ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶವೇನೋಪ್ರಕಟವಾಗಿದೆ. ಆದರೆ, ಈ ಬಾರಿ ರಾಜ್ಯ ಸರ್ಕಾರ ಪದವಿಕಾಲೇಜುಗಳಲ್ಲಿ ಶೇ.40ರಷ್ಟು ಹೆಚ್ಚುವರಿಯಾಗಿ ಸೀಟುಗಳನ್ನು ಕಲ್ಪಿಸಬೇಕಾಗಿದೆ. ಏಕೆಂದರೆ ಈ ಬಾರಿ ಬರೋಬ್ಬರಿ6.66 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
2019-20ನೇ ಸಾಲಿಗೆ ಹೋಲಿಸಿದರೆ, ಉನ್ನತ ಮತ್ತುಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಸಂಖ್ಯೆ ಶೇ.30 ಹೆಚ್ಚಾಗಿದೆ. ದ್ವಿತೀಯ ಶ್ರೇಣಿಯಲ್ಲಿತೇರ್ಗಡೆಯಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.50ಹಾಗೂ ತೃತೀಯ ದರ್ಜೆಯಲ್ಲಿ ತೇರ್ಗಡೆಯಾದವಿದ್ಯಾರ್ಥಿಗಳಲ್ಲಿ ಶೇ.20 ಹೆಚ್ಚಳವಾಗಿದೆ.
ಹೀಗೆ ದ್ವಿತೀಯದರ್ಜೆ ಹಾಗೂ ತೃತೀಯ ದರ್ಜೆಯಲ್ಲಿ ಶೇ.70ರಷ್ಟುವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಈ ವರ್ಷ ತೇರ್ಗಡೆಯಾಗಿರುವುದರಿಂದ ಆ ಎಲ್ಲ ವಿದ್ಯಾರ್ಥಿಗಳಿಗೆ ಪದವಿಕೋರ್ಸ್‌ಗಳಲ್ಲೇ ದಾಖಲಾತಿ ಕಲ್ಪಿಸಬೇಕಿದೆ.2020ರಲ್ಲಿ ಶೇ.61.80, 2019ರಲ್ಲಿ ಶೇ.61.73,2018ರಲ್ಲಿ ಶೇ.59.56ರಷ್ಟು ವಿದ್ಯಾರ್ಥಿಗಳು ಮಾತ್ರದ್ವಿತೀಯಪಿಯುಸಿಮುಖ್ಯಪರೀಕ್ಷೆಯಲ್ಲಿಪಾಸಾಗಿದ್ದರು.
ಆದರೆ 2021ರಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳುಪಾಸಾಗಿರುವುದರಿಂದ ಒಂದೇ ವರ್ಷದಲ್ಲಿ ಶೇ.39ರಿಂದಶೇ.41ರಷ್ಟು ಸೀಟು ಹೆಚ್ಚಳ ಮಾಡಬೇಕಿದೆ.ಸೀಟು ಹೆಚ್ಚಿಸುವ ಅಗತ್ಯ: ಕಲಾ ವಿಭಾಗದ 1,95,034,ವಾಣಿಜ್ಯವಿಭಾಗದ2,51,686 ಹಾಗೂವಿಜ್ಞಾನ ವಿಭಾಗದ2,19,777 ವಿದ್ಯಾರ್ಥಿಗಳು ಸೇರಿ 6,66,497ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದರಿಂದ ಇದರಲ್ಲಿವಿಜ್ಞಾನ ವಿಭಾಗದ ಉನ್ನತ ಹಾಗೂ ಪ್ರಥಮ ಶ್ರೇಣಿಯಲ್ಲಿಬಂದಿರುವ ಸುಮಾರು 1.80 ಲಕ್ಷ ವಿದ್ಯಾರ್ಥಿಗಳನ್ನುಹೊರತುಪಡಿಸಿ ಉಳಿದ ಎಲ್ಲ ವಿದ್ಯಾರ್ಥಿಗಳು ಪದವಿಕೋರ್ಸ್‌ಗಳನ್ನೇ ಸೇರಿಕೊಳ್ಳಲಿದ್ದಾರೆ ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ, ದಂತ ವೈದ್ಯಕೀಯ,ಎಂಜಿನಿಯರಿಂಗ್, ಕೃಷಿ ವಿಜ್ಞಾನ ಕೋರ್ಸ್‌ಗಳನ್ನುಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ.
ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧಕೋರ್ಸ್‌ಗಳಲ್ಲೂ ಸೀಟುಗಳ ಪ್ರಮಾಣವನ್ನು ಹೆಚ್ಚಳಮಾಡಬೇಕಾಗಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಸಾಮಾನ್ಯಪದವಿ ಕೋರ್ಸ್‌ಗಳ ಸೀಟಿನ ಪ್ರಮಾಣವನ್ನುದಾಖಲಾತಿಗೂ ಮೊದಲೇ ಸರ್ಕಾರ ಹೆಚಳ c ಮಾಡಬೇಕಿದೆ.ಕಲಾ ವಿಭಾಗದ 1.95 ಲಕ್ಷ ಹಾಗೂ ವಾಣಿಜ್ಯವಿಭಾಗದ 2.15 ಲಕ್ಷ ಸೇರಿ ಸುಮಾರು 4 ಲಕ್ಷವಿದ್ಯಾರ್ಥಿಗಳು ಬಿ.ಎ, ಬಿ.ಕಾಂ, ಬಿಬಿಎಂ, ಬಿಬಿಎ ಹಾಗೂವಿಜ್ಞಾನ ವಿಭಾಗದ ಸಾವಿರಾರು ವಿದ್ಯಾರ್ಥಿಗಳು ಬಿ.ಎಸ್ಸಿ,ಬಿಸಿಎ ಮೊದಲಾದ ಕೋರ್ಸ್‌ಗಳನ್ನು ಸೇರಲಿದ್ದಾರೆ. ಎಲ್ಲವಿದ್ಯಾರ್ಥಿಗಳಿಗೂ ದಾಖಲಾತಿ ಸಿಗುವಂತೆ ಸರ್ಕಾರವ್ಯವಸ್ಥೆ ಮಾಡಲೇ ಬೇಕಿದೆ.