ಗಂಗಾವತಿ: ತಾಲೂಕಿನ ಸಂಗಾಪುರ ಗ್ರಾಪಂ ವ್ಯಾಪ್ತಿಯ ರಾಜಾಪೂರ ಸೀಮಾದಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದ 7.18 ಎಕರೆ ಗಾಂವಠಾಣಾ ಭೂಮಿಯನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಗ್ರಾಪಂ ಅಧಿಕಾರಿಗಳು ಮತ್ತು ಭೂಮಾಪನಾ ಅಧಿಕಾರಿಗಳು ಸರ್ವೇ ಮಾಡಿ ಸರಹದ್ದು ನಿಗದಿ ಮಾಡಿದರು.
ಸರ್ವೇ ನಂಬರ್ 69 ಮತ್ತು 70ರಲ್ಲಿರುವ 7.18 ಎಕರೆ ಪ್ರದೇಶದ ಗಾಂವಠಾಣಾ ಭೂಮಿಯನ್ನು ಕೆಲವರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಗಾಂವಠಾಣಾ ಭೂಮಿಯನ್ನು ಬಿಡಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ನಿರಂತರವಾಗಿ ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ತಾಲೂಕು ಅಕ್ರಮ ಸಕ್ರಮ ಕಮಿಟಿ ಸದಸ್ಯ ಸಿದ್ಧಲಿಂಗಯ್ಯ ಗಡ್ಡಿಮಠ ಜಿಲ್ಲಾಡಳಿತಕ್ಕೆ ಸೂಕ್ತ ದಾಖಲೆಯೊಂದಿಗೆ ದೂರು ನೀಡಿ ಗಾಂವಠಾಣಾ ಭೂಮಿ ಅಕ್ರಮ ಸಾಗುವಳಿ ತಡೆದು ಗ್ರಾಪಂ ವಶಕ್ಕೆ ಪಡೆದುಕೊಂಡು ಬಡವರಿಗೆ ನಿವೇಶನ ಮಂಜೂರಿ ಮಾಡಲು ಮನವಿ ಮಾಡಿದ ಹಿನ್ನೆಲೆಯಲ್ಲಿ ನಿರಂತರ ಸರ್ವೇ ಹಾಗೂ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಅಕ್ರಮ ಸಾಗುವಳಿ ತಡೆದು ಸದ್ಯ 5 ಎಕರೆ ಭೂಮಿ ಸರ್ವೇ ನಡೆಸಿ ಸರಹದ್ದು ನಿಗದಿ ಮಾಡಲಾಗಿದೆ.
ಉಳಿದ 2.18 ಎಕರೆ ಪ್ರದೇಶದ ಗಾಂವಠಾಣಾ ಭೂಮಿಗೆ ಕಂದಾಯ ಇಲಾಖೆ ಅಧಿಕಾರಿಗಳು ಆರಿrಸಿ ಕೊಟ್ಟಿದ್ದು, ಕೂಡಲೇ ರದ್ದುಗೊಳಿಸುವಂತೆ ಸಹಾಯಕ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಶೀಘ್ರವೇ ಆರಿrಸಿ ರದ್ದುಗೊಳಿಸಿ ಭೂಮಿ ಸರ್ವೇ ನಡೆಸಿ ಸರಹದ್ದು ನಿಗದಿ ಮಾಡಿ ಗ್ರಾಪಂ ವ್ಯಾಪ್ತಿಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.
