ಮುಳಬಾಗಿಲು: ಕೋವಿಡ್ ತಡೆಗಾಗಿ ಮಕ್ಕಳ ಹಿತದೃಷಿಯಿಂದ ಸರ್ಕಾರ 1ರಿಂದ 5ನೇ ತರಗತಿವಿದ್ಯಾರ್ಥಿಗಳಿಗೆ ಶಾಲೆ ನಡೆಸದಂತೆ ಆದೇಶ ಮಾಡಿದೆ.ಇದನ್ನು ಎಲ್ಲಾ ಶಾಲೆಗಳು ಪಾಲಿಸಬೇಕು. ತಪ್ಪಿದಲ್ಲಿಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.
ನಗರದ ಡಿವಿಜಿ ಬಾಲಕರ ಮತ್ತು ಬಾಲಕಿಯರ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ದರು.ಶಿಥಿಲಗೊಂಡಿರುವ ಡಿವಿಜಿಶಾಲೆಯನ್ನು ಒಸಾಟ್ ಸಂಸ್ಥೆ ದತ್ತು ಪಡೆದು ಕೊಂಡು ಮೂಲ ಸೌಲಭ್ಯದೊಂದಿಗೆ ಶಾಲೆ, ಸ್ಮಾರಕ ನಿರ್ಮಿಸುವ ಉದ್ದೇಶದಿಂದ ಡಿವಿಜಿ ಶಾಲಾಕಟ್ಟಡ ನೆಲಸಮ ಮಾಡಿ, ಕಟ್ಟಡನಿರ್ಮಾಣಕ್ಕಾಗಿ ಸರ್ಕಾರ ದಿಂದ ಅನುಮೋದನೆ ನೀಡಬೇಕು ಎಂಬಮನವಿಗೆ ಶಿಕ್ಷಣ ಸಚಿವರು, ಶಾಸಕ ಎಚ್.ನಾಗೇಶ್ ಸಮ್ಮುಖದಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಮುಖಂಡರ ಸಭೆ ನಡೆಸಿ ಚರ್ಚಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಡಿವಿಜಿ ಶ್ರಮ: ಸಾಹಿತ್ಯ ಲೋಕದದಿಗ್ಗಜ, ಮಂಕುತಿಮ್ಮನ ಕಗ್ಗದ ಖ್ಯಾತಿಯ ಡಿವಿಜಿಹಲವು ಕ್ಷೇತ್ರಗಳಲ್ಲಿ ಶ್ರಮಿಸಿದ್ದಾರೆ. ಅವರ ನೆನಪಿಗಾಗಿ ಜಿಲ್ಲಾಡಳಿತ 1987ರಲ್ಲಿ ಅವರ ವಾಸದ ಮನೆಯನ್ನುಶಾಲೆಯಾಗಿ ಮಾರ್ಪಡಿಸಿದ್ದು, ಈ ಶಾಲೆ ಪ್ರಸ್ತುತಶಿಥಿಲಾವಸ್ತೆ ತಲುಪಿದೆ. ಇದನ್ನು ಸ್ಮಾರಕ ಮಾಡಲು ಒಸಾಟ್ ಸಂಸ್ಥೆ ದತ್ತು ಪಡೆದುಕೊಂಡಿದೆ. ಅಲ್ಲದೆ, ಕೋಟ್ಯಂತರ ವೆಚ್ಚದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಂಸ್ಥೆಯನ್ನು ಸರ್ಕಾರ ಸ್ವಾಗತಿಸಲಿದೆ ಎಂದರು.
ಸೌಲಭ್ಯದೊಂದಿಗೆ ಶಾಲೆ, ಸ್ಮಾರಕ ನಿರ್ಮಾಣ: ಡಿವಿಜಿ ಮನೆಯನ್ನು ಮೂಲ ಸೌಲಭ್ಯದೊಂದಿಗೆ ಶಾಲೆ, ಸ್ಮಾರಕ ಮಾಡಲು ಒಸಾಟ್ ಸಂಸ್ಥೆ ಅಗತ್ಯ ಯೋಜನೆ ತಯಾರಿಗೆ ಅನುಕೂಲವಾಗುವಂತೆಮುಂದಿನ ಶೈಕ್ಷಣಿಕ ವರ್ಷದಲ್ಲಿ ಕಟ್ಟಡ ತೆರವುಗೊಳಿಸಿ,ಸಮೀಪದಲ್ಲಿಯೇ ಖಾಲಿ ಕಟ್ಟಡದಲ್ಲಿ ಬಾಲಕರುಮತ್ತು ಬಾಲಕೀಯರ ಶಾಲೆ ನಡೆಸಬೇಕು ಎಂದು ಡಿಡಿಪಿಐ ಕೃಷ್ಣ ಮೂರ್ತಿಗೆ ಸೂಚಿಸಿದರು. ಸ್ಥಳದ ಕೊರತೆ ನೀಗಿಸಲು ಶಾಲೆ ನೆಲಸಮ ಮಾಡಿ, ಸದರಿಸ್ಥಳದಲ್ಲಿ ಸ್ಮಾರಕ, ಮಕ್ಕಳು ವ್ಯಾಸಾಂಗಕ್ಕೆ ಶಾಲೆ ನಿರ್ಮಾಣದ ಕ್ರಮಗಳ ಮೇಲ್ವಿಚಾರಣೆಗೆ ಜಿಪಂ ಸಿಇಒ ಗಮನ ನೀಡಬೇಕು ಎಂದು ಹೇಳಿದರು.
