Advertisement
ಟಿ20 ವಿಶ್ವಕಪ್ ಸೂಪರ್-12 ಸುತ್ತಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್, 5 ಇನ್ನಿಂಗ್ಸ್‌ಗಳಲ್ಲಿ 3 ಅರ್ಧ ಶತಕ ಹೊಡೆದಿದ್ದರು. ಆಗ ಇವರ ರೇಟಿಂಗ್ ಅಂಕ ಜೀವನಶ್ರೇಷ್ಠ 869ಕ್ಕೆ ಏರಿತ್ತು. ಆದರೆ ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ ಕೇವಲ 14 ರನ್ ಮಾಡಿದ್ದರಿಂದ ಅಂಕ 859ಕ್ಕೆ ಇಳಿಯಿತು. ವಿಶ್ವಕಪ್‌ನಲ್ಲಿ ಸೂರ್ಯ ಸಾಧನೆ 239 ರನ್. ಸರಾಸರಿ 59.75 ಹಾಗೂ ಸ್ಟ್ರೈಕ್‌ರೇಟ್ 189.68. ಸೂರ್ಯಕುಮಾರ್ ಹೊರತುಪಡಿಸಿ ಭಾರತದ ಬೇರೆ ಯಾವುದೇ ಆಟಗಾರರು ಟಾಪ್-10 ಯಾದಿಯಲ್ಲಿಲ್ಲ.
ರ್‍ಯಾಂಕಿಂಗ್ ಯಾದಿಯಲ್ಲಿ ಭರ್ಜರಿ ನೆಗೆತ ಕಂಡವರೆಂದರೆ ಇಂಗ್ಲೆಂಡ್ ಆರಂಭ ಕಾರ ಅಲೆಕ್ಸ್ ಹೇಲ್ಸ್. ಭಾರತದೆದುರಿನ ಸೆಮಿಫೈನಲ್‌ನಲ್ಲಿ 47 ಎಸೆತಗಳಿಂದ 86 ರನ್ ಸಿಡಿಸಿದ ಅವರು ಒಮ್ಮೆಲೇ 22 ಸ್ಥಾನ ಮೇಲೇರಿ 12ನೇ ಸ್ಥಾನಕ್ಕೆ ಬಂದಿದ್ದಾರೆ. ಈ ವರ್ಷದ ಆದಿಯಲ್ಲಿ ಟಿ20ಗೆ ಮರಳಿದ ಬಳಿಕ ಹೇಲ್ಸ್ ಪ್ರಚಂಡ ಪ್ರದರ್ಶನ ನೀಡುತ್ತಿದ್ದು, 145.27ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 430 ರನ್ ಬಾರಿಸಿದ್ದಾರೆ. ಟಾಪ್-10 ಯಾದಿಯಲ್ಲಿ ಪ್ರಗತಿ ಸಾಧಿಸಿ ದವರೆಂದರೆ ಪಾಕ್ ನಾಯಕ ಬಾಬರ್ ಆಜಂ, ದಕ್ಷಿಣ ಆಫ್ರಿಕಾದ ರಿಲೀ ರೋಸ್ಯೂ. ಇವರಿಬ್ಬರೂ ಒಂದು ಸ್ಥಾನ ಮೇಲೇರಿದ್ದು, ಕ್ರಮವಾಗಿ 3ನೇ ಹಾಗೂ 7ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ಡೇವನ್ ಕಾನ್ವೇ 3ರಿಂದ 4ಕ್ಕೆ ಇಳಿದಿದ್ದಾರೆ.
Related Articles
ಸೆಮಿಮತ್ತು ಫೈನಲ್‌ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನವಿತ್ತ ಇಂಗ್ಲೆಂಡ್‌ನ ಆದಿಲ್ ರಶೀದ್ ಅವರದು 5 ಸ್ಥಾನ ಗಳ ನೆಗೆತ. ಅವರೀಗ 3ನೇ ಸ್ಥಾನಿ ಯಾಗಿದ್ದಾರೆ. ಇಂಗ್ಲೆಂಡ್‌ನ ಮತ್ತೋರ್ವ ಬೌಲರ್ ಸ್ಯಾಮ್ ಕರನ್ 2 ಸ್ಥಾನಗಳ ಪ್ರಗತಿ ಸಾಧಿಸಿದ್ದು, 5ಕ್ಕೆ ಬಂದಿದ್ದಾರೆ. ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ ಶಕಿಬ್, ಮೊಹಮ್ಮದ್ ನಬಿ ಮತ್ತು ಹಾರ್ದಿಕ್ ಪಾಂಡ್ಯ ಕ್ರಮವಾಗಿ ಒಂದರಿಂದ 3ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
Advertisement
ಟಾಪ್-10 ಟಿ20 ಬ್ಯಾಟರ್ಬ್ಯಾಟರ್ ಅಂಕ
1. ಸೂರ್ಯಕುಮಾರ್ ಯಾದವ್ 859
2. ಮೊಹಮ್ಮದ್ ರಿಜ್ವಾನ್ 836
3. ಬಾಬರ್ ಆಜಂ 778
4. ಡೇವನ್ ಕಾನ್ವೇ 771
5. ಐಡನ್ ಮಾರ್ಕ್‌ರಮ್ 748
6. ಡೇವಿಡ್ ಮಲಾನ್ 719
7. ರಿಲೀ ರೋಸ್ಯೂ 693
8. ಗ್ಲೆನ್ ಫಿಲಿಪ್ಸ್ 684
9. ಆರನ್ ಫಿಂಚ್ 680
10. ಪಥುಮ್ ನಿಸ್ಸಂಕ 673