Advertisement

ಜೂನ್ 21ರಂದು ಕಂಕಣ ಸೂರ್ಯಗ್ರಹಣ; 4ರಾಶಿಗೆ ಶುಭಫಲ, 8 ರಾಶಿಯವರಿಗೆ ಅಶುಭ!

04:04 PM Jun 18, 2020 | Nagendra Trasi |

ಮಣಿಪಾಲ: ಜೂನ್ 21ರ ಭಾನುವಾರ ಆಷಾಢ ಮಾಸದ ಅಮಾಸ್ಯೆಯಂದು 2020ರ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇನ್ನೂ ಕುತೂಹಲದ ಸಂಗತಿಯಂದರೆ ಸುಮಾರು 30 ಸೆಕೆಂಡುಗಳ ಕಾಲ ಸೂರ್ಯ ಮುತ್ತಿನ ಹಾರದಂತೆ ಗೋಚರಿಸಲಿದ್ದಾನೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ನಭೋಮಂಡಲದಲ್ಲಿ ನಡೆಯುವ ಈ ಅದ್ಭುತ ದೃಶ್ಯ ಚಿತ್ತಾರವನ್ನು ಹರ್ಯಾಣ, ಉತ್ತರಾಖಂಡ್ ಮತ್ತು ರಾಜಸ್ಥಾನದಲ್ಲಿ ಮಾತ್ರ ಕಾಣಬಹುದಾಗಿದೆ. ಇನ್ನುಳಿದಂತೆ ದೇಶದ ಹಲವೆಡೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ.

ಈ ಗ್ರಹಣ ಮಧ್ಯ ಆಫ್ರಿಕಾ, ಕಾಂಗೋ, ಇಥಿಯೋಪಿಯಾ, ಪಾಕಿಸ್ತಾನ, ಚೀನಾ ಹಾಗೂ ಭಾರತದ ಹಲವು ಕಡೆಗಳಲ್ಲಿ ಭಾಗಶಃವಾಗಿ ಗೋಚರಿಸಲಿದ್ದಾನೆ.

ಜೂನ್ 21ರಂದು ಭಾಗಶಃ(ಕಂಕಣ) ಸೂರ್ಯಗ್ರಹಣ ನಡೆಯಲಿದ್ದು, ಚಂದ್ರನು ತನ್ನ ಕಕ್ಷೆಯಲ್ಲಿ ಸಾಮಾನ್ಯಕ್ಕಿಂತಲೂ ದೂರದಲ್ಲಿರುವಾಗ ಇದು ಸಂಭವಿಸುತ್ತದೆ. ಸೂರ್ಯಗ್ರಹಣವನ್ನು ಬರೀಗಣ್ಣಿನಿಂದ ನೋಡುವುದು ಅಪಾಯಕಾರಿ. ದೂರದರ್ಶಕ, ಬೈನಾಕ್ಯೂಲರ್ ಅಥವಾ ಸುರಕ್ಷತಾ ಕನ್ನಡಕದ ಮೂಲಕ ವೀಕ್ಷಿಸಬಹುದಾಗಿದೆ.

ಎಷ್ಟು ಗಂಟೆಗೆ ಗ್ರಹಣ ಸಂಭವಿಸಲಿದೆ?
ಜೂನ್ 21ರ ಭಾನುವಾರ ಸೂರ್ಯನಿಗೆ ಮಿಥುನ ರಾಶಿ ಮೃಗಶಿರಾ ನಕ್ಷತ್ರದಲ್ಲಿ ರಾಹುಗ್ರಹಣ ಸಂಭವಿಸಲಿದೆ. ರಾಜಸ್ಥಾನದಲ್ಲಿ ಬೆಳಗ್ಗೆ 10.12ನಿಮಿಷಕ್ಕೆ ಸೂರ್ಯಗ್ರಹಣ ಆರಂಭವಾಗಲಿದೆ. ಮಧ್ಯಾಹ್ನ 3ಗಂಟೆ 19ನಿಮಿಷಕ್ಕೆ ಗ್ರಹಣದ ಪುಣ್ಯಕಾಲವಾಗಿರುತ್ತದೆ. ಮಧ್ಯಾಹ್ನ 1ಗಂಟೆ 23ನಿಮಿಷಕ್ಕೆ ಗ್ರಹಣ ಮೋಕ್ಷ ಕಾಲವಾಗಿದೆ.

Advertisement

ನಾಲ್ಕು ರಾಶಿಗೆ ಶುಭಫಲ:
ಮೃಗಶಿರಾ ನಕ್ಷತ್ರ ಮಿಥುನ ರಾಶಿಯಲ್ಲಿ ಸೂರ್ಯನಿಗೆ ರಾಹುಗ್ರಹಣ ಸಂಭವಿಸುವುದರಿಂದ ಕನ್ಯಾ, ಮಕರ, ಸಿಂಹ ಹಾಗೂ ಮೇಷ ರಾಶಿಯವರಿಗೆ ಶುಭಫಲ ಇದೆ. ಯಾವುದೇ ದುಷ್ಪರಿಣಾಮ ಇಲ್ಲ.

ಎಂಟು ರಾಶಿಗೆ ಅಶುಭ ಫಲ:
ಮಿಥುನ, ಕರ್ಕಾಟಕ, ತುಲಾ, ವೃಷಭ, ವೃಶ್ಚಿಕ, ಧನು, ಕುಂಭ ಮತ್ತು ಮೀನ ರಾಶಿಯವರಿಗೆ ಈ ಭಾಗಶಃ ಸೂರ್ಯಗ್ರಹಣದಿಂದ ಅಶುಭ ಫಲವಿದ್ದು, ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next