ಸರ್ಕಾರಿ ಆದೇಶ ಉಲ್ಲಂ ಸಬೇಡಿ: ಕೋವಿಡ್ ಕುರಿತು ಮಕ್ಕಳ, ಪೋಷಕರ ಆತಂಕ ತಡೆಗೆ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ. ಸರ್ಕಾರಿ ಆದೇಶಗಳನ್ನುಶಾಲೆಗಳು ಪಾಲಿಸಬೇಕು. ಕೋವಿಡ್ 2ನೇ ಅಲೆಹಿನ್ನೆಲೆಯಲ್ಲಿ 6ನೇ ತರಗತಿ ನಂತರದ ಮಕ್ಕಳಿಗೆ ಮಾತ್ರತರಗತಿ ನಡೆಸುತ್ತಿದ್ದೇವೆ. ಯಾವುದೇ ಶಾಲೆಗಳುಸರ್ಕಾರದ ನಿಯಮ ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಪೋಷಕರು ಮಕ್ಕಳ ಬಗ್ಗೆ ಆತಂಕ ಬೇಡ. ಶೈಕ್ಷಣಿಕ ವರ್ಷ ಪ್ರಾರಂಭದ ನಂತರಎಲ್ಲಾ ಸಮಸ್ಯೆ ಪರಿಹರಿಸಲಾ ಗುವುದು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆ ನೀಗಲಿದೆ ಎಂದರು.
ಶಾಸಕ ಎಚ್.ನಾಗೇಶ್, ಡೀಸಿ ಡಾ.ಆರ್. ಸೆಲ್ವಮಣಿ, ಜಿಪಂ ಸಿಇಒ ನಾಗರಾಜ್, ಡಿಡಿಪಿಐಕೃಷ್ಣಮೂರ್ತಿ, ತಹಶೀಲ್ದಾರ್ ರಾಜಶೇಖರ್, ಪೌರಾಯುಕ್ತ ಶ್ರೀನಿವಾಸಮೂರ್ತಿ, ಒಸಾಟ್‌ಸುಧೀರ್ ಹುಲಿಮನೆ, ಬಾರದ್ವಾಜ್, ರವಿಕುಮಾರ್,ಪ್ರಭಾರಿ ಬಿಇಒ ಆನಂದ್, ಮುಖ್ಯ ಶಿಕ್ಷಕ ಸಿ.ಸೊಣ್ಣಪ್ಪ ಟಿಎಚ್‌ಒ ವರ್ಣಶ್ರೀ, ಜಬೀವುಲ್ಲಾ, ವೈ.ಎನ್.ರಾಜಶೇಖರ್, ಎಂ.ಪ್ರಸಾದ್, ಮಂಡಿಕಲ್ ರಾಜು,ಇ.ಶ್ರೀನಿವಾಸಗೌಡ, ಶಂಕರ್ ಕೇಸರಿ, ಚಾನ್‌ಪಾಷ,ಶಕ್ತಿ ಪ್ರಸಾದ್, ನಂದಕಿಶೋರ್, ರಹಮತ್‌ವುಲ್ಲಾ,ಕೋಳಿ ನಾಗರಾಜ್, ನರಸಿಂಹನ್, ಮದುಸೂದನ್, ಶಿಕ್ಷಕಿ ಪದ್ಮಾವತಿ, ಆರ್.ಶಾರದಮ್ಮ, ಬಾಲಾಜಯ್ಯ, ಕೋದಂಡರಾಮಯ್ಯ, ಕೆ.ಚಂದ್ರ ಇದ್ದರು.