Advertisement

ಸಚಿವೆ ಸುಷ್ಮಾಗೆ ಟ್ರೋಲ್‌

09:50 AM Jun 25, 2018 | Karthik A |

ಹೊಸದಿಲ್ಲಿ: ಲಕ್ನೋದಲ್ಲಿ ಅಂತರ್‌ ಧರ್ಮೀಯ ದಂಪತಿಗೆ ಪಾಸ್‌ಪೋರ್ಟ್‌ ಅಧಿಕಾರಿ ನೀಡಿದ ಕಿರುಕುಳ ವಿವಾದವನ್ನು ಪರಿಹರಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡಲಾಗಿದೆ. ಈ ಕುರಿತು ಸ್ವತಃ ಸುಷ್ಮಾ ಅವರೇ ರವಿವಾರ ಟ್ವೀಟ್‌ ಮಾಡಿದ್ದಾರೆ. ಪಾಸ್‌ಪೋರ್ಟ್‌ ಅಧಿಕಾರಿಯನ್ನು ಸಮರ್ಥಿಸಿಕೊಂಡಿರುವ ಅನೇಕರು ಸುಷ್ಮಾ ವಿರುದ್ಧ ಕಿಡಿಕಾರಿದ್ದಾರೆ. ‘ಸುಷ್ಮಾ ಅವರೇ ನಿಮಗೆ ನಾಚಿಕೆಯಾಗಬೇಕು. ಇದು ಇಸ್ಲಾಮಿಕ್‌ ಕಿಡ್ನಿ ಪಡೆದಿದ್ದರ ಫ‌ಲ’ ಎಂದು ಒಬ್ಬರು ಹೇಳಿದರೆ, ಮತ್ತೂಬ್ಬರು, ಸುಷ್ಮಾ ಕಾಂಗ್ರೆಸ್‌ ಗೆ ಸೇರುವ ಸಾಧ್ಯತೆಯಿದೆ. ಮುಸ್ಲಿಮರ ಪರ ನಿಂತ ನಿಮಗೆ ನಾಚಿಕೆಯಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
 

Advertisement

Advertisement

Udayavani is now on Telegram. Click here to join our channel and stay updated with the latest news.

Next