Advertisement

Survey Stay: ಮಸೀದಿ ಸಮೀಕ್ಷೆ ಮನವಿ ಪರಿಗಣಿಸದಂತೆ ಕೋರಿ ಸುಪ್ರೀಂಗೆ ಕಾಂಗ್ರೆಸ್‌ ಅರ್ಜಿ

02:46 AM Dec 03, 2024 | Team Udayavani |

ನವದೆಹಲಿ: ಉತ್ತರ ಪ್ರದೇಶದ ಸಂಭಲ್‌, ಜೈಪುರದ ಅಜ್ಮೇರ್‌  ದರ್ಗಾ ವಿವಾದದ ಬೆನ್ನಲ್ಲೇ, ದೇಶಾದ್ಯಂತ ಧಾರ್ಮಿಕ ಕೇಂದ್ರಗಳನ್ನು ಸಮೀಕ್ಷೆಗೊಳಪಡಿಸುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳದಂತೆ ಕೋರ್ಟ್‌ಗಳಿಗೆ ನಿರ್ದೇಶನ ಕೋರಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ನ ಕದ ತಟ್ಟಿದೆ.

Advertisement

1991ರ ಪೂಜಾ ಸ್ಥಳಗಳ ಕಾಯ್ದೆಗೆ ಅನುಸಾರ ನಡೆದುಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಬೇಕು. ಈ ಕಾಯ್ದೆಗೆ ವಿರುದ್ಧವಾಗಿ ಧಾರ್ಮಿಕ ಕಟ್ಟಡಗಳು ಅಥವಾ ಮಸೀದಿಗಳಿಗೆ ಸಂಬಂಧಿಸಿದೆ ಸಮೀಕ್ಷೆಗಳನ್ನು ಕೈಗೊಳ್ಳಬಾರದು ಎಂದು ಕಾಂಗ್ರೆಸ್‌ನ ಅಲೋಕ್‌ ಶರ್ಮಾ ಮತ್ತು ಪ್ರಿಯಾ ಮಿಶ್ರಾ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.

ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹಲವು ಮಸೀದಿಗಳ ಸಮೀಕ್ಷೆಗೆ ಕೋರ್ಟ್‌ಗಳು ಆದೇಶ ನೀಡಿದ್ದು ಹಿಂಸಾಚಾರಕ್ಕೆ ಕಾರಣವಾಗುತ್ತಿದೆ. ಸಂಭಲ್‌ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಅಲ್ಲದೇ, ಸಾಕಷ್ಟು ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next