ವಿಶಾಖಪಟ್ಟಂ: ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್ ಸತತ ಎರಡನೇ ಗೋಲ್ಡನ್ ಡಕ್ ದಾಖಲಿಸಿದರು.
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರು 4.4 ಓವರ್ ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಈ ವೇಳೆ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಮೊದಲ ಎಸೆತದಲ್ಲೇ ಔಟಾದರು. ಸೂರ್ಯ ಕೂಡಾ ಎಲ್ ಬಿ ಬಲೆಗೆ ಬಿದ್ದರು.
ಶುಕ್ರವಾರದಂದು ಮುಂಬೈನಲ್ಲಿ ನಡೆದ ಮೊದಲ ಏಕದಿನ ಸಂದರ್ಭದಲ್ಲಿ, ಸ್ಟಾರ್ಕ್ ಅವರ ಮೊದಲ ಎಸೆತದಲ್ಲೇ ಸೂರ್ಯಕುಮಾರ್ ಇದೇ ರೀತಿಯಲ್ಲಿ ಔಟಾಗಿದ್ದರು.
32 ವರ್ಷದ ಸೂರ್ಯಕುಮಾರ್ ಅವರು ಅದ್ಭುತ ಟಿ20 ದಾಖಲೆ ಹೊಂದಿದ್ದಾರೆ. ಆದರೆ ಏಕದಿನ ಮಾದರಿ ಸ್ವರೂಪದಲ್ಲಿ 20 ಇನ್ನಿಂಗ್ಸ್‌ಗಳ ಸೂರ್ಯಕುಮಾರ್ ಗಳಿಸಿದ್ದು ಕೇವಲ 433 ರನ್ ಮಾತ್ರ.