Advertisement

‘ಒಪ್ಪುವ’ಮಹಿಳೆ ಬಾಡಿಗೆ ತಾಯಿಯಾಗಬಹುದು

10:09 AM Feb 07, 2020 | Hari Prasad |

ಹೊಸದಿಲ್ಲಿ: ಹತ್ತಿರದ ಸಂಬಂಧಿಗಳು ಮಾತ್ರವಲ್ಲದೆ, ಯಾವುದೇ ಒತ್ತಡಗಳಿಗೆ ಒಳಗಾಗದೆ ‘ಒಪ್ಪಿಕೊಳ್ಳುವ’ ಯಾವುದೇ ಮಹಿಳೆಗೆ ಬೇಕಾದರೂ ಬಾಡಿಗೆ ತಾಯಿಯಾಗಲು ಅವಕಾಶ ನೀಡಬಹುದು ಎಂದು ಸಂಸದೀಯ ಸಮಿತಿ ತಿಳಿಸಿದೆ.

Advertisement

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ-2019 ಕುರಿತಂತೆ ರಚನೆಯಾಗಿರುವ ರಾಜ್ಯಸಭೆಯ 23 ಸದಸ್ಯರನ್ನು ಒಳಗೊಂಡ ಸಮಿತಿ ಈ ಶಿಫಾರಸು ಮಾಡಿದೆ. ಅಲ್ಲದೆ, ಯಾವುದೇ ಸುರಕ್ಷತೆಗಳಿಲ್ಲದೆ ಲೈಂಗಿಕ ಕ್ರಿಯೆ ನಡೆಸಿದ ಹೊರತಾಗಿಯೂ ದಂಪತಿಗೆ ಮಕ್ಕಳಾಗದಿದ್ದರೆ ‘ಬಂಜೆತನ’ ಎಂದು ಘೋಷಿಸಲು ಇರುವ ಐದು ವರ್ಷಗಳ ಅವಧಿಯನ್ನು ಕಡಿತಗೊಳಿಸಬೇಕು.

ದಂಪತಿ ಮಗುವನ್ನು ಪಡೆಯಲು ಇಷ್ಟು ದೀರ್ಘ‌ ಅವಧಿವರೆಗೆ ಕಾಯುವ ಅಗತ್ಯವಿಲ್ಲ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ. ಹಾಗೇ 35ರಿಂದ 45 ವರ್ಷದೊಳಗಿನ ವಿಧವೆ ಅಥವಾ ವಿಚ್ಛೇದಿತ ‘ಭಾರತೀಯ ಒಂಟಿ ಮಹಿಳೆ’ಗೆ ಸಹ ಬಾಡಿಗೆ ತಾಯ್ತನದ ಪ್ರಯೋಜನ ಪಡೆಯುವ ಅವಕಾಶ ನೀಡಬೇಕು. ಹಾಗೇ ಹತ್ತಿರದ ಸಂಬಂಧಿಗಳು ಮಾತ್ರ ಬಾಡಿಗೆ ತಾಯಂದಿರಾಗಬೇಕು ಎನ್ನುವುದರಿಂದ ಹಲವರನ್ನು ಅವಕಾಶ ವಂಚಿತರನ್ನಾಗಿ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರಿದೆ.

Advertisement

Udayavani is now on Telegram. Click here to join our channel and stay updated with the latest news.

Next