Advertisement

15 ವರ್ಷ ಕಿರಿಯನ ಜತೆ ಸುಷ್ಮಿತಾ ಸೇನ್‌ವಿವಾಹ?

07:54 AM Nov 10, 2018 | Team Udayavani |

ಮುಂಬಯಿ: ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್‌ (42) ಮುಂದಿನ ವರ್ಷ ತಮ್ಮ ಪ್ರಿಯತಮ ಹಾಗೂ ಮಾಡೆಲ್‌ ರೋಹ್ಮನ್‌ ಶಾಲ್‌ (27)ರನ್ನು ವರಿಸಲಿದ್ದಾರೆಂದು ಮೂಲಗಳು ತಿಳಿಸಿವೆ. ಈ ವಿಚಾರವನ್ನು ಸುಷ್ಮಿತಾ ಸೇನ್‌ ಆಪ್ತರೊಬ್ಬರು ತನಗೆ ಮಾಹಿತಿ ನೀಡಿರುವುದಾಗಿ “ಡಿಎನ್‌ಎ ವರದಿ ಮಾಡಿದೆ. ಅದರ ಪ್ರಕಾರ, ಸುಷ್ಮಿತಾ ತನಗಿಂತ 15 ವರ್ಷ ಕಿರಿಯವರಾಗಿರುವ  ಶಾಲ್‌ ಜತೆ  ಕಳೆದೆರಡು ತಿಂಗಳಿನಿಂದ ಡೇಟಿಂಗ್‌ನಲ್ಲಿದ್ದಾರೆ. ಈ ಸಹಜೀವನ ಇಬ್ಬರಿಗೂ ಖುಷಿ ನೀಡುತ್ತಿರುವುದರಿಂದ ಇಬ್ಬರೂ ಮುಂದಿನ ವರ್ಷಾಂತ್ಯದ ಹೊತ್ತಿಗೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ. ಶಾಲ್‌ ಅವರೇ ಮೊದಲು ಮದುವೆ ಪ್ರಸ್ತಾವನೆ ಮಾಡಿದ್ದು ಇದಕ್ಕೆ ಸುಷ್ಮಿತಾ ಒಪ್ಪಿದ್ದಾರೆ. ಇಬ್ಬರೂ ಸಾರ್ವಜನಿಕವಾಗಿ ಆಪ್ತತೆಯಿಂದ ಕಾಣಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next