Advertisement
ಸುರತ್ಕಲ್‌ನಿಂದ ಪಂಪ್‌ವೆಲ್ ಸರ್ಕಲ್‌ವರೆಗಿನ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಪರ್ಯಾಯ ರಸ್ತೆಯ ಅಗತ್ಯವಿದೆ. ರಾಜ್ಯ ಸರಕಾರ 25 ಜಿಲ್ಲೆಗಳಿಗೆ ಅಗತ್ಯವಿರುವ ಬೈಪಾಸ್ ರಸ್ತೆಯ ಸಮೀಕ್ಷೆ, ಯೋಜನಾ ಕಾರ್ಯಕ್ರಮ ತಯಾರಿಕೆಗಾಗಿ ಸಂಪುಟ ಸಭೆಯಲ್ಲಿ ಅನುಮೋದಿಸಿದ 275 ಕೋಟಿ ರೂ.ನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೊಸಬೆಟ್ಟು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಶಾಸಕರು, ‘ಯೋಜನೆಯ ನೇತೃತ್ವ ವಹಿಸಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಇದರ ಉಪಯೋಗ ನಾಗರಿಕರಿಗೆ ಸಿಗುವಂತೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುವೆ. ಯೋಜನೆ ಕಾರ್ಯಗತವಾದರೆ ಎಂಆರ್‌ಪಿಎಲ್ ಕಡೆಯಿಂದ ಸುರತ್ಕಲ್ ಕಡೆಗೆ ಬರುವ ಟ್ಯಾಂಕರ್, ಲಾರಿಗಳು, ಟ್ರೇಲರ್‌ಗಳನ್ನು ಈ ಬೈಪಾಸ್ ರಸ್ತೆಯಲ್ಲಿಯೇ ಕಳುಹಿಸುವುದು ಸೂಕ್ತ’ ಎಂದರು. ನಾಗರಿಕ ಸಮಿತಿ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಬಿ.ಎನ್., ಸನಿಲ್, ಅಬ್ದುಲ್ ಹಮೀದ್ ಕಾನ, ಕಾರ್ಯದರ್ಶಿಗಳಾದ ಟಿ.ಎನ್. ರಾಘವೇಂದ್ರ, ಬಾಲಕೃಷ್ಣ ಶೆಟ್ಟಿ ಕೆ., ಯಶವಂತ ಶೆಟ್ಟಿ, ಕೋಶಾಧಿಕಾರಿ ರಮೇಶ್ ಸುರತ್ಕಲ್, ನಿರ್ದೇಶಕರಾದ ಡಾ| ಗುರುರಾಜ್, ಉಲ್ಲಾಸ್ ಶೆಟ್ಟಿ ಪೆರ್ಮುದೆ, ಲೀಲಾಧರ ಶೆಟ್ಟಿ ಕಟ್ಲ, ಸುರೇಶ್ ನಾಯಕ್, ಎಂ. ಬಾಲಕೃಷ್ಣ ಶೆಟ್ಟಿ, ಚಂದ್ರಹಾಸ ರೈ, ರೋಕಿ ಪಿಂಟೊ, ಪುಷ್ಪರಾಜ್ ಶೆಟ್ಟಿ ಮಧ್ಯ, ಬಾಲಕೃಷ್ಣ ಶೆಟ್ಟಿ ಮಧ್ಯ, ಸದಾಶಿವ ಶೆಟ್ಟಿ ಹೊಸಬೆಟ್ಟು ಮತ್ತು ಸುರತ್ಕಲ್‌ನ ಹಿರಿಯ ನಾಗರಿಕರು, ಉಪಸ್ಥಿತರಿದ್ದರು.