ಲಕ್ನೋ: ರಾಮನವಮಿ ಸಂಭ್ರಮದ ನಡುವೆ ಬುಧವಾರ (ಏ.17) ಅಯೋಧ್ಯೆಯ ರಾಮಮಂದಿರದಲ್ಲಿನ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದ್ದು, ನೆರೆದಿದ್ದ ಸಾವಿರಾರು ಭಕ್ತರು ಈ ಕೌತುಕಕ್ಕೆ ಸಾಕ್ಷಿಯಾದರು.
ಇದನ್ನೂ ಓದಿ:ʼಖಲ್‌ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್‌ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
ನೂತನವಾಗಿ ನಿರ್ಮಾಣಗೊಂಡಿದ್ದ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22ರಂದು ಉದ್ಘಾಟಿಸಿದ್ದು, ರಾಮಲಲ್ಲಾ ಪ್ರಾಣಪ್ರತಿಷ್ಠೆಯ ನಂತರ ನಂದ ಮೊದಲ ರಾಮನವಮಿ ದಿನದಂದೇ ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದೆ.
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠೆಗೊಂಡ ಬಾಲರಾಮನ ಹಣೆಯ ಮೇಲೆ 12ಗಂಟೆ 1 ನಿಮಿಷಕ್ಕೆ ಸೂರ್ಯ ತಿಲಕ ಕಂಗೊಳಿಸಿದ್ದು, ಸುಮಾರು ಎರಡೂವರೆ ನಿಮಿಷಗಳ ಕಾಲ ಸೂರ್ಯರಶ್ಮಿ ಸ್ಪರ್ಶಿಸಿರುವುದಾಗಿ ವರದಿ ತಿಳಿಸಿದೆ.
ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿರುವ ಅಪೂರ್ವ ವಿದ್ಯಮಾನವನ್ನು ಅಯೋಧ್ಯೆಯಾದ್ಯಂತ ಸುಮಾರು 100 ಸ್ಥಳಗಳಲ್ಲಿ ಬೃಹತ್ ಎಲ್ ಇಡಿ ಪರದೆಗಳ ಮೂಲಕ ಪ್ರದರ್ಶಿಸಲಾಗಿತ್ತು.
ರೂರ್ಕಿಯ ಐಐಟಿ ವಿಜ್ಞಾನಿಗಳು ಈ ಕೌತುಕದ ವಿದ್ಯಮಾನದ ಕೌಶಲವನ್ನು ಕಾರ್ಯಗತಗೊಳಿಸಲು ಶ್ರಮಿಸಿದ್ದರು. ಪ್ರತಿವರ್ಷ ರಾಮನವಮಿ ದಿನದಂದು ಬಾಲರಾಮನ ಹಣೆಯ ಮೇಲೆ ಸೂರ್ಯರಶ್ಮಿ ಬೀಳುವಂತೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ.