Advertisement

ಶರಣರು ಮಾನವತಾವಾದದ ಪ್ರತಿಪಾದಕರು

12:37 PM Jul 18, 2017 | Team Udayavani |

ಕಲಬುರಗಿ: ಜಾತಿ, ಮತ. ಪಂಗಡ ಹಾಗೂ ಮೌಡ್ಯಗಳನ್ನು ತೊರೆದು ಕಾಯಕನಿಷ್ಠೆಯಿಂದ ದುಡಿದು ಅನುಭಾವದಿಂದ ನಿಜದ ಬದುಕು
ಅರಿಯಬೇಕೆನ್ನುವ ಮಾನವತಾವಾದವನ್ನು 12ನೇ ಶತಮಾನದಲ್ಲಿ ಶರಣರು ಬಿತ್ತಿದ್ದಾರೆ ಎಂದು ಹಿರಿಯ ಉಪನ್ಯಾಸಕ ಚಂದ್ರಕಾಂತ ನಿರಗುಡಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ನ್ಯೂಮಾಕಾ ಲೇಔಟ್‌ ಬಡಾವಣೆಯಲ್ಲಿ ಈರಣ್ಣ ಬೆಣ್ಣೆಶಿರೂರ್‌ ಮನೆಯಲ್ಲಿ ಜ್ಞಾನಿ ಶ್ರೀಗುರು ಹಡಪದ ಅಪ್ಪಣ್ಣ ಸೇವಾ ಟ್ರಸ್ಟ್‌ ಹಮ್ಮಿಕೊಂಡಿದ್ದ ಶರಣ ಹಡಪದ ಅಪ್ಪಣ್ಣನವರ 883ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು 
ಮಾತನಾಡಿದರು. ಇವತ್ತು ಆಳುವವರು ತಮ್ಮ ಇಚ್ಛೆಗೆ ಅನುಸಾರವಾಗಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಸ್ವಾರ್ಥ, ಪಟ್ಟಭದ್ರ ಹಿತಾಸಕ್ತಿಗಳು ಇಲ್ಲದ ಮೌಡ್ಯತೆ, ಕಂದಾಚಾರಗಳಲ್ಲಿ ನಮ್ಮನ್ನು ಸಿಲುಕಿಸಿ ಭಯದಿಂದ ಬದುಕುವ ಅನಿವಾರ್ಯತೆಗೆ 
ಕೊಂಡೊಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಹಡಪದ ಸಮಾಜದ ಮುಖಂಡರಾದ ಶಾಂತಪ್ಪ ಕಟ್ಟಿಮನಿ ಕಮಲಾಪುರ ಮಾತನಾಡಿ, ಹಡಪದ ಅಪ್ಪಣ್ಣನವರ ಉತ್ತರಾಧಿಕಾರಿಗಳಾದ ನಾವು ಇಂದು ನಗರ ಹಳ್ಳಿಗಳಲ್ಲಿ ಹರಿದು ಹಂಚಿಹೋಗಿ ಅಸಂಘಟಿತರಾಗಿದ್ದೇವೆ. ಇದು ನಮ್ಮ ಸಮಾಜ 
ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿಯುವಿಕೆಗೆ ಮುಖ್ಯ ಕಾರಣ ಎಂದರು. ವಕೀಲ ರಾಜಕುಮಾರ ಹಲ್ಲೂರ ಮಾತನಾಡಿ, ಜಾತಿ, ಧರ್ಮಗಳು ಇಂದು ನಮ್ಮ ದೇಶದ ಅಭಿವೃದ್ಧಿಗೆ ತೊಡಕಾಗಿ ಕಾಡುತ್ತಿವೆ ಎಂದು ಹೇಳಿದರು. ಮಲ್ಲಿನಾಥ ಹನ್ನೂರ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ ಅಧ್ಯಕ್ಷರಾದ ಎಸ್‌.ಕೆ ತೆಲ್ಲೂರ, ನಾಗಭೂಷಣ್‌, ಶಿವಕಾಂತ ಸೊನ್ನ, ಪ್ರಕಾಶ ಕಟ್ಟಿಮನಿ, ಈರಣ್ಣ ಬೆಣ್ಣೆಶಿರೂರ, ಶಾಂತಪ್ಪ ಕೋಡ್ಲಿ, ಚಂದ್ರಕಾಂತ ಮಾದನ ಹಿಪ್ಪರಗಿ, ರಾಜು ಹನ್ನೂರ, ಮಹಾರುದ್ರಪ್ಪ ಮರತೂರ, ಭೀಮರಾವ್‌ ಹೆಮನೂರ, ಮಯೂರ ಹೆಮನೂರ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next