿತರ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಆರೋಪದ ಮೇಲೆ  ಮೊಹಮ್ಮದ್‌ ತೌಕೀರ್‌ ಸಹಿತ ನಾಲ್ವರ ವಿರುದ್ಧ ಯುಎಪಿಎ ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಿರಿಯಾದಲ್ಲೇ ತರಬೇತಿ
ಮೊಹಮ್ಮದ್‌ ತೌಕೀರ್‌ ಮೊಹಮ್ಮದ್‌ ಉಗ್ರ ಸಂಘಟನೆಗಾಗಿ ಹಣ ಸಂಗ್ರಹಿಸುತ್ತಿದ್ದ. ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿ ದಕ್ಷಿಣ ಭಾರತದ ಮುಸ್ಲಿಂ ಯುವಕರನ್ನು ಸಂಘಟನೆಗೆ ನೇಮಿಸಿಕೊಳ್ಳುತ್ತಿದ್ದ. ಬಳಿಕ ಅವರನ್ನು ಐಸಿಸ್‌ ಸೇರಲು ಸಿರಿಯಾಕ್ಕೆ ಕಳುಹಿಸುತ್ತಿದ್ದ. 2013ರಲ್ಲಿ ಈತ ತನ್ನ ಸಹಚರರ ಜತೆ ಸೇರಿ ಐಸಿಸ್‌/ಐಎಸ್‌ಐಎಲ್‌/ಡಾಯಿಶ್‌ ನಾಯಕರನ್ನು ಸಂಪರ್ಕಿಸಲು ಸಿರಿಯಾಕ್ಕೆ ಭೇಟಿ ನೀಡಿ, ಸಂಘಟನೆ, ನೇಮಕಾತಿ ಚಟುವಟಿಕೆಗಳ ತರಬೇತಿ ಪಡೆದಿದ್ದ ಎಂದು ಎನ್‌ಐಎ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next