Advertisement

ವಿವಾದಿತ ಸಾರಾ ಕಲ್ಯಾಣ ಮಂಟಪ ವ್ಯಾಪ್ತಿಯಲ್ಲಿ ಸರ್ವೆ

05:12 PM Jun 12, 2021 | Team Udayavani |

ಮೈಸೂರು: ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆಗಂಭೀರ ಆರೋಪ ಎದುರಿಸುತ್ತಿರುವ ಶಾಸಕ ಸಾ.ರಾ.ಮಹೇಶ್‌ ಒಡೆತನದ ಸಾರಾ ಕಲ್ಯಾಣ ಮಂಟಪದ ಸುತ್ತಮುತ್ತ ಅಧಿಕಾರಿಗಳು ಸರ್ವೆ ನಡೆಸಿದರು.

Advertisement

ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಎಸಿ ವೆಂಕಟರಾಜು ಹಾಗೂ ತಹಶೀಲ್ದಾರ್‌ ರಕ್ಷಿತ್‌ ನೇತೃತ್ವದಲ್ಲಿ ಸರ್ವೆಕಾರ್ಯ ನಡೆಯಿತು.ಮೂಲ ಸರ್ವೆ, ರೀ ಸರ್ವೆ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ಮಾಡುತ್ತಿದ್ದೇವೆ. 11 ಜನರ ತಂಡಈ ಕಾರ್ಯದಲ್ಲಿ ಪಾಲ್ಗೊಂಡಿದೆ. ಸರ್ವೆ ಮುಗಿದ ಮೇಲೆಅದರ ವರದಿಯನ್ನು ಪ್ರಾದೇಶಿಕ ಆಯುಕ್ತರಿಗೆ ನೀಡಲಿದ್ದೇವೆ ಎಂದು ಸರ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಎಸಿ ವೆಂಕಟರಾಜು ಪ್ರತಿಕ್ರಿಯಿಸಿ, ಪ್ರಾದೇಶಿಕಆಯುಕ್ತರ ಸೂಚನೆಯಂತೆ ಸರ್ವೆ ನಡೆಯುತ್ತಿದೆ. ಸಾರಾಭವನ ರಾಜಕಾಲುವೆ ಮೇಲೆ ಕಟ್ಟಲಾಗಿದೆ ಎಂಬ ಆರೋಪಹಿನ್ನೆಲೆ, ಈ ಅಂಶದ ಮೇಲೆ ಸರ್ವೆ ನಡೆಯುತ್ತಿದೆ. ಇದೇಅಂಶವನ್ನು ಇಟ್ಟುಕೊಂಡು ಸರ್ವೆ ಮಾಡುತ್ತಿದ್ದೇವೆ. ಸರ್ವೆನಂಬರ್‌ 130/3 ಸೇರಿದಂತೆ ಅಕ್ಕಪಕ್ಕದ ಸ.ನಂನಲ್ಲಿ ಸರ್ವೆಕಾರ್ಯ ನಡೆಸಲಾಗುತ್ತಿದೆ. ಈ ಎಲ್ಲ ಪ್ರಕ್ರಿಯೆ ಮುಗಿದನಂತರ ಪ್ರಾದೇಶಿಕ ಆಯುಕ್ತರಿಗೆ ವರದಿ ಕೊಡ್ತೇವೆ ಎಂದು ತಿಳಿಸಿದರು.

ಮೈಸೂರು ನಗರ ಹಾಗೂ ಸುತ್ತಮುತ್ತ ಕೆರೆಒತ್ತುವರಿಯಾಗಿದ್ದು, ಭೂ ಹಗರಣ ನಡೆದಿದೆ ಎಂದುಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗಂಭೀರಆರೋಪ ಮಾಡಿದ್ದರು. ಬಳಿಕ ಶಾಸಕ ಸಾ.ರಾ.ಮಹೇಶ್‌ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ಕಟ್ಟಿದ್ದರೆ ಕ್ರಮಜರುಗಿಸುವಂತೆ ಗುರುವಾರ ಪ್ರಾದೇಶಿಕ ಆಯುಕ್ತರಿಗೆಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next