Advertisement

Surgical Strike ಹೀರೊ ಲ್ಯಾನ್ಸ್ ನಾಯಕ್‌ ಸಂದೀಪ್‌ ಸಿಂಗ್‌ ಹುತಾತ್ಮ

02:19 PM Sep 25, 2018 | Team Udayavani |

ಶ್ರೀನಗರ: ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ್ದ ವೀರ ಯೋಧ ಲ್ಯಾನ್ಸ್ ನಾಯಕ್‌ ಸಂದೀಪ್‌ ಸಿಂಗ್‌ ಅವರು ಸೋಮವಾರ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ. 

Advertisement

ಸೋಮವಾರ ತಾಂಗ್‌‌ಧಾರ್‌ ಸೆಕ್ಟರ್‌ನಲ್ಲಿ ನಡೆದ ಭಾರೀ ಗುಂಡಿನ ಕಾಳಗದಲ್ಲಿ  ಗುಂಡಿಗೆ ಎದೆಯೊಡ್ಡಿದ ಸಂದೀಪ್‌ ಸಿಂಗ್‌  ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಅಮರರಾಗಿದ್ದಾರೆ.

ಗುರುದಾಸ್‌ಪುರದಲ್ಲಿ ಅವರ ಅಂತಿಮ ಯಾತ್ರೆಯನ್ನು ಸಕಲ ಮಿಲಿಟರಿ ಗೌರವಗಳೊಂದಿಗೆ ನಡೆಸಲಾಯಿತು. 

2016 ರ ಸರ್ಜಿಕಲ್‌ ಸ್ಟೈಕ್‌ ನಡೆಸಿದ ವೀರಯೋಧರಲ್ಲಿ ಓರ್ವರಾಗಿದ್ದ ಸಂದೀಪ್‌ ಸಿಂಗ್‌ ಅವರು ಪತ್ನಿ ಮತ್ತು 5 ವರ್ಷದ ಮಗನನ್ನು ಅಗಲಿದ್ದಾರೆ. 

Advertisement

ತಲೆಗೆ ಗುಂಡು ಹೊಕ್ಕರೂ ಹೋರಾಡಿದ ಸಿಂಹ !
ಗುಂಡಿನ ಚಕಮಕಿ ವೇಳೆ ಉಗ್ರರ ಗುಂಡು ತಲೆಗೆ ಹೊಕ್ಕರೂ ಹೋರಾಟ ನಿಲ್ಲಿಸದ ರಣ ಕಲಿ ದೇಶಕ್ಕಾಗಿ ಮಡಿದು ನಿಜಾರ್ಥದಲ್ಲಿ ನಾಯಕನಾಗಿದ್ದಾರೆ. ಸಂದೀಪ್‌ ಸಿಂಗ್‌ ನಿಧನಕ್ಕೆ ಗಣ್ಯರು ಸೇರಿದಂತೆ ದೇಶಾದ್ಯಂತ ತೀವ್ರ ಕಂಬನಿ ಮಿಡಿಯಲಾಗಿದೆ.

ತಾಂಗ್‌ಧಾರ್‌ನಲ್ಲಿ  ಗಡಿನುಸುಳುತ್ತಿದ್ದ ಮೂವರು ಉಗ್ರರನ್ನು ಸೋಮವಾರ ಹತ್ಯೆಗೈಯಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next