ಸುರಪುರ: ಲಾಕ್‌ಡೌನ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲೂಕು ಆಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ನಗರದಲ್ಲಿ ಕೆಲ ವಾರ್ಡ್‌ಗಳನ್ನು ಕಂಟೋನ್ಮೆಂಟ್ ಝೋನ್‌ಗಳನಾಗಿ ರಚನೆ ಮಾಡಿದೆ. ಮಂಗಳವಾರ ನಗರದೆಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು, ವಾಹನಗಳ ಸಂಚಾರ ಸಂಪೂರ್ಣನಿಷೇಧಿಸಲಾಗಿದೆ .
ಮೊದಲ ಹಂತವಾಗಿ ಸಂ. 1, 2, 14 ಮತ್ತು 29, 30, 31 ವಾರ್ಡ್ ಗಳನ್ನು ಕಂಟೇನ್ಮೆಂಟ್ ಝೋನ್ ಗಳಾಗಿ ರಚಿಸಲಾಗಿತ್ತು. ಮಂಗಳವಾರ ತಿಮಾಪುರದ ಮಹಿಬೂ ಸುಭಾನಿ, ತಿಮ್ಮಪುರ, ದೂಳಪೇಟ, ವೆಂಕಟಾಪುರ ವಾರ್ಡ್‌ಗಳನ್ನು ಕಂಟೋನ್ಮೆಂಟ್ ಝೂನ್‌ಗಳನ್ನಾಗಿ ರಚಿಸಲಾಗಿದೆ. ಕೃಷಿ ಮತ್ತು ಅಗತ್ಯ ಸೇವೆ ವಾಹನಗಳನ್ನು ಹೊರತುಪಡಿಸಿ ಬೈಕ್, ಅಟೋ ಸೇರಿದಂತೆ ಎಲ್ಲ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ವಾಹನಗಳನ್ನು ಸೀಜ್ ಮಾಡಿದ್ದರೂ ಜನರ ಅನ ಗತ್ಯ ಓಡಾಟ ನಡದೇ ಇತ್ತು. ಇದುವರೆಗೂ ಜಿಲ್ಲೆ ಮತ್ತು ತಾಲೂಕಿನಲ್ಲಿ ಯಾವುದೇ ಸೋಂಕಿತ ಪ್ರಕರಣ ಕಂಡು ಬಂದಿಲ್ಲ. ಇದುವರೆಗೂ ಜಿಲ್ಲೆ ಸುರಕ್ಷಿತವಾಗಿದೆ. ಲಾಕ್‌ಡೌನ್ ಕೊನೆ ಹಂತದಲ್ಲಿ ಇರುವುದರಿಂದ ಯಾವುದೇ ಸೋಂಕಿತರು ಒಳ ನುಸುಳದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಜಿಲ್ಲಾ ಧಿಕಾರಿ ನಿರ್ದೇಶನದ ಮೇರೆಗೆ ಸುರಕ್ಷತೆ ಉಳಿಸಿಕೊಳ್ಳಲು ಲಾಕ್‌ಡೌನ್‌ನ್ನು ಇನ್ನಷ್ಟು ಕಠಿಣ ಗೊಳಿಸಲು ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಹಶೀಲ್ದಾರ್ ನಿಂಗಣ್ಣ ಬಿರಾದಾರ ತಿಳಿಸಿದರು. ಸಾರ್ವಜನಿಕರು ನೋಡಲ್ ಅಧಿಕಾರಿಗಳ ದೂರವಾಣಿಗಳಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಮನಿ ತಿಳಿಸಿದರು.
ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆ: ಅನಂತ 9036541509, ಸೈಯದ್ ಮಕ್ಸೂದ್‌ಬುಕಾರಿ, 9448765251.
ಬಾಬೂ 9449725766, ಸ್ವಯಂ ಸೇವಕರು: ಶಂಕರ 9886176193, ಪ್ರಶಾಂತ 9972782227, ಬಲಭೀಮ 9731909670, ರಮೇಶ 9535106343