Advertisement
ಸುರತ್ಕಲ್ ವಿದ್ಯಾದಾಯಿನಿ ಮುಂಭಾಗದ ಮರಣ ಗುಂಡಿ ಹಲವಾರು ದಿನಗಳಿಂದ ಬಾಯ್ದೆರೆದು ನಿಂತಿತ್ತು. ಇದನ್ನು ಈ ಸಂಸ್ಥೆಯ ಸದಸ್ಯರು ರವಿವಾರ ಮುಚ್ಚುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟರು. ಇಲ್ಲಿ ರಸ್ತೆ ಹೆದ್ದಾರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಪಾಲಿಕೆ ಏನೂ ಮಾಡುವಂತಿರಲಿಲ್ಲ. ಪ್ರತಿ ಮಳೆಗಾಲ ಆರಂಭವಾದಾಗ ಹೊಂಡ ಏಳುತ್ತಿದ್ದು, ಮಳೆ ನಿಂತ ಮೇಲೂ ದುರಸ್ತಿಯಾಗುತ್ತಿಲ್ಲ. ಸಂಸ್ಥೆಯ ಉಮೇಶ್ ದೇವಾಡಿಗಇಡ್ಯಾ, ಪ್ರಜ್ವಲ್ ಶೆಟ್ಟಿ, ದಯಾನಂದ ಶೆಟ್ಟಿ ಕಡಂಬೋಡಿ, ಹೇಮಚಂದ್ರ ಶೆಟ್ಟಿ, ಗಂಗಾಧರ ಪುತ್ರನ್ ಕೃಷ್ಣಾಪುರ,
ದಯಾನಂದ ಶೆಟ್ಟಿಗಾರ್ ಕೃಷ್ಣಾಪುರ, ಮೋಹನ್‌ಕೃಷ್ಣ ಮೊದಲಾದವರು ಶ್ರಮದಾನದಲ್ಲಿ ಭಾಗಿಯಾದರು.
ಸುರತ್ಕಲ್‌ನಿಂದ ಬೈಕಂಪಾಡಿವರೆಗೆ ಹೆದ್ದಾರಿ, ಸರ್ವಿಸ್ ರಸ್ತೆ ಗಮನಿಸಿದರೆ ಯಾವರೀತಿ ಕಳಪೆ ಕಾಮಗಾರಿ ಆಗಿದೆ ಎಂದು ತಿಳಿಯುತ್ತದೆ. ಒಂದು ಮಳೆಯನ್ನೂ ಹೆದ್ದಾರಿ ತಾಳಿಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳಿಗೂ ಅಪಾಯಕಾರಿಯಾಗಿರುವ ಇದನ್ನು ತಾತ್ಕಾಲಿಕವಾಗಿಯಾದರೂ ದುರಸ್ತಿ ಮಾಡಿ ಎಂದು ಕೇಳಿಕೊಂಡರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮ್ಮ ಸಂಸ್ಥೆಯ ಸದಸ್ಯರು ಹಾಗೂ ಸ್ಥಳೀಯ ಕೆಲವು ರಿಕ್ಷಾ ಚಾಲಕರು ದಿನ ಸಾರ್ವಜನಿಕರ ಹಿತದೃಷ್ಟಿಯಿಂದ ಈ ದುರಸ್ತಿಗೆ ಮುಂದಾದೆವು. –ಎನ್.ಎಸ್. ಉಮೇಶ್ ದೇವಾಡಿಗ ಇಡ್ಯಾ, ಸ್ಥಾಪಕಾಧ್ಯಕ್ಷರು,
ಆಪತ್ಭಾಂಧವ ಸಮಾಜ ಸೇವಾ ಸಂಸ್ಥೆ, ಸುರತ್ಕಲ್