Advertisement
ಇದು ಅತ್ಯಾಧುನಿಕ ದರ್ಜೆಯ ಕೆಮರಾ ಆಗಿದ್ದು, ರಾತ್ರಿ ವೇಳೆಯ ಚಲನವನಗಳನ್ನು ಕೂಡ ಸೆರೆಹಿಡಿಯಬಲ್ಲದು. ಪ್ರತಿ ಜಂಕ್ಷನ್‌ಗಳಲ್ಲಿ ಅಳವಡಿಸಲಾದ ಪೋಲ್‌ನಲ್ಲಿ 360 ಡಿಗ್ರಿ ಸುತ್ತ ಸುತ್ತುವ ಕೆಮರಾ, ಅಲ್ಲದೆ ಪ್ರತ್ಯೇಕ 4 ಕೆಮರಾ ಇರಲಿದೆ. ಇವು ಸುತ್ತಮುತ್ತಲಿನ ಚಲನವಲನ ಸೆರೆಹಿಡಿಯಲು ಸಹಕಾರಿಯಾಗಲಿವೆ. ಇದೇ ಪೋಲ್‌ಗೆ ಸ್ಮಾರ್ಟ್ ಡಿಸ್ಪ್ಲೇ ಅಳವಡಿಸಲಾಗಿದ್ದು, ಇದರಲ್ಲಿ ಸಾರ್ವ ಜನಿಕರಿಗೆ ಮಾಹಿತಿ ಸಂದೇಶ ಬರಲಿದೆ. ಈ ಸ್ಮಾರ್ಟ್ ಪೋಲ್ ನಲ್ಲಿ ಆ್ಯಂಟೆನಾ ಬೂಸ್ಟರ್ ಮತ್ತು ಮೊಬೈಲ್ ಚಾರ್ಜಿಂಗ್ ಪ್ಲಗ್ ಪಾಯಿಂಟ್ ಇರಲಿದೆ.
15 ಜಂಕ್ಷನ್‌ಗಳಲ್ಲಿನ ಸ್ಮಾರ್ಟ್ ಪೋಲ್‌ನಲ್ಲಿ “ಎಸ್‌ಒಎಸ್’ ಬಟನ್ (ತುರ್ತು ಸಂದೇಶ) ಇರಲಿದೆ. ಆ ಪ್ರದೇಶದಲ್ಲಿ ಹೋಗುತ್ತಿರುವವರಿಗೆ, ಸಂದರ್ಭ ತುರ್ತು ಆವಶ್ಯಕತೆ ಇದ್ದರೆ ಆ ಬಟನ್ ಒತ್ತಬಹುದು. ಆಗ ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್‌ಗೆ ಕರೆ ಹೋಗುತ್ತದೆ. ಬಳಿಕ ಸಮ ಸ್ಯೆಗೆ ಅಧಿಕಾರಿಗಳು ಸ್ಪಂದಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
Related Articles
ಮೊದಲನೇ ಹಂತದಲ್ಲಿ ಮಲ್ಲಿಕಟ್ಟೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಬಿಜೈಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿ, ಪಂಪ್‌ವೆಲ್, ವಾಮಂಜೂರು, ಪಡೀಲ್, ಬಿಜೈ, ಬೆಂದೂರು, ಫಳ್ನೀರ್, ಮೋರ್ಗನ್ಸ್ ಗೇಟ್, ಕುಲಶೇಖರ-ಶಕ್ತಿನಗರ ಕ್ರಾಸ್, ಕೊಟ್ಟಾರ ಚೌಕಿ, ಕುಂಟಿಕಾನ, ರಾವ್ ಆ್ಯಂಡ್ ರಾವ್ ವೃತ್ತ, ಪದವಿನಂಗಡಿ, ಕಾವೂರು ಜಂಕ್ಷನ್‌ನಲ್ಲಿಯೂ ಈ ರೀತಿಯ ಸ್ಮಾರ್ಟ್ ಕೆಮರಾ ಅಳವಡಿಸಲಾಗುತ್ತದೆ.
Advertisement
5 ಲಕ್ಷ ರೂ. ವೆಚ್ಚಮಂಗಳೂರು ನಗರದ 15 ಜಂಕ್ಷನ್‌ಗಳಲ್ಲಿ ಸ್ಮಾರ್ಟ್ ಸಿಸಿ ಕೆಮರಾ ಅಳವಡಿಸಲಾಗುತ್ತಿದ್ದು, ಒಂದು 360 ಡಿಗ್ರಿ ಸುತ್ತುವ ಸಿಸಿ ಕೆಮರಾ ಮತ್ತು 4 ಸಿಸಿ ಕೆಮರಾ ಇರಲಿದೆ. 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಸದ್ಯ ಮಲ್ಲಿ ಕಟ್ಟೆಯಲ್ಲಿ ನಿರ್ಮಾಣ ಪೂರ್ಣ ಗೊಂಡಿದೆ.
-ಮೊಹಮ್ಮದ್ ನಜೀರ್ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