Advertisement
ಕಾಮಗಾರಿ ಎಷ್ಟರಮಟ್ಟಿಗೆ ಮುಗಿದಿದೆ ಎಂದು ಕೇಳಿದರೆ ಸಿಗುವ ಉತ್ತರ “ಪ್ರಗತಿಯಲ್ಲಿದೆ!’. ಎರಡು ವರ್ಷಗಳ ಹಿಂದೆ ಕಾಮಗಾರಿ ಆರಂಭವಾಗಿತ್ತಾದರೂ ಕಳೆದ ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡಿತ್ತು. ಇನ್ನೂ ಪೂರ್ಣಗೊಳ್ಳಲಿಕ್ಕೆ ಒಂದೂವರೆ ವರ್ಷ ಹಿಡಿಯಬಹುದು.
Related Articles
ಸುರತ್ಕಲ್‌ನ ಎತ್ತರದ ಪ್ರದೇಶದಿಂದ ನೇರವಾಗಿ ನೀರು ಇಲ್ಲಿನ ಮಾರ್ಕೆಟ್ ತಳ ಅಂತಸ್ತಿಗೆ ಬಂದು ಸೇರು ತ್ತಿದ್ದು, ಸುಮಾರು ಎಂಟು ಅಡಿಗಳಷ್ಟು ನೀರು ಕಳೆದ ಮಳೆಗಾಲದಲ್ಲಿ ನಿಂತಿತ್ತು. ಇದನ್ನು ಖಾಲಿ ಮಾಡಲೇ ಮಹಾನಗರ ಪಾಲಿಕೆ ಲಕ್ಷಾಂತರ ರೂ. ವ್ಯಯಿಸಬೇಕಾದ ಕಾರಣ ಸುಮ್ಮನಾಯಿತು. ಸುರತ್ಕಲ್‌ನ ವಿವಿಧ ಪ್ರದೇಶಗಳ ಚರಂಡಿ ನೀರು ಕೂಡ ಮಳೆಗಾಲದಲ್ಲಿ ಒಟ್ಟಿಗೆ ಸಾಗುತ್ತಿದ್ದ ಕಾರಣ ಮಾರ್ಕೆಟ್ ಸುತ್ತಮುತ್ತ ಸ್ವತ್ಛತೆಯ ಸಮಸ್ಯೆ ಎದು ರಾಗಿತ್ತು. ಈಗಿನ ತಾತ್ಕಾಲಿಕ ಮಾರ್ಕೆಟ್, ಮುಡಾ ಮಾರ್ಕೆಟ್ ಸಹಿತ ವಿವಿಧೆಡೆ ಅಲೆಮಾರಿ ಕುಟುಂಬಗಳು ಬೀಡು ಬಿಟ್ಟಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ಈ ಮಳೆಗಾಲದಲ್ಲಿ ಪ್ರಾಣಕ್ಕೆ ಕಂಟಕ ಬರುವ ಅಪಾಯ ವಿದೆ. ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇ ರಿಯಾ ಹೆಚ್ಚಳ ಅಂಕಿ ಅಂಶಗಳಿಂದ ಸಾಬೀತಾಗಿದೆ.
Advertisement
ಅತ್ಯಾಧುನಿಕ ಕಾಂಪ್ಲೆಕ್ಸ್ ಮಾದರಿ ಮಾರ್ಕೆಟ್ಸುರತ್ಕಲ್ನ ಈ ಮಾರ್ಕೆಟ್ ಜಿಲ್ಲೆ ಮಾತ್ರವಲ್ಲ ರಾಜ್ಯದಲ್ಲಿಯೇ ಸರಕಾರಿ ಸ್ವಾಮ್ಯದ ದೊಡ್ಡ ಮಾರ್ಕೆಟ್ ಆಗಿದೆ. 200ರಿಂದ 250 ಚದರ ಅಡಿ ಅಂಗಡಿಗಳು ಜತೆಗೆ ಹೊಟೇಲ್‌ಗಳು, ಫ್ಯಾನ್ಸಿ, ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಳಿಗೆ ಹೀಗೆ ಎಲ್ಲದಕ್ಕೂ ಅನುವು ಮಾಡಿಕೊಡುವ ಯೋಜನೆ ಇದರಲ್ಲಿದೆ. ಅತ್ಯಾಧುನಿಕ ಫ್ಲೋರಿಂಗ್, ಆಕರ್ಷಕ ವಿನ್ಯಾಸ ಹೊಂದಿರಲಿದೆ. ತಾತ್ಕಾಲಿಕ ಮಾರುಕಟ್ಟೆಯಲ್ಲಿ ಇದೀಗ 250ಕ್ಕೂ ಮಿಕ್ಕಿ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದು, 70 ಕ್ಕೂ ಅಧಿ ಕ ತರಕಾರಿ,ಹಣ್ಣ ಹಂಪಲು, ವ್ಯಾಪಾರಿಗಳಿದ್ದಾರೆ. ಮೀನು, ಮಾಂಸ ಮಾರಾಟಕ್ಕೂ ಅವಕಾಶ ಇರಲಿದೆ. ಪಾರ್ಕಿಂಗ್ ಆದ್ಯತೆ ನೀಡಲಾಗಿದ್ದು ಕಾರು, ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 2 ವರ್ಷ ಬದಲು 4 ವರ್ಷ?
ಮಾರುಕಟ್ಟೆಯನ್ನು 2018ರಲ್ಲಿ ತೆರವು ಮಾಡುವ ಸಂದರ್ಭ ಅಂದಾಜು 2 ವರ್ಷಗಳಲ್ಲಿ ಪೂರ್ಣಗೊಳಿ ಸುವ ಭರವಸೆ ನೀಡಲಾಗಿತ್ತು. 2019ರ ವರೆಗೆ ಎಣಿಸಿದಂತೆಯೆ ಕಾಮಗಾರಿ ವೇಗವಾಗಿ ನಡೆದರೂ ಕೊರೊನಾ ಸಂಕಷ್ಟ ಎದುರಾಯಿತು. ಇದೀಗ ತಾತ್ಕಾಲಿಕ ಮಾರುಕಟ್ಟೆಯ ಸಣ್ಣ ಗೂಡಿನಂತಹ ಅಂಗಡಿಗಳಲ್ಲಿದ್ದು, ಜಾಗ ಸಾಕಾಗದೆ ಜನರು ನಡೆದಾಡುವ ದಾರಿಯಲ್ಲೂ ವಹಿವಾಟು ವಿಸ್ತರಿಸಲಾಗಿದೆ. - ಲಕ್ಷ್ಮೀನಾರಾಯಣ ರಾವ್