Advertisement

ಮಳೆ-ಟ್ಯಾಂಕರ್‌ ಓಡಾಟಕ್ಕೆ ಕೊಚ್ಚಿ ಹೋದ ಕಾನಾ ಬಾಳ ರಸ್ತೆ

05:11 PM Jul 17, 2022 | Team Udayavani |

ಸುರತ್ಕಲ್‌: ಬೃಹತ್‌ ಕಂಪೆನಿಗಳ ಕೇಂದ್ರವಾಗಿರುವ ಕಾನಾ ಬಾಳದ ರಸ್ತೆ ಈ ಬಾರಿಯ ಭಾರೀ ಮಳೆ ಹಾಗೂ ಸಾವಿರಾರು ಟ್ಯಾಂಕರ್‌, ಗ್ಯಾಸ್‌ ಲಾರಿಗಳ ಓಡಾಟಕ್ಕೆ ಕೊಚ್ಚಿ ಹೋಗಿದೆ. ಇಷ್ಟಾದರೂ ಘನ ಕೈಗಾರಿಕೆಗಳು ಕನಿಷ್ಠ ತೇಪೆ ಹಚ್ಚುವ ಕಾಯಕವನ್ನೂ ಮಾಡಲು ಹಿಂದೇಟು ಹಾಕಿದ್ದು, ಸ್ಥಳೀಯ ಗ್ರಾ.ಪಂ. ಕಡೆ ಬೆರಳು ತೋರಿಸುತ್ತಿವೆ.

Advertisement

ಸುರತ್ಕಲ್‌ ರೈಲ್ವೇ ಸೇತುವೆ ಬಳಿಕ ಕಾರ್ಗೊಗೇಟ್‌ ವರೆಗೆ ರಾಜ್ಯ ಹೆದ್ದಾರಿ ಎಂದು ಗುರುತಿಸಲ್ಪಟ್ಟಿದ್ದರೂ ಪಾಲಿಕೆ ವ್ಯಾಪ್ತಿಯಲ್ಲಿ ಬರುವುದರಿಂದ ಮಳೆಗಾಲದ ಮೊದಲು ಹೊಂಡ ಮುಚ್ಚುವ ತಾತ್ಕಾಲಿಕ ದುರಸ್ತಿ ಕಾರ್ಯ ಪ್ರತೀ ವರ್ಷ ಕೈಗೊಳ್ಳಲಾಗುತ್ತಿತ್ತು. ಆದರೆ ಈಗ ಈ ರಸ್ತೆಗೆ ಶಾಶ್ವತ ಕಾಂಕ್ರೀಟ್‌ ಕಾಮಗಾರಿ ನಡೆಸುವ ಪ್ರಸ್ತಾವನೆ ಇರುವುದರಿಂದ ತೇಪೆ ಕಾರ್ಯಕ್ರಮ ಅನುದಾನ ಬಿಡುಗಡೆಯಾಗುತ್ತಿಲ್ಲ. ಹಾಗಾಗಿ ಈ ಬಾರಿ ದುರಸ್ತಿ ಕೆಲಸ ನಡೆಸದಿರುವುದರಿಂದ ಮತ್ತಷ್ಟು ಹೊಂಡಗಳು ಸೃಷ್ಟಿಯಾಗಿವೆ.

