Advertisement
ಸರಣಿಯಲ್ಲಿನ್ನೂ 2 ಪಂದ್ಯ ಬಾಕಿ ಇದೆಯಾದರೂ ಬುಧವಾರದ ಮುಖಾ ಮುಖೀಯೇ ಹೆಚ್ಚು ಮಹತ್ವದ್ದಾಗಿದೆ. ಕಾರಣ, ಇದನ್ನು ಗೆದ್ದವರಿಗೆ ಸರಣಿ ಸೋಲಿನ ಅಪಾಯ ಎದುರಾಗದು. 4ನೇ ಹಾಗೂ ಅಂತಿಮ ಪಂದ್ಯ ಶುಕ್ರವಾರ ಜೊಹಾನ್ಸ್ಬರ್ಗ್ ನಲ್ಲಿ ನಡೆಯಲಿದೆ.
Related Articles
Advertisement
ಅರ್ಷದೀಪ್ ಡರ್ಬನ್ನಲ್ಲಿ 25ಕ್ಕೆ ಒಂದು ವಿಕೆಟ್ ಕೆಡವಿದರೆ, ಗೆಬೆರಾದಲ್ಲಿ ಒಂದು ವಿಕೆಟಿಗೆ 41 ರನ್ ನೀಡಿದರು. ಇವರ 3ನೇ ಹಾಗೂ 4ನೇ ಓವರ್ಗಳಲ್ಲಿ ಒಟ್ಟು 28 ರನ್ ಸೋರಿ ಹೋಯಿತು. ಸ್ಟಬ್ಸ್ ಒಂದೇ ಓವರ್ನಲ್ಲಿ 4 ಬೌಂಡರಿ ಬಾರಿಸಿ ಪಂದ್ಯಕ್ಕೆ ತಿರುವು ಕೊಟ್ಟರು. 3ನೇ ಪಂದ್ಯದಲ್ಲಿ ಯಶ್ ದಯಾಳ್ ಅಥವಾ ವಿಜಯ್ಕುಮಾರ್ ವೈಶಾಖ್ಗೆ ಅವಕಾಶ ಲಭಿಸೀತು.
ಪಿಚ್ ಹೇಗೇ ಇರಲಿ, ಭಾರತದ ಬ್ಯಾಟಿಂಗ್ ಕ್ಲಿಕ್ ಆಗಬೇಕಾದುದು ಅತೀ ಅಗತ್ಯ. ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಶತಕದಿಂದ ಭಾರತದ ಸರದಿಗೊಂದು ಕಳೆ ಬಂದಿತ್ತು. ಆದರೆ ರವಿವಾರ ಸಂಜು ಸೇರಿದಂತೆ ಎಲ್ಲರೂ ವೈಫಲ್ಯ ಅನುಭವಿಸಿ ದರು. ಅಭಿಷೇಕ್, ಸೂರ್ಯ, ತಿಲಕ್, ರಿಂಕು, ಪಾಂಡ್ಯ ಸಿಡಿದರೆ ದೊಡ್ಡ ಮೊತ್ತ ಅಸಾಧ್ಯ ವೇನಲ್ಲ. ಬೇಕಿದ್ದರೆ ಬಿಗ್ ಹಿಟ್ಟರ್ ರಮಣ್ದೀಪ್ ಸಿಂಗ್ ಅವರಿಗೂ ಅವಕಾಶ ಕೊಟ್ಟು ನೋಡಬಹುದು.
ದ. ಆಫ್ರಿಕಾ ಬ್ಯಾಟಿಂಗ್ ಕೂಡ ಕ್ಲಿಕ್ ಆಗಿಲ್ಲ. ಮಾರ್ಕ್ರಮ್, ಕ್ಲಾಸೆನ್, ಮಿಲ್ಲರ್ ಸಿಡಿದಿಲ್ಲ. ಇವರಲ್ಲಿ ಒಬ್ಬರು ಮುನ್ನುಗ್ಗಿ ಬಾರಿಸಿದರೂ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ.
ಸೆಂಚುರಿಯನ್ನಲ್ಲಿ ಒಂದೇ ಪಂದ್ಯ
ಸೆಂಚುರಿಯನ್ನಲ್ಲಿ ಈವರೆಗೆ ಭಾರತ ಆಡಿದ್ದು ಒಂದೇ ಟಿ20 ಪಂದ್ಯ. 2018ರ ಈ ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾ 6 ವಿಕೆಟ್ಗಳಿಂದ ಭಾರತವನ್ನು ಮಣಿಸಿತ್ತು. ಕೊಹ್ಲಿ ಪಡೆ 4ಕ್ಕೆ 188 ರನ್ ಮಾಡಿದರೆ, ದಕ್ಷಿಣ ಆಫ್ರಿಕಾ 18.4 ಓವರ್ಗಳಲ್ಲಿ 4ಕ್ಕೆ 189 ರನ್ ಬಾರಿಸಿತ್ತು. ಅಂದು ಆಡಿದ, ಇಂದೂ ಭಾರತ ತಂಡದಲ್ಲಿರುವ ಏಕೈಕ ಆಟಗಾರನೆಂದರೆ ಹಾರ್ದಿಕ್ ಪಾಂಡ್ಯ.