Advertisement

ನಮ್ಮದೂ ಸಮ್ಮಿಶ್ರ ಸರ್ಕಾರವಿದ್ದಂತೆ: ಸುರಪುರ ಶಾಸಕ ನರಸಿಂಹ ನಾಯಕ

03:59 PM Jan 26, 2021 | Team Udayavani |

ಯಾದಗಿರಿ: ನಮ್ಮದೂ ಒಂದು ತರಹ ಸಮ್ಮಿಶ್ರ ಸರ್ಕಾರವಿದ್ದಂತೆ ಎಂದು ಸುರಪುರ ಶಾಸಕ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹ ನಾಯಕ ಹೇಳಿದರು.

Advertisement

ಸರ್ಕಾರದ ಬಗ್ಗೆ ಅತೃಪ್ತಿ, ಶಾಸಕ ರೇಣುಕಾಚಾರ್ಯ ಅವರು ನಡೆಸುವ ಅತೃಪ್ತರ ಸಭೆಯಲ್ಲಿ ಭಾಗವಹಿಸುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ ಅವರು, ಯಾವ ಸಭೆಯೂ ಇಲ್ಲ. ಯಾರು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ತಡೆಗೆ ಅಗತ್ಯ ಕ್ರಮ: ಸಚಿವ ಮುರುಗೇಶ್ ನಿರಾಣಿ

ತಮ್ಮ ನಿಗಮ ಮಂಡಳಿಯ ಮೇಲೆ ಯಾರೋ ಕಣ್ಣಿಟ್ಟಿದ್ದಾರೆ ಅದಕ್ಕಾಗಿಯೇ ಹೇಗೆಲ್ಲಾ ಊಹಾಪೋಹಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು. ಸರ್ಕಾರ ರಚನೆಗೆ ಮೊದಲು ಆನಂದ್ ಸಿಂಗ್ ಅವರೇ ರಾಜೀನಾಮೆ ನೀಡಿದ್ದು, ಅವರು ಮುಖ್ಯಮಂತ್ರಿಗಳು ನೀಡಿದ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಹೇಳಿದ್ದಾಗಿ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಸೇರಿದ ವಾರದೊಳಗೆ ಉದ್ಯಮಿ ಮಂಜುನಾಥ್‌ ಯೂ ಟರ್ನ್

Advertisement

ನಮ್ಮದು ಏನಿದ್ದರೂ ಓಪನ್, ನೇರವಾಗಿರುತ್ತದೆ ಎಂದವರು, ಕಲ್ಯಾಣ ಕರ್ನಾಟಕದಲ್ಲಿ 18-19 ಶಾಸಕರಿದ್ದರೂ ಸಚಿವ ಸ್ಥಾನ ನೀಡದಿರುವುದು ಈ ಪ್ರಾಂತ್ಯಕ್ಕೆ ಆಗಿರುವ ಅನ್ಯಾಯ. ಇದನ್ನು ಪಕ್ಷ ಮತ್ತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲಾಗುವುದು. ಮಗು ಅತ್ತರೇ ತಾಯಿ ಹಾಲುಣಿಸುವಳು ಎನ್ನುವ ಗಾದೆ ಸತ್ಯವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next