Advertisement

ಹೋಂ ಕ್ವಾರಂಟೈನ್‌ ವಾಚ್‌ ಮೊಬೈಲ್‌ ಆ್ಯಪ್‌ ತರಬೇತಿ

06:11 PM May 02, 2020 | Naveen |

ಸುರಪುರ: ನಗರದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಕ್ವಾರಂಟೈನ್‌ ವಾಚ್‌ ಮೊಬೈಲ್‌ ಆ್ಯಪ್‌ ಕುರಿತು ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಿಗರು, ನಗರಸಭೆ ಮತ್ತು ಪುರಸಭೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.

Advertisement

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌, ಹೋಂ ಕ್ವಾರಂಟೈನ್‌ ನಿಗಾಕ್ಕೆ ಮೊಬೈಲ್‌ ಆ್ಯಪ್‌ ಸಹಕಾರಿಯಾಗಿದೆ. ಕೊರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಹೋಂ ಕ್ವಾರಂಟೈನ್‌ ನಲ್ಲಿರುವವರ ಮೇಲೆ ನಿಗಾವಹಿಸಲು ರಾಜ್ಯ ಸರಕಾರ ಹೋಂ ಕ್ವಾರಂಟೈನ್‌ ವಾಚ್‌ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ ಎಂದು ಹೇಳಿದರು.

ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹೋಂ ಕ್ವಾರಂಟೈನ್‌ ವಾಚ್‌ ಮೊಬೈಲ್‌ ಆ್ಯಪ್‌ ಕುರಿತು ಮಾಹಿತಿ ನೀಡಿದರು. ಎಸ್‌ಪಿ ಋಷಿಕೇಶ್‌ ಭಾಗವಾನ್‌, ಸುರಪುರ ತಹಶೀಲ್ದಾರ್‌ ನಿಂಗಣ್ಣ ಬಿರಾದಾರ, ಹುಣಸಗಿ ತಹಶೀಲ್ದಾರ್‌ ವಿನಾಯಕ ಪಾಟೀಲ, ನಗರಸಭೆ ಪೌರಾಯುಕ್ತ ಜೀವನ ಕಟ್ಟಿಮನಿ, ಕೆಂಭಾವಿ ಪುರಸಭೆ ಮುಖ್ಯಾಧಿಕಾರಿ ದೇವಿಂದ್ರ ಹೆಗ್ಗಡೆ, ಕಕ್ಕೇರಾ ಪುರಸಭೆ ಮುಖ್ಯಾ ಧಿಕಾರಿ ಆದಪ್ಪ ಸುರಪುರಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next