Advertisement

ಸುರತ್ಕಲ್‌-ಕಾನಾ-ಕಾರ್ಗೋಗೇಟ್‌ ಚತುಷ್ಪಥ ಕಾಮಗಾರಿಗೆ ವೇಗ

01:35 PM Nov 04, 2022 | Team Udayavani |

ಸುರತ್ಕಲ್‌: ನಿತ್ಯ ಸಾವಿರಾರು ಟ್ಯಾಂಕರ್‌, ಬುಲೆಟ್‌ ಟ್ಯಾಂಕರ್‌, ಸಿಲಿಂಡರ್‌ ಹೊತ್ತ ಲಾರಿಗಳ ಓಡಾಟವಿರುವ ಸುರತ್ಕಲ್‌ ಕಾರ್ಗೋಗೇಟ್‌ವರೆಗಿನ ಚತುಷ್ಪಥ ರಸ್ತೆ ಕಾಮಗಾರಿಗೆ ವೇಗ ದೊರಕಿದೆ.

Advertisement

ಸೆಪ್ಟಂಬರ್‌ 26ರಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಒಂದು ತಿಂಗಳಿನಿಂದ ರಸ್ತೆಯ ಇಕ್ಕೆಲಗಳನ್ನು ವಿಸ್ತರಿಸುವ ಕಾರ್ಯ ನಡೆಯುತ್ತಿದೆ. ಎಂಆರ್‌ ಪಿಎಲ್‌ ಕಾರ್ಗೋಗೆಟ್‌ ನಿಂದ ಮತ್ತು ಸುರತ್ಕಲ್‌ ರೈಲ್ವೇ ಬ್ರಿಡ್ಜ್ ಪಾಯಿಂಟ್‌ ನಿಂದ ಕಾಮಗಾರಿ ಆರಂಭಿಸಲಾಗಿದೆ. ರಸ್ತೆ ವಿಸ್ತರಣೆಗೆ ಈ ಭಾಗದಲ್ಲಿ ಸರಕಾರಿ ಜಾಗವೇ ಇರುವುದರಿಂದ ಹೆಚ್ಚಿನ ಶ್ರಮವಿಲ್ಲದೆ ಕಾಮಗಾರಿ ನಡೆಯುತ್ತಿದೆ. ಮಳೆ ನೀರು ಹರಿದು ಹೋಗಲು ಕಲ್ವರ್ಟ್‌, ಚರಂಡಿ ನಿರ್ಮಾ ಣಕ್ಕೆ ಬೇಕಾದ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯವೂ ನಡೆಯಲಿದೆ. ನಿತ್ಯ ವಾಹನ ಓಡಾಟಕ್ಕೆ ಅಡಚಣೆಯಾದಂತೆ ಒಂದು ಕಡೆಯಿಂದ ಅವಕಾಶ ಕಲ್ಪಿಸಲಾಗಿದೆ.

ಒಳಚರಂಡಿ ವ್ಯವಸ್ಥೆಯ ಸಮಸ್ಯೆ ಕಾನಾ ಬಳಿಯ ಮಸೀದಿ ಬಳಿಯಿಂದ ಮಿಸ್ಕಿತ್‌ ಆಸ್ಪತ್ರೆಯ ವರೆಗೆ ಸೂಕ್ತ ಒಳಚರಂಡಿ ವ್ಯವಸ್ಥೆಯ ಸಮಸ್ಯೆಯಿದ್ದು, ನೀರನ್ನು ನೇರವಾಗಿ ರಸ್ತೆ ಬದಿಗೆ ಬಿಡಲಾಗುತ್ತಿರುವ ಪರಿಣಾಮ ದುರ್ವಾಸನೆ ಬೀರುತ್ತಿದೆ. ಇದಕ್ಕೂ ವ್ಯವಸ್ಥೆ ಯೋಜನೆ ರೂಪಿಸಿ ಸ್ವಚ್ಛತೆಗೆ ಆದ್ಯತೆ ನೀಡುವ ಕೆಲಸವೂ ನಡೆಯಲಿದೆ.

ಮಂಗಳೂರು ಮಹಾನಗರ ಪಾಲಿಕೆ ಇಲ್ಲವೇ ಸ್ಮಾರ್ಟ್‌ ಸಿಟಿ ಅನುದಾನದಿಂದ ಸುಸಜ್ಜಿತ ಬಸ್‌ ತಂಗುದಾಣ ನಿರ್ಮಿಸಲು ಸ್ಥಳ ಗುರುತು ನಡೆಯಲಿದೆ. ಇನ್ನು ಈ ಭಾಗದಲ್ಲಿ ರಸ್ತೆ ವಿಸ್ತರಣೆಗೆ ಅಡ್ಡಿಯಾದ ಅತಿಕ್ರಮಣ ತೆರವು ನಡೆದಿದ್ದು, ಕಾಮಗಾರಿ ನಿರಾತಂಕವಾಗಿ, ನಿಗದಿತ ಸಮಯದೊಳಗೆ ಮುಗಿಸುವಂತೆ ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಸುರತ್ಕಲ್‌ನ ರೈಲ್ವೇ ಮೇಲ್ಸೇತುವೆ ಬಳಿಯಿಂದ ಎಂಆರ್‌ಪಿಎಲ್‌ ಕಾರ್ಗೋಗೇಟ್‌ವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಅನುದಾನದ 10 ಕೋ. ರೂ. ಮತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ 9.85 ಕೋ. ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ.

Advertisement

ಮೂಲಸೌಕರ್ಯಕ್ಕೆ ಒತ್ತು: ಸುರತ್ಕಲ್‌ ಕಾರ್ಗೋಗೇಟ್‌, ಗುಡ್ಡೆಕೊಪ್ಲ ಬೀಚ್‌, ಚಿತ್ರಾಪುರ ಬೀಚ್‌ ಪ್ರಮುಖ ರಸ್ತೆಯಾಗಿದ್ದು, ವಿಸ್ತರಣೆ ಹಾಗೂ ಕಾಂಕ್ರೀಟ್‌ ಹಾಕುವ ಕೆಲಸ ನಡೆಯುತ್ತಿದೆ. ಇದರ ಜತೆಗೆ ಮಳೆ ನೀರು ಹರಿಯುವ ತೋಡು, ಒಳಚರಂಡಿ, ಅಗತ್ಯವಿದ್ದಲ್ಲಿ ಬಸ್‌ ತಂಗುದಾಣ ನಿರ್ಮಾಣದಂತಹ ಮೂಲಸೌಕರ್ಯಕ್ಕೂ ಒತ್ತು ನೀಡಲಾಗಿದೆ. ಕಾಮಗಾರಿಗಳನ್ನು ವಿಳಂಬ ಮಾಡದೆ ಮುಗಿಸಬೇಕೆಂದು ನಿರ್ದೇಶನ ನೀಡಲಾಗಿದೆ. ತಾಂತ್ರಿಕ ಕಾರಣದಿಂದ ಸಮಸ್ಯೆಯಾದಲ್ಲಿ ಆದನ್ನು ಬಗೆ ಹರಿಸಿ ಕೆಲಸಕ್ಕೆ ವೇಗ ನೀಡಲಾಗುವುದು. –ಡಾ| ಭರತ್‌ ಶೆಟ್ಟಿ ವೈ., ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next