Advertisement

ಕುಸ್ತಿ ಲೀಗ್‌ ಹರಾಜು: 55 ಲಕ್ಷ ರೂ.ದಾಖಲೆ ಮೊತ್ತಕ್ಕೆ ಸುಶೀಲ್‌ ಮಾರಾಟ

07:45 AM Dec 24, 2017 | Team Udayavani |

ಸೋನೆಪತ್‌: ಎರಡು ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ತಂದ ಭಾರತದ ಖ್ಯಾತ ಕುಸ್ತಿ ಪಟು ಸುಶೀಲ್‌ ಕುಮಾರ್‌ ಶನಿವಾರ ನಡೆದ ಪ್ರೊಕುಸ್ತಿ ಲೀಗ್‌ ಹರಾಜಿನಲ್ಲಿ 55 ಲಕ್ಷ ರೂ. ದಾಖಲೆ ಮೊತ್ತಕ್ಕೆ ದಿಲ್ಲಿ ಸುಲ್ತಾನ್‌ ಫ್ರಾಂಚೈಸಿ ಪಾಲಾಗಿದ್ದಾರೆ. 

Advertisement

ಇದರೊಂದಿಗೆ ಕುಸ್ತಿ ಲೀಗ್‌ ಹರಾಜುವೊಂದರಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮೊತ್ತಕ್ಕೆ ಆಟಗಾರನೊಬ್ಬ ಮಾರಾಟಗೊಂಡಂತಾಗಿದೆ. ಸುಶೀಲ್‌ 3 ವರ್ಷದ ಬಳಿಕ ಇತ್ತೀಚೆಗೆ ರಾಷ್ಟ್ರೀಯ ಕೂಟದಲ್ಲಿ ಭಾಗವಹಿಸಿ ವಾಪಸ್‌ ಆಗಿದ್ದರು. ಉಳಿದಂತೆ 2 ಬಾರಿಯ ವಿಶ್ವ ಪದಕ ವಿಜೇತ ಇರಾನ್‌ನ ಹಸನ್‌ ರಹಿಮಿ 46 ಲಕ್ಷ ರೂ.ಗೆ ಹರ್ಯಾಣ ಹ್ಯಾಮ್ಮರ್ ಪಾಲಾದರು. ಮಹಿಳಾ ವಿಭಾಗದಲ್ಲಿ ಅಮೆರಿಕದ ಒಲಿಂಪಿಕ್ಸ್‌ ಪದಕ ವಿಜೇತೆ ಹೆಲೆನ್‌ ಮಾರೌಲಿಸ್‌ ಹರ್ಯಾಣ ಹ್ಯಾಮ್ಮರ್ ತಂಡಕ್ಕೆ 44 ಲಕ್ಷ ರೂ.ಗೆ ಮಾರಾಟಗೊಂಡರು. ಮಹಿಳಾ ವಿಭಾಗದಲ್ಲಿ ಅತ್ಯಧಿಕ ಮೊತ್ತಕ್ಕೆ ಮಾರಾಟಗೊಂಡ ಆಟಗಾರ್ತಿ ಎನಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next