ಒಂದು ತಿಂಗಳಿನಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಈ ಭಾಗದಲ್ಲಿ ಜಲಸಿರಿ, ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ನಡೆಸಲು ರಸ್ತೆಯಂಚಿನಲ್ಲಿ ಹೊಂಡ ಅಗೆಯಲಾಗಿತ್ತು. ಮಳೆಗೆ ರಸ್ತೆಯಂಚಿನಲ್ಲಿದ್ದ ಮಣ್ಣು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಕಷ್ಟವಾದರೆ, ಇನ್ನೊಂದೆಡೆ ಟ್ಯಾಂಕರ್‌ಗಳ ಓಡಾಟಕ್ಕೆ ಡಾಮರು ಎದ್ದು ಹೋಗಿ ಹೊಂಡಗಳು ಸೃಷ್ಟಿಯಾಗಿವೆ. ಪಾದಚಾರಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ರಸ್ತೆಯುದ್ದಕ್ಕೂ ಕೆಸರು ನೀರಿನ ಸಿಂಚನವಾಗುತ್ತಿದೆ. ರಿಕ್ಷಾಗಳು ಹಾನಿಯಾಗುವ ಭೀತಿಯಿಂದ ಊರಿಗೆ ಬರಲು ಹಿಂದೇಟು ಹಾಕುತ್ತಿವೆ. ದ್ವಿಚಕ್ರ ಸವಾರರು ಜೀವ ಕೈಯ್ಯಲ್ಲಿಡುವ ಪ್ರಯಾಣಿಸುವಂತಾಗಿದೆ.

ನಿತ್ಯ ಗ್ರಾಮಕ್ಕೆ ಬರುವ ವಾಹನಗಳಿಗಿಂತ ನಾಲ್ಕು ಪಟ್ಟಿಗೂ ಅಧಿಕ ಗೂಡ್ಸ್‌ಲಾರಿ, ಟ್ಯಾಂಕರ್‌ಗಳು ಈ ಪ್ರಮುಖ ಕೈಗಾರಿಕೆ ಪ್ರಾಂಗಣಕ್ಕೆ ಸಂಚರಿಸುತ್ತವೆ. ಅಲ್ಲದೆ ಕಂಪೆ ನಿಗಳ ಸಿಬಂದಿ ಓಡಾಟ ನಡೆಸುವ ಬಸ್‌, ಕಾರು, ಜೀಪು, ಟಿಟಿ, ವಾಹನಗಳು ನಿತ್ಯ ಈ ರಸ್ತೆ ಬಳಸುತ್ತಿವೆ. ಇದರಿಂದ ರಸ್ತೆಗಳು ಕೆಟ್ಟು ಹೋಗಿವೆ.

ರಸ್ತೆ ದುರಸ್ತಿಗೆ ದುಡ್ಡು ನೀಡಿ, ಇಲ್ಲವೆ ಪರ್ಯಾಯ ರಸ್ತೆ ನಿರ್ಮಿಸಿ

Advertisement

ಬಾಳ ಪಂಚಾಯತ್‌ ವ್ಯಾಪ್ತಿಯಲ್ಲಿ ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌, ಬಿಎಎಸ್‌ಎಫ್‌, ಇನ್ನಿತರ ಪೂರಕ ಉದ್ಯಮಗಳು ನೆಲೆ ಕಂಡಿವೆ. ಎಲ್ಲರೂ ಸೇರಿ ಪಂಚಾಯತ್‌ನ ರಸ್ತೆ ದುರಸ್ತಿಗೆ, ಚರಂಡಿ ನಿರ್ಮಾಣ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ಹಣಕಾಸು ನೆರವು ನೀಡಬೇಕು. ಇಲ್ಲದಿದ್ದಲ್ಲಿ ಪರ್ಯಾಯ ರಸ್ತೆ ನಿರ್ಮಿಸಿ ಬಳಸಿಕೊಳ್ಳಿ ಎಂದು ಪಂಚಾಯತ್‌ ಸೂಚನೆ ನೀಡಲು ಮುಂದಾಗಿದೆ. ಚರಂಡಿ ನಿರ್ಮಾಣಕ್ಕೆ 75 ಲ.ರೂ. ನೆರವು ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರೂ ಸೂಕ್ತ ಸ್ಪಂದನೆ ಈವರೆಗೆ ವ್ಯಕ್ತವಾಗಿಲ್ಲ. ಅಲ್ಲದೆ ಶೇ. 50ರಷ್ಟು ತೆರಿಗೆ ವಿಧಿಸಿ ಪಂಚಾಯತ್‌ ಆದೇಶ ಹೊರಡಿಸಿದ್ದರೂ ಕಟ್ಟಲು ಹಿಂದೆ ಮುಂದೆ ನೋಡುತ್ತಿವೆ. ಆದರೆ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ (ಸಿಎಸ್‌ಆರ್‌)ರಸ್ತೆ, ಚರಂಡಿ, ನೀರು ಮತ್ತಿತರ ಮೂಲಸೌಕರ್ಯಕ್ಕೆ ಆರ್ಥಿಕ ನೆರವು ನೀಡಲು ಬರುವುದಿಲ್ಲ ಎಂಬುದು ಕಂಪೆ ನಿಗಳ ಸಬೂಬು. ಇತ್ತ ಸ್ಥಳೀಯ ಕಂಪೆ ನಿಗಳ ಹಾಗೂ ಪಾಲಿಕೆಯ ವಿಳಂಬ ನೀತಿಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ ಎನ್ನುತ್ತಾರೆ ಪಂಚಾಯತ್‌ ಸದಸ್ಯ ಪದ್ಮನಾಭ ಸಾಲ್ಯಾನ್‌ ಅವರು.

ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ವಿಳಂಬ

ಈ ಭಾಗದಲ್ಲಿ ಶಾಶ್ವತ ರಸ್ತೆ ನಿರ್ಮಾಣ ಯೋಜನೆಯಡಿ ಕಾಂಕ್ರೀ ಟ್‌ ಹಾಕಲು ನಿರ್ಧರಿಸಲಾಗಿತ್ತು. 2 ಬಾರಿ ಟೆಂಡರು ರದ್ದಾಗಿದ್ದು, ಇದೀಗ ಮೂರನೇ ಬಾರಿ ಟೆಂಡರು ಪ್ರಕ್ರಿಯೆ ನಡೆಯುತ್ತಿದೆ. ಲೋಕೋ ಪಯೋಗಿ ಇಲಾಖೆಯಿಂದ 10 ಕೋ.ರೂ. ಮತ್ತು 30 ಕೋ.ರೂ. ಅನು ದಾ ನದ ಮೂಲಕ ಒಟ್ಟು 2 ಹಂತದಲ್ಲಿ ಕಾಮಗಾರಿ ಕೈಗೊಳ್ಳಲು ಸಿದ್ಧತೆ ನಡೆದಿದೆ. ಆದರೂ 9 ತಿಂಗಳುಗಳಿಂದ ಇಲ್ಲಿನ ರಸ್ತೆ ನಿರ್ಮಾಣಕ್ಕೆ ಮುಹೂರ್ತ ಕೂಡಿ ಬಂದಿಲ್ಲ.

75 ಲಕ್ಷ ರೂ. ಗಳಿಗೆ ಬೇಡಿಕೆ: ಸ್ಥಳೀಯ ಕಂಪೆ ನಿಗಳು ಆದಾಯ ದುಪ್ಪಟ್ಟು ಗಳಿಸಿದರೂ ಪಂಚಾಯತ್‌ನ ರಸ್ತೆ, ಚರಂಡಿ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ. ಈ ಕಂಪೆನಿಗಳಿಂದ ರಸ್ತೆ ಕೆಟ್ಟು ಹೋಗುತ್ತಿದ್ದು ನಮ್ಮ ಗ್ರಾಮಸ್ಥರು ಕಷ್ಟ ಅನುಭವಿಸುತ್ತಿದ್ದಾರೆ. ಈ ಬಾರಿ ಕಂಪೆನಿಗಳು ಸುತ್ತಮುತ್ತಲಿನ ಚರಂಡಿ ನಿರ್ಮಾಣಕ್ಕೆ 75 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಮಂಡಿಸಿದ್ದೇವೆ. –ಶಂಕರ ಜೋಗಿ, ಉಪಾಧ್ಯಕ್ಷರು, ಬಾಳ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next