Advertisement
ಸೋಮವಾರ ವಿಧಾನಸೌಧದಲ್ಲಿ ನ.30ರಿಂದ ಡಿ. 5ರವರಗೆ ನಡೆಯುವ ಸಕಾಲ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ನಂತರ ಸಕಾಲ ಸೇವೆಗಳಲ್ಲಿ ಸ್ವಲ್ಪ ವ್ಯತ್ಯಯವಾಗಿದ್ದು, ಅದಕ್ಕೆ ಚುರುಕು ನೀಡಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆಗಳನ್ನು ಪಡೆಯಲು ಅನುವಾಗುವಂತೆ ಸಕಾಲ ಸೇವೆಗಳ ಕುರಿತು ಜಾಗೃತಿ ಮೂಡಿಸಲು ಸಪ್ತಾಹ ಆಚರಿಸಲಾಗುತ್ತಿದೆ ಎಂದರು.
Related Articles
Advertisement
ಸಕಾಲ ಸೇವೆ ಯೋಜನೆ ಅರಂಭವಾದಂದಿನಿಂದ ಈ ತನಕ 22,88,81,652 ಅರ್ಜಿಗಳು ಬಂದಿದ್ದು, ಅದರಲ್ಲಿ 22,82,55,686 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಸಕಾಲ ಅರ್ಜಿ ವಿಲೇವಾರಿಯಲ್ಲಿ ಮಂಡ್ಯ ಜಿಲ್ಲೆ ಪ್ರಥಮ, ಚಿಕ್ಕಮಗಳೂರು ದ್ವಿತೀಯ, ಚಿಕ್ಕಬಳ್ಳಾಪುರ ತೃತೀಯ ಸ್ಥಾನ ಪಡೆದರೆ, ರಾಯಚೂರು, ಬೀದರ್ ಮತ್ತು ಬೆಂಗಳೂರು ನಗರ ಕೊನೆಯ ಮೂರು ಸ್ಥಾನದಲ್ಲಿವೆ ಎಂದು ಸಚಿವರು ಹೇಳಿದರು.
ವಿಶೇಷವಾಗಿ ಪ್ರತಿಯೊಂದು ಇಲಾಖಾ ಕಚೇರಿಯಲ್ಲೂ ಸಕಾಲ ಸೇವೆ ಪಡೆಯುವ ಕುರಿತು ಸಾರ್ವಜನಿಕರ ಗಮನಕ್ಕೆ ಬರುವಂತೆ ಫಲಕ ಹಾಕುವುದು ಕಡ್ಡಾಯವಾಗಿದ್ದು, ಸಕಾಲ ಸೇವೆಗಳು ಇರುವ ಕುರಿತಂತೆ ಇಲಾಖೆಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಹಾಗೆಯೇ ಸೇವೆಯ ವಿಳಂಬದ ಕುರಿತು ಮೇಲ್ಮನವಿ ಸಲ್ಲಿಸಿ ಪರಿಹಾರ ಪಡೆಯುವ ಕುರಿತು ಜಾಗೃತಿ ಮೂಡಿಸುವುದು ಇಲಾಖೆಗಳ ಕರ್ತವ್ಯವಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.