Advertisement

ಗಂಗೂಲಿ, ಧೋನಿ ಕಾಲದಲ್ಲಿ ಹೀಗೆ ಆಗುತ್ತಿರಲಿಲ್ಲ, ನನ್ನನ್ನು ತಂಡದಿಂದ ಕೈಬಿಟ್ಟಿದ್ಯಾಕೆ: ರೈನಾ

01:41 PM Apr 17, 2020 | keerthan |

ಮುಂಬೈ: ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವನ್ನು ಸುರೇಶ್‌ ರೈನಾ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ 2018ರ ಇಂಗ್ಲೆಂಡ್‌ ಪ್ರವಾಸದ ಬಳಿಕ ತನ್ನನ್ನು ತಂಡದಿಂದ ಕೈಬಿಟ್ಟಿದ್ದೇಕೆ ಎಂದೂ ಕೇಳಿದ್ದಾರೆ. ಈ ಬಗ್ಗೆ ಇನ್ನೂ ನನಗೆ ಮಾಹಿತಿಯಿಲ್ಲ, ಕಾರಣವೇ ಗೊತ್ತಾಗದಿದ್ದರೆ ತಿದ್ದಿಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

Advertisement

ಸೌರವ್‌ ಗಂಗೂಲಿ, ಧೋನಿ ನಾಯಕರಾಗಿದ್ದಾಗ ಏನು ತಪ್ಪಾಗಿದೆ ಎಂದು ಹೇಳುತ್ತಿದ್ದರು. ಕೊಹ್ಲಿಯೂ ಅದನ್ನು ಮಾಡುತ್ತಾರೆ. ಆದರೆ ಆಯ್ಕೆಸಮಿತಿ ಮಾತ್ರ ಯಾವುದನ್ನೂ ಸರಿಯಾಗಿ ಹೇಳುವುದಿಲ್ಲ. ಏನನ್ನೂ ಹೇಳದಿದ್ದರೆ ಗೊತ್ತಾಗುವುದು ಹೇಗೆ ಎಂದು ಕೇಳಿದ್ದಾರೆ.

ನಾನು ಯೋಯೋ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೇನೆ. ಆದರೂ ತಂಡಕ್ಕೆ ಸೇರಿಸಿಕೊಂಡಿಲ್ಲ. ಆಯ್ಕೆ ಸಮಿತಿ ಹಿರಿಯರ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನೀವೆಷ್ಟೇ ದೊಡ್ಡ ಆಟಗಾರರಾಗಿರಿ ಅಂತಿಮವಾಗಿ ನಿಮ್ಮ ಪ್ರದರ್ಶನವೇ ಇಲ್ಲಿ ಮುಖ್ಯವಾಗುವುದು. ನನ್ನ ಕೊರತೆಯೇನೆಂದು ತಿಳಿಸಿದರೆ ತಿದ್ದಿಕೊಳ್ಳುತ್ತೇನೆಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

ರೈನಾ 2018, ಜುಲೈ 17ರಂದು ಲೀಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಿದ್ದರು. ಅನಂತರ ತಂಡಕ್ಕೆ ಆಯ್ಕೆಯಾಗಿಲ್ಲ. ಸದ್ಯ 33 ವರ್ಷದ ರೈನಾ, 18 ಟೆಸ್ಟ್‌, 226 ಏಕದಿನ, 78 ಟಿ20 ಪಂದ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next