Advertisement

ಸಮೀಕ್ಷೆ ನಂಬಲ್ಲ:120 ಸ್ಥಾನ ಗ್ಯಾರಂಟಿ; ದೇವೇಗೌಡ

07:05 AM Apr 15, 2018 | |

ಬೆಂಗಳೂರು: ಈ ಚುನಾವಣೆಯಲ್ಲಿ ಜೆಡಿಎಸ್‌ 120 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವುದು ಖಚಿತ. ಯಾವುದೇ ಸಮೀಕ್ಷೆಗಳನ್ನೂ ನಾನು ನಂಬುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ.

Advertisement

ಜೆಡಿಎಸ್‌ ಕಚೇರಿ “ಜೆಪಿ ‘ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, 2013 ರ ಚುನಾವಣೆಯಲ್ಲಿ ಜೆಡಿಎಸ್‌ಗೆ 13 ಸ್ಥಾನ ಬರುತ್ತೆ ಅಂತ ಸಮೀಕ್ಷೆಯಲ್ಲಿ ಹೇಳಿದ್ದರು, 40 ಸ್ಥಾನ ಬಂತು. ಇದೀಗ 43 ಅಂತ ಹೇಳಿದ್ದಾರೆ, 120 ಸ್ಥಾನ ಗೆಲೆ¤àವೆ ಎಂದು ಹೇಳಿದರು.

ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಕೊಟ್ಟಿರೋ ಅಂಕಿಯನ್ನು 3 ರಿಂದ ಗುಣಿಸಿದರೆ ಬರುವುದೇ ಜೆಡಿಎಸ್‌ ಫ‌ಲಿತಾಂಶ. ನನಗೆ ರಾಜ್ಯದ ಜನರಲ್ಲಿ ವಿಶ್ವಾಸವಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಜನತೆ ತಿರಸ್ಕರಿಸಲಿದ್ದಾರೆ ಎಂದರು.

ಬಿಡುಗಡೆ ಮಾಡಿ
ಇದಕ್ಕೂ ಮುನ್ನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲರನ್ನೂ ಉದ್ಧಾರ ಮಾಡುತ್ತೇವೆ ಎಂದು ಜಾತಿ ಜನಗಣತಿ ಮಾಡಿದ್ರು ಯಾಕೆ ವರದಿ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಪಿ.ಜಿ.ಆರ್‌.ಸಿಂದ್ಯಾ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬಂತು ಎಂದಾಗ ಮಾತ್ರ ದಲಿತರ ನೆನಪಾಗುತ್ತದೆ. ಇದೀಗ ನ್ಯಾ.ಸದಾಶಿವ ಆಯೋಗದ ವರದಿ ಬಗ್ಗೆ ಮಾತನಾಡುತ್ತಿದ್ದಾರೆ ಇಷ್ಟು ದಿನ ಯಾಕೆ ಮೌನವಾಗಿದ್ದರು ಎಂದು ಟೀಕಿಸಿದರು.

Advertisement

ದೇವೇಗೌಡರು ಸದಾ ಎಲ್ಲ ಜಾತಿಗಳ ಬಗ್ಗೆಯೂ ಸಮಾನ ಗೌರವ ಪ್ರೀತಿ ಹೊಂದಿದ್ದಾರೆ. ಅವರ  ಆಡಳಿತದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದರು. ರಾಜಕಾರಣದಲ್ಲಿ ಎರಡನೇ ಹಂತದ ನಾಯಕರನ್ನು ಬೆಳೆಸಿದ್ದು ದೇವೇಗೌಡರು ಎಂದು ಹೇಳಿದರು.

ಎಚ್‌ಸಿಎಂ ಎಂಬಿಬಿಎಸ್‌ ಮಾಡಿದ್ರಾ
ಎಚ್‌.ಸಿ.ಮಹದೇವಪ್ಪ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು ದೇವೇಗೌಡರು. ಎಂಬಿಬಿಎಸ್‌ ಮುಗಿಸದಿದ್ದರೂ ಆರೋಗ್ಯ ಸಚಿವರನ್ನಾಗಿ ಮಾಡಿದ್ರು ಎಂದು ಹೇಳಿದ ಸಿಂದ್ಯಾ. ಮಹದೇವಪ್ಪ ಎಂಬಿಬಿಎಸ್‌ ಪೂರ್ಣ ಮಾಡಿದ್ರಾ ಎಂದು ಪ್ರಶ್ನಿಸಿ ತಕ್ಷಣವೇ ಅದು ಅವರ ವೈಯಕ್ತಿಕ ವಿಚಾರ. ಅದನ್ನು ನಾನು ಕೆಣಕಲ್ಲ ಎಂದು ಸುಮ್ಮನಾದರು.

Advertisement

Udayavani is now on Telegram. Click here to join our channel and stay updated with the latest news.

Next