Advertisement

ಸೆ.13: ಸುರತ್ಕಲ್‌ ಟೋಲ್‌ಗೇಟ್‌ ತೆರವು ದಿನಾಂಕ ಘೋಷಣೆ ಒತ್ತಾಯಿಸಿ ಪ್ರತಿಭಟನೆ

11:59 AM Aug 27, 2022 | Team Udayavani |

ಮಂಗಳೂರು : ಸುರತ್ಕಲ್‌ ಟೋಲ್‌ಗೇಟ್‌ ತೆರವಿನ ದಿನಾಂಕವನ್ನು ಜಿಲ್ಲಾಡಳಿತ ಅಥವಾ ಹೆದ್ದಾರಿ ಪ್ರಾಧಿಕಾರ ಅಧಿಕೃತವಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಸೆ.13ರಂದು ಎನ್‌ಐಟಿಕೆ ಟೋಲ್‌ ಪ್ಲಾಜಾ ಎದುರು ವಿವಿಧ ಸಂಘಟನೆ ಗಳ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ತಿಳಿಸಿದರು.

Advertisement

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುರತ್ಕಲ್‌ ಟೋಲ್‌ಗೇಟ್‌ ಅನ್ನು ಒಂದು ತಿಂಗಳಲ್ಲಿ ತೆರವುಗೊಳಿಸಲಾಗುವುದು ಎಂದು ಇತ್ತೀಚೆಗೆ ನಡೆದ ದಿಶಾ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದೀಗ ಟೋಲ್‌ ಸಂಗ್ರಹದ ಗುತ್ತಿಗೆಯನ್ನು ಒಂದು ವರ್ಷದ ಅವಧಿಗೆ ನವೀಕರಿಸಲಾಗಿದೆ. ಈ ಕಾರಣದಿಂದ ಟೋಲ್‌ಗೇಟ್‌ ತೆರವಿನ ಅಧಿಕೃತ ದಿನಾಂಕ ಘೋಷಿಸಬೇಕು ಎಂದವರು ಆಗ್ರಹಿಸಿದರು.

ಬಿ.ಸಿ.ರೋಡ್‌ನಿಂದ ಮುಕ್ಕ ವರೆಗೆ ಬ್ರಹ್ಮರಕೂಟ್ಲು ಹಾಗೂ ಸುರತ್ಕಲ್‌ ನಲ್ಲಿ ಟೋಲ್‌ಗೇಟ್‌ ಕಾರ್ಯಾಚರಿಸುತ್ತಿದೆ. ಈವರೆಗೆ ಸುಮಾರು 450 ಕೋಟಿ ರೂ.ಗೂ ಹೆಚ್ಚು ಸುಂಕ ಸಂಗ್ರಹಿಸಲಾಗಿದೆ. ಹೆದ್ದಾರಿಗೆ ಹೂಡಿಕೆ ಮಾಡಿರುವ ಹಣಕ್ಕಿಂತ ಹೆಚ್ಚು ಹಣ ಸಂಗ್ರಹ ವಾಗಿದೆ. ಸುರತ್ಕಲ್‌ ಟೋಲ್‌ಗೇಟ್‌ ತೆರವುಗೊಳಿಸಿದರೆ ಯಾವುದೇ ಕಾರಣಕ್ಕೂ ಹೆಜಮಾಡಿ ಅಥವಾ ತಲಪಾಡಿ ಟೋಲ್‌ ಪ್ಲಾಜಾಗಳಲ್ಲಿ ದರ ಹೆಚ್ಚಳ ಮಾಡಬಾರದು. ಹೆದ್ದಾರಿ ಹೊಂಡ ಮುಚ್ಚುವ, ದಾರಿದೀಪ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಕೂಳೂರು ಹೊಸ ಸೇತುವೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಸಾಮಾಜಿಕ ಮುಖಂಡ ಎಂ.ಜಿ. ಹೆಗಡೆ, ಸಮಿತಿಯ ಮುಖಂಡರಾದ ವೈ. ರಾಘವೇಂದ್ರ ರಾವ್‌, ಪುರು ಷೋತ್ತಮ ಚಿತ್ರಾಪುರ, ರಘು ಎಕ್ಕಾರು, ದಿನೇಶ್‌ ಹೆಗ್ಡೆ ಉಳೆಪ್ಪಾಡಿ, ಪ್ರತಿಭಾ ಕುಳಾಯಿ, ಬಿ.ಕೆ.ಇಮ್ತಿಯಾಝ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next