ಪ್ರಭಾವ ಬೀರಲು ಯತ್ನ: ಸಂಗಾಪುರ ಸರ್ವೇ ನಂಬರ್ 69-70ರಲ್ಲಿರುವ ಗಾಂವಠಾಣಾ ಭೂಮಿಯನ್ನು ಕೆಲವರು ಅಕ್ರಮವಾಗಿ ಉಳುಮೆ ಮಾಡುತ್ತಿದ್ದು, ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಿ ಅಕ್ರಮ ತೆರವುಗೊಳಿಸುವ ಕಾರ್ಯದ ಮಧ್ಯೆ ಕೆಲ ರಾಜಕೀಯ ಮುಖಂಡರು ಅಕ್ರಮ ತೆರವುಗೊಳಿಸದಂತೆ ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆನ್ನಲಾಗಿದೆ. ಅಕ್ರಮ ತೆರವುಗೊಳಿಸಿ ಬಡವರಿಗೆ ನಿವೇಶನ ಕೊಡುವ ತನಕ ಹೋರಾಟ ನಡೆಸಲಾಗುತ್ತದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಸಂಗಾಪುರ ಗ್ರಾಪಂ ವ್ಯಾಪ್ತಿಯ ರಾಜಾಪುರ ಸೀಮಾದಲ್ಲಿರುವ 7.18 ಎಕರೆ ಗಾಂವಠಾಣಾ ಭೂಮಿಯನ್ನು ಹಲವು ದಶಕಗಳಿಂದ ಅಕ್ರಮವಾಗಿ ಉಳುಮೆ ಮಾಡುತ್ತಿದ್ದಾರೆ. ಇದರಲ್ಲಿ 2.18 ಎಕರೆ ಭೂಮಿಯನ್ನು ಅಧಿಕಾರಿಗಳು ಆರ್ಟಿಸಿ ಮಾಡಿಕೊಟ್ಟಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈಗಾಗಲೇ 5 ಎಕರೆ ಪ್ರದೇಶದ ಗಾಂವಠಾಣಾ ಭೂಮಿ ಸರ್ವೇ ಮಾಡಿ ಸರಹದ್ದು ನಿಗದಿ ಮಾಡಲಾಗಿದೆ. ಶೀಘ್ರವೇ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮನವಿ ಮಾಡಿ ಬಡ ನಿವೇಶನ ರಹಿತರಿಗೆ ನಿವೇಶನ ಕೊಡಿಸಲಾಗುತ್ತದೆ. ಉಳಿದ 2.18 ಎಕರೆ ಗಾಂವಠಾಣಾ ಭೂಮಿಗೆ ನೀಡಿರುವ ಸಾಗುವಳಿ ಚೀಟಿ ರದ್ದುಪಡಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ
. –ಸಿದ್ಧಲಿಂಗಯ್ಯ ಗಡ್ಡಿಮಠ, ಸದಸ್ಯರು
ಅಕ್ರಮ ಸಕ್ರಮ ಕಮೀಟಿ ಈಗಾಗಲೇ ಸಂಗಾಪುರ ಗ್ರಾಪಂ ವ್ಯಾಪ್ತಿಯ ರಾಜಾಪುರ ಸೀಮಾದಲ್ಲಿ 7.18 ಎಕರೆ ಪ್ರದೇಶದ ಗಾಂವಠಾಣಾ ಭೂಮಿ ಇದ್ದು, ಇದರಲ್ಲಿ ಕೆಲವರು ಅಕ್ರಮವಾಗಿ ಕೃಷಿ ಮಾಡುತ್ತಿದ್ದರು. ಈ ಕುರಿತು ಹಲವು ಬಾರಿ ತಾಲೂಕು ಜಿಲ್ಲಾಡಳಿತಗಳಿಗೆ ಮಾಹಿತಿ ತಿಳಿಸಲಾಗಿತ್ತು. ಇತ್ತೀಚೆಗೆ ಸಹಾಯಕ ಆಯುಕ್ತರ ಆದೇಶದಂತೆ ಸದ್ಯ 5 ಎಕರೆ ಪ್ರದೇಶದ ಗಾಂವಠಾಣಾ ಭೂಮಿ ಸರ್ವೇ ಮಾಡಿ ಸರಹದ್ದು ನಿಗದಿ ಮಾಡಿ ಭೂಮಿಯನ್ನು ಗ್ರಾಪಂಗೆ ಕಬಾj ತೆಗೆದುಕೊಂಡು ಜಿಲ್ಲಾಡಳಿತಕ್ಕೆ ವರದಿ ಮಾಡಲಾಗಿದೆ. ಉಳಿದ 2.18 ಎಕರೆ ಗಾಂವಠಾಣಾ ಭೂಮಿ ನೀಡಿರುವ ಆರ್ಟಿಸಿ ರದ್ದು ಮಾಡುವಂತೆ ಪತ್ರ ಬರೆಯಲಾಗಿದೆ. –
ನೀಲಾ ಸೂರ್ಯಕುಮಾರಿ, ಸಂಗಾಪುರ ಗ್ರಾಪಂ ಪಿಡಿಒ
–ಕೆ. ನಿಂಗಜ್ಜ