Advertisement

ಪಾಲಿಕೆ ಆಸ್ತಿಗಳ ವಶಕ್ಕೆ ಸರ್ವೇ ಕಾರ‍್ಯ

05:58 AM Jun 12, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ತನ್ನ ಒಡೆತನದ ಆಸ್ತಿಗಳನ್ನು ಗುರುತಿಸಿ ವಶಕ್ಕೆ ಪಡೆಯಲು ಬಿಬಿಎಂಪಿ ಮುಂದಾಗಿದ್ದು, ಅದರ ಭಾಗವಾಗಿ ಹೊಂಬೇಗೌಡನಗರ ವಾರ್ಡ್‌ ವ್ಯಾಪ್ತಿಯ ಬನ್ನೇರಘಟ್ಟ ರಸ್ತೆಯ ಮೈಕೋ ಫ್ಯಾಕ್ಟರಿ ಹಿಂಭಾಗದ  ಲಕ್ಕಸಂದ್ರ ಗ್ರಾಮದ (ಸರ್ವೆ ಸಂಖ್ಯೆ 14) ಪ್ರದೇಶಗಳಲ್ಲಿ ಒತ್ತುವರಿಯಾ ಗಿರುವ ಜಾಗವನ್ನು ಮೇಯರ್‌ ಎಂ.ಗೌತಮ್‌ಕುಮಾರ್‌ ಗುರುವಾರ ಪರಿಶೀಲಿಸಿದರು.

Advertisement

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಬನ್ನೇರಘಟ್ಟ ರಸ್ತೆಯ ಮೈಕೋ  ಫ್ಯಾಕ್ಟರಿ ಹಿಂಭಾಗದ ಲಕ್ಕಸಂದ್ರ ಗ್ರಾಮದ ಸರ್ವೆ ಸಂ. 14ರ ಜಾಗವು ಪಾಲಿಕೆ ಆಸ್ತಿಗಳಾಗಿವೆ. ಈ ಭಾಗಗಳಲ್ಲಿ ಅಂದಾಜು 10.04 ಎಕರೆ ಪಾಲಿಕೆಗೆ ಸೇರಬೇಕಾದ ಜಾಗವಿದ್ದು, ಸರ್ವೇ ಮಾಡಿ ವಶಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳುವಂತೆ  ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next